ತೇರದಾಳ :ಈ ಹಿಂದೆ ಪ್ಲೇಗ, ಮಲೇರಿಯಾಗಳಂತಹ ಹಲವಾರು ಮಾರಣಾಂತಿಕ ರೋಗಗಳು ಬಂದು ಹೋಗಿವೆ. ಆ ಸಂದರ್ಭದಲ್ಲಿ ನಮ್ಮ ಪೂರ್ವಜರು ಯಶಸ್ವಿಯಾಗಿ ಎದುರಿಸಿ ಅವುಗಳಿಗೆ ಲಸಿಕೆ ಕಂಡು ಹಿಡಿದು ಅವುಗಳನ್ನು ನಿರ್ಮೂಲನೆ ಮಾಡಿದರು.ಹಾಗೆಯೇ ಈಗ ಬಂದಿರುವ ಈ ಕೊರೋನಾ ಹೆಮ್ಮಾರಿಗೆ ಯಾರು ಹೆದರುವ ಕಾರಣವಿಲ್ಲ.ಈಗಲೂ ನಮ್ಮ ದೇಶದಲ್ಲಿ ಈ ರೋಗಕ್ಕಾಗಿ ಲಸಿಕೆ ಕಂಡುಹಿಡಿಯುವಲ್ಲಿ ಭಾಗಶಃ ವಿಜ್ಞಾನಿಗಳು ಯಶಸ್ವಿಯಾಗಿದ್ದುಇಷ್ಟರೊಳಗಾಗಿ ಈ ಲಸಿಕೆ ನಮಗೆಲ್ಲರಿಗೂ ಲಬ್ಯವಾಗಲಿದೆ,ನಾವು ಯಾವುದಕ್ಕೂ ಹೆದರುವ ಕಾರಣವಿಲ್ಲ ಏಕೆಂದರೆ ಈ ನಮ್ಮ ದೇಶದ ಮಣ್ಣಿನಲ್ಲಿ ಅಂತಹ ಒಂದು ವಿಶೇಶ ಶಕ್ತಿ ಅಡಗಿದೆ ಕಾರಣ ಆ ಶಕ್ತಿ ನಮ್ಮನ್ನು ಕಾಪಾಡುತ್ತದೆ ಎಂದು ತಾಲೂಕಾ ಧಂಡಾಧಿಕಾರಿ ಪ್ರಶಾಂತ ಚನಗೊಂಡ ಅವರು ಹೇಳಿದರು.
ತೇರದಾಳ ಪಟ್ಟಣದ ಮಹಾತ್ಮಾಗಾಂಧಿ ಕ್ರಿಡಾಂಗಣದಲ್ಲಿ ಸಾಮಾಜಿಕ ಅಂತರದೊಂದಿಗೆ ಸರಳವಾಗಿ ಹಮ್ಮಿಕೊಂಡ 74 ನೇ ಸ್ವಾತಂತ್ರ್ಯ ದಿನೋತ್ಸವದ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು ಕೊರೋನಾ ಬಂದಾಗಿನಿಂದ ಸಾಕಷ್ಟು ಇಲಾಖೆಯ ಸಿಬ್ಬಂದಿಗಳು ಹಗಲಿರುಳು ಕರ್ತವ್ಯನಿರ್ವಹಿಸಿದ್ದಾರೆ ಅವರ ಸೇವೆ ಅವಿಸ್ಮರಣೀಯವಾದುದು ಎಂದು ಹೇಳಿದರು.ಈ ಹಿಂದೆ ಅತೀವೃಷ್ಟಿ ಬಂದು ಜನರು ಕಷ್ಟದಲ್ಲಿದ್ದಾಗ ಮತಕ್ಷೇತ್ರದ ಶಾಸಕರು ಅವರಿಗೆ ನೆರವುನೀಡಿ ಸಹಾಯಮಾಡಿದ್ದಕ್ಕೇ ಅವರನ್ನು ತಾಲೂಕಾಡಳಿತ ಪರವಾಗಿ ಅಭಿನಂದಿಸುತ್ತೆನೆಂದರು. ಈ ರಾಷ್ಟ್ರೀಯ ಹಬ್ಬವನ್ನು ನಾವು ಪ್ರತಿ ವರ್ಷ ತುಂಬಾ ವಿಜೃಂಭಣೆಯಿಂದ ಅಚರಿಸುತ್ತಾ ಬಂದಿದ್ದೇವು ಆದರೆ ಈ ವ ಈ ಸಂದರ್ಭದಲ್ಲಿ ವೇದಿಕೆ ಮೇಲೆ ವಿಶೇಷ ಅತೀಥಿಯಾಗಿ ಆಗಮಿಸಿದ ಶಾಸಕರಾದ ಸಿದ್ದು ಸವದಿಯವರು ಹಾಗೂ ಸಿ.ಪಿ.ಐ. ಜೆ.ಕರುಣೇಶಗೌಡ ಮತ್ತು ಪಿ,ಎಸ.ಐ. ವಿಜಯ ಕಾಂಬಳೆ,ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಗ್ರೇಡಟು ತಹಶೀಲದಾರ ಎಸ್.ಬಿ.ಕಾಂಬಳೆ,ಉಪತಹಶೀಲದಾರ ಎಸ್.ಬಿ.ಮಾಯನ್ನವರ,ಕಂದಾಯ ನೀರಿಕ್ಷಕರಾದ ಎಸ್.ಬಿ.ತಾಳಿಕೋಟಿ,ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಮಠಪತಿ ಸೇರಿದಂತೆ ಪಟ್ಟಣದ ಸಾಕಷ್ಟು ಪ್ರಮುಖರು ಉಪಸ್ಥಿತರಿದ್ದರು.
Social Plugin