ರಬಕವಿ ಮಲ್ಲಿಕಾರ್ಜುನ ದೇವರ ಜಾತ್ರೆ ರದ್ದು. ರಬಕವಿ-ಬನಹಟ್ಟಿ,ಅ8: ಪ್ರತಿ ವರ್ಷ ವಿಜ್ರಂಭಣೆಯಿಂದ ನಡೆಯುತ್ತಿದ್ದ ಈ ಭಾಗದಲ್ಲಿಯೇ ದೊಡ್ಡ ಜಾತ್ರೆಯಾದ ರಬಕವಿ ಶ್ರೀ ಮಲ್ಲಿಕಾರ್ಜುನ ಹಾಗೂ ಮಹಾದೇವರ ಜಾತ್ರೆಯನ್ನು ಕೊರೊನಾ ವೈರಸ್ ಹಾವಳಿ ಹೆಚ್ಚಾಗದ್ದರಿಂದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಶ್ರೀ ಶಂಕರಲಿಂಗ ಟ್ರಸ್ಟನ ಅಧ್ಯಕ್ಷ ಬಾಲಚಂದ್ರ ಉಮದಿ ಅಣ್ಣನವರು ತಿಳಿಸಿದ್ದಾರೆ. ಶನಿವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಅ.10 ರಂದು ಸಂಜೆ 7 ಕ್ಕೆ ನಡೆಯಲಿರುವ ರಥೋತ್ಸವ ಹಾಗೂ 11 ರಂದು ಸಂಜೆ 4 ಕ್ಕೆ ಜರುಗುವ ಜಂಗಿ ನಿಖಾಲಿ ಕುಸ್ತಿಗಳು, 12 ರಂದು ಜರುಗಲಿರುವ ಕಳಸೋತ್ಸವ, ಸಂಭಾಳವಾದನ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಸಂಪೂರ್ಣ ರದ್ದಾಗಿರುತ್ತವೆ. ಅದರಂತೆ ಸ್ಥಳಿಯ ಭಕ್ತರು ಹಾಗೂ ಪರೂರಿನ ಭಕ್ತರು ಯಾರೂ ದೇವಸ್ಥಾನಕ್ಕೆ ಬಂದು ಕಾಯಿ, ನೈವೇಧ್ಯ ಅರ್ಪಿಸಲೂ ಸಹ ಬರಬಾರದು. ಸರ್ಕಾರ ಆದೇಶದಂತೆ ಟ್ರಸ್ಟ್ ಎಲ್ಲಾ ಕಾನೂನು ಸಲಹೆಗಳನ್ನು ಪಾಲಿಸುತ್ತಿದ್ದು ಭಕ್ತರು ಸಹರಿಸಬೇಕು. ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಯ ಅನೇಕ ದೇವಸ್ಥಾನಗಳಿಂದ ನೂರಾರು ಪಲ್ಲಕ್ಕಿಗಳ ಸೇವಕರೂ ಸಹ ಈ ವರ್ಷ ಬರಬಾರದು ಎಂದು ಉಮದಿಯವರು ಮನವಿ ಮಾಡಿz

 

ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +೯೧ ೯೯೦೨೫೨೩೬೯೮...)... 

 ರಬಕವಿ-ಬನಹಟ್ಟಿ,ಅ8: ಪ್ರತಿ ವರ್ಷ ವಿಜ್ರಂಭಣೆಯಿಂದ ನಡೆಯುತ್ತಿದ್ದ ಈ ಭಾಗದಲ್ಲಿಯೇ ದೊಡ್ಡ ಜಾತ್ರೆಯಾದ ರಬಕವಿ ಶ್ರೀ ಮಲ್ಲಿಕಾರ್ಜುನ ಹಾಗೂ ಮಹಾದೇವರ ಜಾತ್ರೆಯನ್ನು ಕೊರೊನಾ ವೈರಸ್ ಹಾವಳಿ ಹೆಚ್ಚಾಗದ್ದರಿಂದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಶ್ರೀ ಶಂಕರಲಿಂಗ ಟ್ರಸ್ಟನ ಅಧ್ಯಕ್ಷ ಬಾಲಚಂದ್ರ ಉಮದಿ ಅಣ್ಣನವರು ತಿಳಿಸಿದ್ದಾರೆ. ಶನಿವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಅ.10 ರಂದು ಸಂಜೆ 7 ಕ್ಕೆ ನಡೆಯಲಿರುವ ರಥೋತ್ಸವ ಹಾಗೂ 11 ರಂದು ಸಂಜೆ 4 ಕ್ಕೆ ಜರುಗುವ ಜಂಗಿ ನಿಖಾಲಿ ಕುಸ್ತಿಗಳು, 12 ರಂದು ಜರುಗಲಿರುವ ಕಳಸೋತ್ಸವ, ಸಂಭಾಳವಾದನ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಸಂಪೂರ್ಣ ರದ್ದಾಗಿರುತ್ತವೆ. ಅದರಂತೆ ಸ್ಥಳಿಯ ಭಕ್ತರು ಹಾಗೂ ಪರೂರಿನ ಭಕ್ತರು ಯಾರೂ ದೇವಸ್ಥಾನಕ್ಕೆ ಬಂದು ಕಾಯಿ, ನೈವೇಧ್ಯ ಅರ್ಪಿಸಲೂ ಸಹ ಬರಬಾರದು. ಸರ್ಕಾರ ಆದೇಶದಂತೆ ಟ್ರಸ್ಟ್ ಎಲ್ಲಾ ಕಾನೂನು ಸಲಹೆಗಳನ್ನು ಪಾಲಿಸುತ್ತಿದ್ದು ಭಕ್ತರು ಸಹರಿಸಬೇಕು. ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಯ ಅನೇಕ ದೇವಸ್ಥಾನಗಳಿಂದ ನೂರಾರು ಪಲ್ಲಕ್ಕಿಗಳ ಸೇವಕರೂ ಸಹ ಈ ವರ್ಷ ಬರಬಾರದು ಎಂದು ಉಮದಿಯವರು ಮನವಿ ಮಾಡಿದ್ದಾರೆ.