ತೇರದಾಳ :ನಾವು ಸ್ವಾತಂತ್ರವನ್ನು ಪಡೆದು 74ವರ್ಷಗಳು ಗತಿಸಿವೆ. ನಮ್ಮ ಪೂರ್ವಜರು ತ್ಯಾಗ ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ ದೊರಕಿದೆ ಎಂದು ಶ್ರೀಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್‍ರಾದ ರಮೇಶ ಅವರಾದಿ ಹೇಳಿದರು.
ಪಟ್ಟಣದ ಶ್ರೀಸಿದ್ಧೇಶ್ವರ ಶಾಲೆಯಲ್ಲಿ ಸ್ವಾತಂತ್ರೋತ್ಸವ ಧ್ವಜಾರೋಹಣ ಸಮಾರಂಭದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು ಕೋವಿಡ್-19 ಮಹಾಮಾರಿಯಿಂದ ದೇಶದ ಜನತೆ ಬಹಳಷ್ಟು ತೊಂದರೆಯನ್ನು ಅನುಭವಿಸಿದೆ. ಸರಕಾರದ ಆದೇಶದ ಮೇರೆಗೆ ಮಹಾಮಾರಿಯಿಂದ ಇಂದು ನಾವು ಸ್ವಾತಂತ್ರ ದಿನಾಚರಣೆಯನ್ನು ಸರಳವಾಗಿ ಆಚರಿಸುತ್ತಿದ್ದೇವೆ. ಮಹಾಮಾರಿಯಿಂದಾಗಿ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಮಾರ್ಚದಲ್ಲಿ ನಡೆಯುವ ಬದಲಾಗಿ ಕಳೆದ ಜೂನ ತಿಂಗಳಲ್ಲಿ ನಡೆದಿದ್ದವು. ಅದರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆಯುವುದರ ಮೂಲಕ ಹೆಚ್ಚು ಸಾಧನೆಯನ್ನು ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ. ಹಾಗೂ ನಮ್ಮ ಸಂಸ್ಥೆಯ ಅಡಿಯಲ್ಲಿಯೇ ನಡೆಯುತ್ತಿರುವ ವಿಜ್ಷಾನ ಮಹಾವಿದ್ಯಾಲಯದ ಪಿಯುಸಿ ದ್ವಿತಿಯ ವರ್ಷದ ಪರೀಕ್ಷೆಯಲ್ಲಿಯೂ ಸಹ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಸಾಧನೆ ಮಾಡಿ ಜಿಲ್ಲೆಯಲ್ಲಿಯೇ ನೂರರಷ್ಟು ಸಾಧನೆ ಮಾಡಿದ ಏಕೈಕ ಶಾಲೆಯಾಗಿದೆ. ಶಾಲೆಯ ಹಾಗೂ ಸಂಸ್ಥೆಯ ಕೀರ್ತಿ ತಂದಿದ್ದಾರೆ ಅವರೆಲ್ಲರನ್ನು ಹಾಗೂ ಶಾಲಾ ಸಿಬ್ಬಂದಿಯವರನ್ನು ಅಭಿನಂದಿಸುತ್ತೇನೆ ಎಂದರು.
ಪ್ರಾಥಮಿಕ ವಿಭಾಗದ ಚೇರಮನ್‍ರಾದ ಎಮ್.ಆರ್.ಮುಕರಿ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಟಿ.ಆರ್.ದೇಸ್ತೋಟ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯ್ಯಕ್ಷ ಪಿ.ಬಿ.ಕಾಲತಿಪ್ಪಿ, ಪ್ರೌಢಶಾಲಾ ವಿಭಾಗದ ಚೇರಮನ್ ಮಹೇಶ ಯಾದವಾಡ, ಶಂಕರ ಹೊಸಮನಿ, ಆಯ್.ಆಯ್.ಯಾದವಾಡ ಸೇರಿದಂತೆ ಸಂಘದ ಸರ್ವ ಸದಸ್ಯರು ಹಾಗೂ ಶಾಲಾ ಸಿಬ್ಬಂದಿಯವರು ಇದ್ದರು. ಸರಕಾರದ ಆದೇಶದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಧ್ವಜಾರೋಹಣ ನೆವೇರಿಸಲಾಯಿತು.
Social Plugin