ರಬಕವಿ-ಬನಹಟ್ಟಿ,ಅ8: ಮಾರಕ ಕೋವಿಡ್-19 ನಿಯಂತ್ರಣ ಹಾಗು ಮಾನವನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮನೆ ಮದ್ದು ಕಷಾಯವನ್ನು ಉಚಿತವಾಗಿ ವಿತರಣೆಗೆ ಇಲ್ಲಿನ ಉತ್ತಮ ಗೆಳೆಯರ ಬಳಗ ಮುಂದಾಗಿರುವದು ಹೆಮ್ಮೆಯಿನಿಸುತ್ತಿದೆ.

 

ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +೯೧ ೯೯೦೨೫೨೩೬೯೮...)... 

 ರಬಕವಿ-ಬನಹಟ್ಟಿ,ಅ8: ಮಾರಕ ಕೋವಿಡ್-19 ನಿಯಂತ್ರಣ ಹಾಗು ಮಾನವನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮನೆ ಮದ್ದು ಕಷಾಯವನ್ನು ಉಚಿತವಾಗಿ ವಿತರಣೆಗೆ ಇಲ್ಲಿನ ಉತ್ತಮ ಗೆಳೆಯರ ಬಳಗ ಮುಂದಾಗಿರುವದು ಹೆಮ್ಮೆಯಿನಿಸುತ್ತಿದೆ. ಪಟ್ಟಣದ ಕಂಟೈನ್ಮೆಂಟ್ ಮತ್ತು ಸೀಲ್‍ಡೌನ್ ಪ್ರದೇಶಗಳಲ್ಲಿ ಈ ಕಷಾಯ ಪುಡಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಮಹಾಂತೇಶ ಯಾದವಾಡ, ಕೋವಿಡ್-19 ರೋಗಕ್ಕೆ ಯಾವದೇ ಔಷಧಿ ದೊರೆತಿಲ್ಲ. ಈ ರೋಗ ಬರದಂತೆ ತಡೆಯಲು ಬಂದಿದ್ದರೇ ನಿವಾರಿಸುವ ಶಕ್ತಿ ಹೊಂದಿರುವ ಆಯುರ್ವೇದ ಕಷಾಯ ಪುಡಿ, ಹೋಮಿಯೋಪಥಿ ಔಷಧಿಯನ್ನು ತಯಾರಿಸಿದೆ. ಸಾರ್ವಜನಿಕರು ಕಷಾಯ ಸೇವಿಸಿ ಕೋವಿಡ್-19 ದಿಂದ ದೂರವಿರಬೇಕೆಂದರು. ನಂದು ಗಾಯಕವಾಡ ಮಾತನಾಡಿ, ಕೋವಿಡ್ 19 ವಾರಿಯರ್ಸ್‍ಗೆ ರೋಗ ನಿರೋಧಕ ಶಕ್ತಿ ವೃದ್ಧಿಸಲು ಹೋಮಿಯೋಪತಿ ಔಷಧ ಹಾಗು ಕಷಾಯ ಪುಡಿ ವಿತರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭ ವಿಷ್ಣುಕಾಂತ ಲಡ್ಡಾ, ಈಶ್ವರಪ್ಪ ಪಟಗುಂಡಿ, ಹುಮಾಯೂನ್ ಮುಲ್ಲಾ, ಸಂಜಯ ವಸ್ತ್ರದ, ಶಾಂತು ಚನಪನ್ನವರ, ಸದಾಶಿವ ಗಾಯಕವಾಡ, ಗಂಗಪ್ಪ ಮಂಟೂರ ಉಪಸ್ಥಿತರಿದ್ದರು.