ರಬಕವಿ-ಬನಹಟ್ಟಿ -- ಅಲ್ಲಲ್ಲಿ ಧ್ವಜಾರೋಹಣ...
ಅಲ್ಲಲ್ಲಿ ಧ್ವಜಾರೋಹಣ
ರಬಕವಿ-ಬನಹಟ್ಟಿ,ಜ26:ರಬಕವಿ-ಬನಹಟ್ಟಿ ನಗರಾದ್ಯಂತ ಅಲ್ಲಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸ್ಥಳೀಯ ಬಸ್ ನಿಲ್ದಾಣದಲ್ಲಿ ನಗರಸಭಾ ಸದಸ್ಯೆ ಗೌರಿ ಮಿಳ್ಳಿ ಧ್ವಜಾರೋಹಣ ಮಾಡಿದರು. ಸಾರಿಗೆ ನಿಯಂತ್ರಕ ಈರಣ್ಣ ಅಂಬಿ, ಕಂಬಾರ, ಸಾಹಿತಿ ಮಲ್ಲಿಕಾರ್ಜುನ ಹುಗಲಬಾಳಿ, ಶಂಕರ ಜಾಲಿಗಿಡದ, ಹಾರೂನ್ ಬಂಡೆಬುರುಜ, ಮುರಳಿ ಕಾಬರಾ, ಚಂದ್ರಶೇಖರ ತುಂಗಳ, ಕಿರಣ ಆಳಗಿ, ವಿಶ್ವಜ ಕಾಡದೇವರ, ಬಾಬಣ್ಣ ಮೊಯ್ಲಿ ಇಮಾಮ್ ಬಂಡೇಬುರುಜ ಹಾಜರಿದ್ದರು.
ಪ್ರಾಧಿಕಾರ ಕಚೇರಿ: ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ಅಧ್ಯಕ್ಷ ಈಶ್ವರ ನಾಗರಾಳ ಧ್ವಜಾರೋಹಣ ಮಾಡಿದರು. ರಾಜು ಅಂಬಲಿ, ಕುಮಾರ ಕದಂ, ರಾಜು ಬಾಣಕಾರ, ಪ್ರವೀಣ ಕೋಲಾರ, ಪ್ರವೀಣ ದಭಾಡಿ, ವೈಷ್ಣವಿ ಬಾಗೇವಾಡಿ, ಸವಿತಾ ಹೊಸೂರ, ಗೌರಿ ಮಿಳ್ಳಿ, ನಂದವಾಡಗಿ ಸೇರಿದಂತೆ ಅನೇಕರಿದ್ದರು.
ಗೋರಕನಾಥ ಶಾಲೆ: ನಗರದ ಗೋರಕನಾಥ ಶಾಲೆಯಲ್ಲಿ ತವನಪ್ಪ ರಾವಳ ಧ್ವಜಾರೋಹಣ ಮಾಡಿದರು. ಗೋರಕನಾಥ ರಾವಳ, ದುಂಡಪ್ಪ ರಾವಳ, ನಂದಿನಿ ಚಿಂಚಖಂಡಿ, ಹಸೀನಾ ಹುಡೇದಮನಿ ಇದ್ದರು.
ಸಾಯಿ ಪ್ಲೇ ಹೋಂ: ನಗರದ ಸಾಯಿ ಪ್ಲೇ ಹೋಂನಲ್ಲಿ ಚಿದಾನಂದ ಬಾವಲತ್ತಿ ಧ್ವಜಾರೋಹಣ ಮಾಡಿದರು. ಪ್ರಮೋದ ಬಾಣಕಾರ, ಬಾವಲತ್ತಿ, ಸವದತ್ತಿ, ಕಾಡದೇವರ, ಅವಿನಾಶ ಭದ್ರನ್ನವರ, ಚಂದ್ರು ತುಂಗಳ ಹಾಜರಿದ್ದರು.
ಹಟಗಾರ ಸಂಘ:ನಗರದ ಹಟಗಾರ ಪತ್ತಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಸಿದ್ರಾಯಪ್ಪ ಶೀಲವಂತ ಧ್ವಜಾರೋಹಣ ಮಾಡಿದರು. ರಾಜು ಬಾಣಕಾರ, ದಾನಪ್ಪ ಹುಲಜತ್ತಿ, ವಿರುಪಾಕ್ಷಪ್ಪ ಕೊಕಟನೂರ, ನಿಂಗಪ್ಪ ಹೊನವಾಡ, ಮನೋಹರ ಸುಟ್ಟಟ್ಟಿ, ಸಂಜಯ ಜವಳಗಿ, ರಾಜು ಮಂಡಿ, ಬಸು ನಾಗರಾಳ ಹಾಜರಿದ್ದರು.
ಬಿಡಿಸಿಸಿ ಬ್ಯಾಂಕ್‍ನಲ್ಲಿ-ರಬಕವಿ ಹಾಗು ಬನಹಟ್ಟಿಯ ಬಿಡಿಸಿಸಿ ಬ್ಯಾಂಕ್‍ನಲ್ಲಿ ನಿರ್ದೇಶಕ ಭೀಮಶಿ ಮಗದುಮ್ ಧ್ವಜವಂದನೆ ಮಾಡಿದರು. ವ್ಯವಸ್ಥಾಕ ಆರ್.ಬಿ. ಮಂಟೂರ, ಸಿದ್ದು ಗುಣಕಿ, ಸದಲಗಿ, ಎಸ್.ಆಯ್. ಸೊರಗಾಂವಿ. ಎಸ್.ಎಂ. ಪಾಟೀಲ, ಪಿ.ವಿ. ಖವಾಸಿ, ಸಿದ್ದು ಗುಣಕಿ ಉಪಸ್ಥಿತರಿದ್ದರು.
ಕಿಡ್ಸ್ ಕಿಂಗಡಮ್: ನಗರದ ಸೋಮವಾರ ಪೇಟೆಯ ಕಿಡ್ಸ್ ಕಿಂಗಡಮ್‍ನಲ್ಲಿ ರಾಜಾರಾಮ ಕುಲಕರ್ಣಿ ಧ್ವಜಾರೋಹಣ ಮಾಡಿದರು. ಗಿರೀಶ ಗೌಡ, ಅಬೂಬಕರ ಗುರ್ಲಹೊಸೂರ, ರಾಜು ಕುಲಕರ್ಣಿ, ಯಲ್ಲಪ್ಪ ಮಹಾರಾಜರು, ಉಮಾಕಾಂತ ಬಾಗೇವಾಡಿ, ಆಕಾಶ ಯಾದವಾಡ ಉಪಸ್ಥಿತರಿದ್ದರು.
ಗ್ರಂಥಾಲಯ: ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಮಕ್ಕಳ ಸಾಹಿತಿ ಜಯವಂತ ಕಾಡದೇವರ ಧ್ವಜವಂದನೆ ಮಾಡಿದರು. ಎಸ್.ಕೆ. ನಾಡಗೌಡರ, ರಾಜು ಬೀಳಗಿ, ನಾಡಗೌಡರ, ಪ್ರಕಾಶ ನಾವಿ, ಸುರೇಶ ಕಡಪಟ್ಟಿ ಹಾಜರಿದ್ದರು.
ಬನಹಟ್ಟಿ ಸೊಸೈಟಿ: ನೀರಿನ ಟಾಕಿ ಹತ್ತಿರದ ಬನಹಟ್ಟಿ ವಿದ್ಯುತ್ ಮಗ್ಗಗಳ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಮಹಾನಿಂಗ ಹಾಸಿಲಕರ ಧ್ವಜವಂದನೆ ನೆರವೇರಿಸಿದರು. ಶಂಕರ ಚಿತ್ತರಗಿ, ದೇವೇಂದ್ರ ಚನಪನ್ನವರ, ನಿಂಗಪ್ಪ ಗೊಕಾಂವಿ, ರವಿ ಅಬಕಾರ, ಸಾರವಾಡ ಉಪಸ್ಥಿತರಿದ್ದರು.
ರಬಕವಿ ಭಾರತ ಗ್ಯಾಸ್ ಸಂಸ್ಥೆ; ಗ್ಯಾಸ್ ವಿತರಕ ಸಂಸ್ಥೆಯ ಮಾಲಿಕ ಶೇಖರ ಕೊಟ್ರಶೆಟ್ಟಿ ಧ್ವಜಾರೋಹಣ ನೇರವೇರಿಸಿದರು.
ಹುನ್ನೂರ ಸೌಹಾರ್ದದಲ್ಲಿ: ನಗರದ ಹುನ್ನೂರ ಸೌಹಾರ್ದ ಸಂಘದಲ್ಲಿ ಶಂಕರ ಜಾಲಿಗಿಡದ ಧ್ವಜವಂದನೆ ಮಾಡಿದರು. ಶಾಂತಾ ಮಂಡಿ, ನಾಗೇಶ ಮಾಲಾಪುರ, ಹೂಲಿಕಟ್ಟಿ ಸೇರಿದಂತೆ ಅನೇಕರಿದ್ದರು.
ನಗರಸಭೆಯಲ್ಲಿ: ರಬಕವಿ-ಬನಹಟ್ಟಿ ನಗರಸಭೆಯಲ್ಲಿ ಪೌರಾಯುಕ್ತ ಶ್ರೀನಿವಾಸ ಜಾಧವ ಧ್ವಜವಂದನೆ ನೆರವೇರಿಸಿದರು.
ಪದ್ಮಾವತಿ ಶಾಲೆ: ರಬಕವಿ-ಹೊಸೂರಿನ ಪದ್ಮಾವತಿ ಅಂತರಾಷ್ಟ್ರೀಯ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿತು. ಗಣಪತರಾವ್ ಹಜಾರೆ, ಪದ್ಮಾವತಿ ಹಜಾರೆ, ಸತೀಶ ಹಜಾರೆ, ಪ್ರಸನ್ನ ಹಜಾರೆ, ಬಸವರಾಜ ಕಲಾದಗಿ, ಡಾ. ಬಸವರಾಜ ಡಂಗಿ, ಪ್ರವೀಣ ಹಜಾರೆ, ಡಾ. ರವಿ ಜಮಖಂಡಿ ಉಪಸ್ಥಿತರಿದ್ದರು.
ಭುವನೇಶ್ವರಿ ಸೊಸೈಟಿಯಲ್ಲಿ: ಭುವನೇಶ್ವರಿ ಮಹಿಳಾ ವಿವಿಧೋದ್ಧೇಶಗಳ ಸಹಕಾರಿ ಸಂಘದಲ್ಲಿ ಅಧ್ಯಕ್ಷೆ ಶಂಕ್ರೆವ್ವ ಬಾಳು ಲಕ್ಷ್ಮೇಶ್ವರ ಧ್ವಜಾರೋಹಣ ಮಾಡಿದರು. ಅನಿತಾ ಭುತಡಾ, ಗೀತಾ ಚನಪನ್ನವರ, ಭಾವನಾ ವಸ್ತ್ರದ, ಸುವರ್ಣ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬನಹಟ್ಟಿ ಸೊಸೈಟಿ: ನೀರಿನ ಟಾಕಿ ಹತ್ತಿರದ ಬನಹಟ್ಟಿ ವಿದ್ಯುತ್ ಮಗ್ಗಗಳ ಸಹಕಾರಿ ಸಂಘದಲ್ಲಿ ದೇವೇಂದ್ರ ಚನಪನ್ನವರ ಧ್ವಜವಂದನೆ ನೆರವೇರಿಸಿದರು. ಅಧ್ಯಕ್ಷ ಮಹಾನಿಂಗ ಹಾಸಿಲಕರ, ಶಂಕರ ಚಿತ್ತರಗಿ, ನಿಂಗಪ್ಪ ಗೊಕಾಂವಿ, ರವಿ ಅಬಕಾರ, ಸಾರವಾಡ ಉಪಸ್ಥಿತರಿದ್ದರು.
ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆ; ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ ಸಿದ್ದಪ್ಪ ಮೇಣಿ ಧ್ವಜವಂದನೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀಮತಿ ನದಾಫ್, ಶಿವಾನಂದ ಕರಡಿ, ರಾಮದಾಸ ಸಿಂಗನ್ ಸೇರಿದಂತೆ ಅನೇಕದ್ದರು.
ನೂಲಿನ ಗಿರಣಿಯಲ್ಲಿ: ಬನಹಟ್ಟಿ ಸಹಕಾರಿ ನೂಲಿನ ಗಿರಣಿಯಲ್ಲಿ ಸಂಘದ ಅಧ್ಯಕ್ಷ ವಿಜಯ ಜುಂಜಪ್ಪನವರ ಧ್ವಜವಂದನೆ ಮಾಡಿದರು. ಬಸವರಾಜ ತೆಗ್ಗಿ, ಬ್ರಿಜ್‍ಮೋಹನ ಡಾಗಾ, ಶಂಕರ ಜಾಲಿಗಿಡದ, ರಮೇಶ ಮಹಿಷವಾಡಗಿ ಸೇರಿದಂತೆ ಅನೇಕರಿದ್ದರು.
ಕಾಡಸಿದ್ಧೇಶ್ವರ ಬ್ಯಾಂಕ್: ನಗರದ ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಶಂಕರ ಜುಂಜಪ್ಪನವರ ಧ್ವಜಾರೋಹಣ ನೆರವೇರಿಸಿದರು. ಓಂಪ್ರಕಾಶ ಕಾಬರಾ, ಮಹಾದೇವ ಚರ್ಕಿ, ಮಲ್ಲಣ್ಣ ಕಕಮರಿ, ಶ್ರೀಶೈಲ ಯಾದವಾಡ, ಮಲ್ಲು ಭದ್ರನ್ನವರ ಸೇರಿದಂತೆ ಅನೇಕರಿದ್ದರು.
ಜ್ಯೋತಿ ಸೊಸೈಟಿ: ನಗರದ ಜ್ಯೋತಿ ಸೌಹಾರ್ದ ಸಂಘದ ಅಧ್ಯಕ್ಷ ವಿಜಯ ರಾವಳ ಧ್ವಜವಂದನೆ ನೆರವೇರಿಸಿದರು. ಈರಣ್ಣ ಹಟ್ಟಿ, ಶ್ರೀಶೈಲ ಶಿರೋಳ, ಹಂದಿಗುಂದ, ಗುರು ಹೊರಟ್ಟಿ ಉಪಸ್ಥಿತರಿದ್ದರು.
ಕಿಸಾನ ಮಿತ್ರ: ನಗರದ ಕಿಸಾನಮಿತ್ರ ಮಲ್ಟಿ ಸ್ಟೇಟ್ ಕೊ-ಆಫ್ ಕ್ರೆಡಿಟ್ ಸೊಸೈಟಿಯಲ್ಲಿ ಧ್ವಜವಂದನೆ ಮಾಡಿದರು. ದೇವೇಂದ್ರ ಹಳ್ಯಾಳ, ಪ್ರಕಾಶ ಬಂದಿ, ರಾಜು ಗುಂಡಿ, ಸುನೀಲ ಗುಂಡಿ, ಅರುಣ ಕದಮ, ಸುನೀಲ ಗುಂಡಿ, ಅಶೋಕ ಕಲ್ಪಡಿ ಉಪಸ್ಥಿತರಿದ್ದರು.
ಬಾಪೂಜಿ ಬ್ಯಾಂಕ್: ಬಾಪೂಜಿ ಸೌಹಾರ್ದ ಸಂಘದಲ್ಲಿ ಧ್ವಜಾರೋಹಣ ನೆರವೇರಿತು. ಮುರಳಿಧರ ಕಾಬರಾ, ಕಾಡಪ್ಪ ಬಾಬಾನಗರ, ರಾಜು ಕುಲಕರ್ಣಿ, ರಾಜು ವಗ್ಗ, ಯೂನಿಸ್ ಚೌಗಲಾ, ದೇವರಾಜ ರಾಠಿ, ಬಸಪ್ಪ ಝಳಕಿ, ಹಾರುನ ಬೇವೂರ, ಮಹಾದೇವ ಪಾಲಭಾಂವಿ, ಶಂಕರ ಚಿತ್ತರಗಿ ಇದ್ದರು.
ಬಸವೇಶ್ವರ ಬ್ಯಾಂಕ್: ಬಸವೇಶ್ವರ ಸಹಕಾರಿ ಬ್ಯಾಂಕ್‍ನಲ್ಲಿ ವ್ಯವಸ್ಥಾಪಕಿ ಅನಿತಾ ತೇಲಿ ಧ್ವಜಾರೋಹಣ ನೆರವೇರಿಸಿದರು. ಶ್ರೀಧರ ಸಾಳುಂಕೆ, ಅಶೋಕ ಶಿರೂರ, ಪ್ರವೀಣ ಘಟ್ನಟ್ಟಿ, ಶಿವಪ್ರಸಾದ ಮುನ್ನೋಳ್ಳಿ, ಬಸು ಮುನವಳ್ಳಿ, ಈರಣ್ಣ ಮುಂಡಗನೂರ, ಶ್ರೀಕಾಂತ ಸಗರಿ ವಿನೋದ ಸುಟ್ಟಟ್ಟಿ ಉಪಸ್ಥಿತರಿದ್ದರು.
ಶಿವಬಸವ: ನಗರದ ಶಿವಬಸವ ಪತ್ತಿನ ಸೌಹಾರ್ದ ಸಂಘದಲ್ಲಿ ಹಿರಿಯರಾದ ಎಂ.ಎಸ್. ಮುನ್ನೋಳ್ಳಿ ಧ್ವಜವಂದನೆ ಮಾಡಿದರು. ಮಲ್ಲಿಕಾರ್ಜುನ ಹುಲಗಬಾಳಿ ರುದ್ರಪ್ಪ ಆಸಂಗಿ, ಭೂಯ್ಯಾರ, ಉಮದಿ, ಶ್ರೀಶೈಲ ಮಹಿಷವಾಡಗಿ, ಮಹಾವೀರ ಕಾಸರ ಹಾಜರಿದ್ದರು.
Social Plugin