ಅನುದಾನರಹಿತ ಶಿಕ್ಷಕರ ಗೋಳು ಕೇಳುವವರಾರು? *ಶಾಲೆ ಬಿಟ್ಟು ಗೌಂಡಿ, ನೇಕಾರನಾಗಿ ದುಡಿಮೆಯಲ್ಲಿರುವ ಶಿಕ್ಷಕರು *ಆಹಾರ ಕಿಟ್‍ಗಳೇ ಶಿಕ್ಷಕರಿಗೆ ಆಧಾರ.-ಟಿ. ಚಂದ್ರಶೇಖರ...ರಬಕವಿ-ಬನಹಟ್ಟಿ- ಕೊವೀಡ್-19ನಿಂದಾಗಿ ಲಾಕ್‍ಡೌನ್ ಜಾರಿಯಾದಾಗಿನಿಂದ ಖಾಸಗಿ ಹಾಗು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುವ ಬೋಧಕ ಮತ್ತು ಬೋಧಕೇತರ ಅನುದಾನರಹಿತ ಶಿಕ್ಷಕರು ಸಿಬ್ಬಂದಿಗಳ ಗೋಳು ಚಿಂತಾಜನಕವಾಗಿದೆ. ಎಲ್ಲರೂ ಮನೆ ಕಟ್ಟುವ ಕೆಲಸ, ನೇಕಾರಿಕೆ, ಪುಸ್ತಕ ಮಾರಾಟ, ರಐತರೂ, ಕೂಲಿ ಕಾರ್ಮಿಕರು ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿಗಳಾಗಿ ಪರಿವರ್ತನೆ ಹೊಂದಿರುವದು ಸಮಾಜದಲ್ಲಿನ ಆತಂಕಕ್ಕೆ ಕಾರಣವಾಗಿದೆ. 

 
ಅನುದಾನರಹಿತ ಶಿಕ್ಷಕರು ಇದೀಗ ನೇಕಾರಿಕೆ ಹಾಗು ಪುಸ್ತಕ ಮಾರಾಟದಲ್ಲಿ ತೊಡಗಿದರೆ, ಇನ್ನೂ ಕೆಲವರು ಮನೆ ಕಟ್ಟಡ ಕೆಲಸ ಹಾಗು ತಿಂಡಿ ಪದಾರ್ಥ ತಯಾರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.

ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)... 

 ಅನುದಾನರಹಿತ ಶಿಕ್ಷಕರ ಗೋಳು ಕೇಳುವವರಾರು? 
*ಶಾಲೆ ಬಿಟ್ಟು ಗೌಂಡಿ, ನೇಕಾರನಾಗಿ ದುಡಿಮೆಯಲ್ಲಿರುವ ಶಿಕ್ಷಕರು *ಆಹಾರ ಕಿಟ್‍ಗಳೇ ಶಿಕ್ಷಕರಿಗೆ ಆಧಾರ. -ಟಿ. ಚಂದ್ರಶೇಖರ 
ರಬಕವಿ-ಬನಹಟ್ಟಿ ಕೊವೀಡ್-19ನಿಂದಾಗಿ ಲಾಕ್‍ಡೌನ್ ಜಾರಿಯಾದಾಗಿನಿಂದ ಖಾಸಗಿ ಹಾಗು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುವ ಬೋಧಕ ಮತ್ತು ಬೋಧಕೇತರ ಅನುದಾನರಹಿತ ಶಿಕ್ಷಕರು ಸಿಬ್ಬಂದಿಗಳ ಗೋಳು ಚಿಂತಾಜನಕವಾಗಿದೆ. ಎಲ್ಲರೂ ಮನೆ ಕಟ್ಟುವ ಕೆಲಸ, ನೇಕಾರಿಕೆ, ಪುಸ್ತಕ ಮಾರಾಟ, ರಐತರೂ, ಕೂಲಿ ಕಾರ್ಮಿಕರು ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿಗಳಾಗಿ ಪರಿವರ್ತನೆ ಹೊಂದಿರುವದು ಸಮಾಜದಲ್ಲಿನ ಆತಂಕಕ್ಕೆ ಕಾರಣವಾಗಿದೆ. ಈ ವರ್ಗ ಉಪವಾಸ ಬಿದ್ದರೂ, ಕಷ್ಟವಿದ್ದರೂ ಯಾರ ಮುಂದೆ ಮನವಿ, ಬೇಡಿಕೆ ಇಡಲು ಮುಜುಗರ, ಹಿಂಜರಿಕೆ ಹಾಗು ಸಂಘಟನೆ ಕೊರತೆಯಿಂದ ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಜನರು ಅನುದಾನರಹಿತ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇವರ ಕುಟುಂಬ ನಿರ್ವಹಣೆ ಒಂದು ಸವಾಲಾಗಿದ್ದು ಲಾಕ್‍ಡೌನ್ ಪೂರ್ವ ಸಂಬಳ ಪಡೆಯುತ್ತಿದ್ದ 5 ರಿಂದ 12 ಸಾವಿರ ಸಂಬಳ ನಾಲ್ಕೈದು ತಿಂಗಳಿಂದ ನಿಂತೇ ಹೋಗಿದೆ. ಶಿಕ್ಷಕರು ತಮ್ಮ ಮೂಲ ವೃತ್ತಿ ಬಿಟ್ಟು ಅನ್ಯ ಮಾರ್ಗದತ್ತ ಮುಖ ಮಾಡಿದ್ದು, ಬದುಕು ಸಾಗಿಸುತ್ತಿರುವದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ. ರಬಕವಿ-ಬನಹಟ್ಟಿ ತಾಲೂಕಿನಲ್ಲಿ 200 ಕ್ಕೂ ಅಧಿಕ ಶಿಕ್ಷಕರಿದ್ದಾರೆ. ಸರ್ಕಾರಕ್ಕೆ ಹಲವಾರು ಬಾರಿ ಮನವಿ, ಆಗ್ರಹ ಮಾಡಿದರೂ ಪ್ರಯೋಜನವಾಗಿಲ್ಲವೆನ್ನುತ್ತಾರೆ ಸಂಘದ ಅಧ್ಯಕ್ಷ ಶಿವಕುಮಾರ ಗಣೇಶನವರ. ಇದೀಗ ಶಾಲೆಗಳು ಮುಚ್ಚಿದ್ದು, ಶಿಕ್ಷಕರಿಗೆ ವೇತನ ಸಿಗದೆ ಅವರ ಜೀವನ ಬೀದಿಗೆ ಬಂದಿದೆ. ಕಳೆದ ನಾಲ್ಕೈದು ತಿಂಗಳಿಂದ ಕೆಲ ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳಿಂದ ದೊರಕುತ್ತಿರುವ ಆಹಾರ ಕಿಟ್‍ಗಳೇ ಇವರಿಗೆ ಆಧಾರವಾಗಿದೆ. ಸರ್ಕಾರ ವಿಶೇಷ ಪ್ಯಾಕೇಜ್ ನೀಡುವದಾಗಿ ಹೇಳಿರುವದು ಕೇವಲ ಘೋಷಣೆಯಾಗಿಯೇ ಉಳಿದಿದ್ದು, ಇಲ್ಲಿಯವರೆಗೂ ಯಾವದೇ ಅನುದಾನ ದೊರಕಿಲ್ಲವೆನ್ನುತ್ತಾರೆ ಗಣೇಶನವರ. ಪ್ಯಾಕೇಜ್ ಜಾರಿಯಾಗಲಿ: ಸರ್ಕಾರದಿಂದ ವಿಶೇಷ ಪ್ಯಾಕೇಜ್ ಒದಗಿಸುವ ಮೂಲಕ ಶಾಲಾ-ಕಾಲೇಜುಗಳಿಂದ ಅರ್ಧ ವೇತನವನ್ನಾದರೂ ನೀಡುವ ಮೂಲಕ ಅನುದಾನರಹಿತ ಶಿಕ್ಷಕರನ್ನು ಗಮನಿಸಬೇಕಿದೆ ಎಂದು ಶಿಕ್ಷಕರ ಒಕ್ಕೊರಲಿನ ಕೂಗಾಗಿದೆ. ದಿ.5 ರಂದು ಬೃಹತ್ ಪ್ರತಿಭಟನೆ: ರಬಕವಿ-ಬನಹಟ್ಟಿ ತಾಲೂಕು ವ್ಯಾಪ್ತಿಯ ಅನುದಾನರಹಿತ ಶಿಕ್ಷಕರಿಂದ ಬೃಹತ್ ಪ್ರತಿಭಟನೆಯನ್ನು ತಹಶೀಲ್ದಾರ ಕಚೇರಿವರೆಗೆ ನಡೆಸಲಾಗುವದೆಂದು ಸಂಘಟನೆ ತಿಳಿಸಿದೆ. ಗೌರವ ಧನ, ವೇತನ, ಪ್ಯಾಕೇಜ್ ಸೇರಿದಂತೆ ಇತರೆ ಯೋಜನೆಗಳು ಜಾರಿಯಾಗುವಂತೆ ಮನವಿಯೊಂದಿಗೆ ಸರ್ಕಾರವನ್ನು ಒತ್ತಾಯಿಸಲಾಗುವದೆಂದು ಸಂಘ ತಿಳಿಸಿದೆ. ` ಶಾಲೆ ದಿನಗಳಲ್ಲಿ 7 ಸಾವಿರ ರೂ. ವೇತನ ದೊರಕುತ್ತಿತ್ತು. ಅದರಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದೆವು. ಇದೀಗ ಐದಾರು ತಿಂಗಳಿಂದ ಹೊಟ್ಟೆ ಹಿಟ್ಟಿಲ್ಲದ ಕಾರಣ ನೇಯ್ಗೆಯೊಂದಿಗೆ ಬದುಕು ಸಾಗಿಸುತ್ತಿದ್ದೇನೆ.’---- ರವಿ ಆಸಂಗಿ, ಅನುದಾನರಹಿತ ಶಿಕ್ಷಕ. `ಮನೆ-ಮನೆಗೆ ತೆರಳಿ ಪುಸ್ತಕಗಳನ್ನು ಮಾರಾಟ ಮಾಡುತ್ತ ಬಂದ ಲಾಭದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ಸ್ಥಿತಿ ಬಂದಿದೆ. ಜಾಗತಿಕರಣದಲ್ಲಿ ಪುಸ್ತಕ ಮಾರಾಟವೂ ಸವಾಲಾಗಿದೆ. ಬದುಕು ಚಿಂತಾಜನಕವಾಗಿದ್ದು ಸರ್ಕಾರ ನಮ್ಮತ್ತ ಕಣ್ತೆರೆಯಬೇಕು’.--- ರವೀಂದ್ರ ಲುಕ್ಕ, ಅನುದಾನರಹಿತ ಶಿಕ್ಷಕ.

ಅನುದಾನರಹಿತ ಶಿಕ್ಷಕರು ಇದೀಗ ನೇಕಾರಿಕೆ ಹಾಗು ಪುಸ್ತಕ ಮಾರಾಟದಲ್ಲಿ ತೊಡಗಿದರೆ, ಇನ್ನೂ ಕೆಲವರು ಮನೆ ಕಟ್ಟಡ ಕೆಲಸ ಹಾಗು ತಿಂಡಿ ಪದಾರ್ಥ ತಯಾರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.