ಧನಪಾಲ ಸವದಿ ಇವರಿಗೆ ಶ್ರದ್ಧಾಂಜಲಿ ಸಭೆ...ತೇರದಾಳ : ಭಾಜಪ ನಗರ ಘಟಕದ ಮಾಜಿ ಅಧ್ಯಕ್ಷ, ಪುರಸಭೆ ಮಾಜಿ ಸದಸ್ಯ ಹಾಗೂ ಟಿಎಪಿಸಿಎಂಎಸ್ ಸದಸ್ಯರಾದ ಧನಪಾಲ ಸವದಿ ಇವರು ಅಗಲಿಕೆ ತುಂಬಲಾರದ ನಷ್ಟವಾಗಿದೆ. ಇವರ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನ ಮೆಚ್ಚುಗೆ ಪಡೆದಿದ್ದರು ಎಂದು ಭಾಜಪ ಮುಖಂಡ ಸುರೇಶ ರೇಣಕೆ ಹೇಳಿದರು.

ತೇರದಾಳ ಪಟ್ಟಣದ ಕನ್ನಡ ಶಾಲೆಯ ಹತ್ತಿರ ನಗರ ಘಟಕ ಮಾಜಿ ಅಧ್ಯಕ್ಷ ದಿ. ಧನಪಾಲ ಸವದಿ ಇವರಿಗೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡ ಪ್ರಮುಖರು.


ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)... 

ಧನಪಾಲ ಸವದಿ ಇವರಿಗೆ ಶ್ರದ್ಧಾಂಜಲಿ ಸಭೆ 
ತೇರದಾಳ : ಭಾಜಪ ನಗರ ಘಟಕದ ಮಾಜಿ ಅಧ್ಯಕ್ಷ, ಪುರಸಭೆ ಮಾಜಿ ಸದಸ್ಯ ಹಾಗೂ ಟಿಎಪಿಸಿಎಂಎಸ್ ಸದಸ್ಯರಾದ ಧನಪಾಲ ಸವದಿ ಇವರು ಅಗಲಿಕೆ ತುಂಬಲಾರದ ನಷ್ಟವಾಗಿದೆ. ಇವರ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನ ಮೆಚ್ಚುಗೆ ಪಡೆದಿದ್ದರು ಎಂದು ಭಾಜಪ ಮುಖಂಡ ಸುರೇಶ ರೇಣಕೆ ಹೇಳಿದರು. ಪಟ್ಟಣದ ಕನ್ನಡ ಶಾಲೆಯ ಹತ್ತಿರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಭಾಜಪ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದರು. ಸಾಮಾನ್ಯ ಕಾರ್ಯಕರ್ತರಿಂದ ಶಾಸಕ ಸಂಸದರೆಲ್ಲರಿಗೂ ಬಹಳಷ್ಟು ಬೇಕಾಗಿದ್ದರು. ಸಾಮಾನ್ಯ ವ್ಯಕ್ತಿ ಅವರಲ್ಲಿಗೆ ಹೋಗಿ ತನ್ನ ಸಮಸ್ಯೆ ಬಗ್ಗೆ ಹೇಳಿದರೆ ಅದನ್ನು ಕೂಡಲೆ ಪರಿಹರಿಸುತ್ತಿದ್ದರು ಎಂದರು. ಮಲ್ಲಿನಾಥ ಬೋಳಗೊಂಡ ಮಾತನಾಡಿದರು. ಮೇಣದ ಬತ್ತಿ ಹಚ್ಚಿ, ಸವದಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿದರು. ಕೊನೆಯಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಾವೀರ ಕೊಕಟನೂರ, ಶೀತಲ ಬೋಳಗೊಂಡ, ನಿಂಗಪ್ಪ ಮಾಲಗಾವಿ, ಶೀತಲ ಘೂಳನ್ನವರ, ಶ್ರೀಶೈಲ ತೆಳಗಿನಮನಿ, ವಿರಾಜ ಬಂಕಾಪೂರ, ಸಂಗಮೇಶ ಕಾಲತಿಪ್ಪಿ, ಸಿದ್ದು ಅಮ್ಮಣಗಿ, ಸುರೇಶ ಪರೀಟ, ಭೀಮಶಿ ಹಿರೇಕುರುಬರ, ಪ್ರಕಾಶ ಹೊಸಮನಿ ಸೇರಿದಂತೆ ಇನ್ನಿತರರು ಇದ್ದರು.