ತಳವಾರ ಸಮುದಾಯದವರಿಂದ ಶಾಸಕರಿಗೆ ಮನವಿ
ತಳವಾರ ಸಮುದಾಯದವರಿಂದ ಶಾಸಕರಿಗೆ ಮನವಿ
ರಬಕವಿ-ಬನಹಟ್ಟಿಅ31: ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರ ಬಗ್ಗೆ ಅಧಿವೇಶನದಲ್ಲಿ ಮಾತನಾಡಿ ಗೊಂದಲವನ್ನು ಸರಿ ಮಾಡಿಕೊಡಬೇಕು ಎಂದು ಆಗ್ರಹಿಸಿ ರಬಕವಿ-ಬನಹಟ್ಟಿ ತಾಲೂಕು ತಳವಾರ ಸಮಾಜದವರು ಇಂದು ರವಿವಾರ ನಗರದ ಶಾಸಕ ಸಿದ್ದು ಸವದಿ ನಿವಾಸಕ್ಕೆ ತೆರಳಿ ಮನವಿ ಅರ್ಪಿಸಿದರು.
ತಳವಾರ ಸಮಾಜವನ್ನು ಕೇಂದ್ರ ಸರಕಾರವು ಪರಿಶಿಷ್ಠ ಪಂಗಡಕ್ಕೆ ಸೇರಿಸಿದರ ಬಗ್ಗೆ ನಮಗೆ ಹೆಮ್ಮೆಯಾಗಿದೆ. ಆದರೆ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯವರು ವಿನಾಕಾರಣ ಗೊಂದಲವನ್ನು ಸೃಷ್ಠಿಸಿ ನಮ್ಮ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದು ಅದರ ಬಗ್ಗೆ ನಮಗೆ ತುಂಬಾ ಬೇಸರವಾಗಿದ್ದು, ಇದೆಲ್ಲದರ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ತಾವು ನಮ್ಮ ಸಮಾಜದ ಪರವಾಗಿ ಧ್ವನಿ ಎತ್ತಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದಕ್ಕೆ ಶಾಸಕ ಸಿದ್ದು ಸವದಿ ತಳವಾರ ಸಮಾಜದ ಮನವಿಗೆ ಸ್ಪಂದಿಸಿ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಈ ಕುರಿತು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಯಲ್ಲಪ್ಪ ತಳವಾರ, ಎಂ. ಎಸ್. ತಳವಾರ, ಶಿವಾನಂದ ದೇಸಾಯಿ, ಅರ್ಜುನ ಪಣದಿ, ಶಿವರಾಯ ಕುಸಬಿ, ಕಾಡಪ್ಪ ತಳವಾರ, ನಿಂಗಪ್ಪ ತಳವಾರ, ಮುತ್ತಪ್ಪ ತಳವಾರ, ನಾಗರಾಜ ಪೂಜಾರಿ, ಮುತ್ತಪ್ಪ ತಮದಡ್ಡಿ, ಸುನೀಲ ತಳವಾರ, ಸಿದ್ರಾಮ ದರೂರ, ಪರಸಪ್ಪ ಗುಡೆನ್ನವರ, ಹನಮಂತ ತಳವಾರ, ಭೀಮಸಿ ತಳವಾರ, ಸುಭಾಸ ತಳವಾರ, ಸತೀಶ ತಳವಾರ ಸೇರಿದಂತೆ ಅನೇಕರು ಇದ್ದರು.


Social Plugin