ರಾಮಮಂದಿರಕ್ಕೆ ಯಾಕೆ ಬೇಕಿತ್ತು ಐನೂರು ವರ್ಷ..???
ಅವನು ಶ್ರೀರಾಮಚಂದ್ರ.. 
ನಮ್ಮ ಪಾಲಿಗೆ ಮರ್ಯಾದಾ ಪುರುಷೋತ್ತಮ.. 

ತ್ರೇತಾಯುಗದಲ್ಲಿ ಅವನು ರಾಮರಾಜ್ಯವನ್ನು ಸ್ಥಾಪಿಸಿ, 
ನ ಭೂತೋ ನ ಭವಿಷ್ಯತಿ ಎಂಬಂತೆ ಆಳ್ವಿಕೆ ಮಾಡಿದಾಗ 
ಯಾವ ಧರ್ಮಪುರುಷರ ಅಗತ್ಯವೇ ಇರಲಿಲ್ಲ..
 
ಅವನ ಕೀರ್ತಿಯ ಹೆದ್ದೆರೆಗಳು ದಶದಿಕ್ಕುಗಳಲ್ಲೂ 
ಉಕ್ಕಿ ಹರಿದು ಉತ್ತುಂಗಕ್ಕೇರಿದ್ದಾಗ.. 
ಜಗತ್ತಿನ ಯಾವ ಧರ್ಮಗಳೂ ಹುಟ್ಟಿಯೇ ಇರಲಿಲ್ಲ..

ಆವನ ಕಾಲದಲ್ಲಿ ದಯೆಯೇ ಧರ್ಮವಾಗಿತ್ತು.. ದಾನವೇ ಧರ್ಮವಾಗಿತ್ತು.. ರಕ್ಷಣೆಯೇ  ಧರ್ಮವಾಗಿತ್ತು.. 

ಅಂಥಾ ಶ್ರೀರಾಮಚಂದ್ರ ಹುಟ್ಟಿಬೆಳೆದ ಪವಿತ್ರ ಭೂಮಿಯನ್ನು 
ಮೊಘಲ್ ಸುಲ್ತಾನನೊಬ್ಬ ಹಾಳುಗೆಡವಿ, ಗೋರಿಯನ್ನು ಕಟ್ಟಿ ಆ ನೆಲದಲ್ಲಿ ಗೋವಧೆಗಳನ್ನು ಮಾಡಿ ಇನ್ನಿಲ್ಲದಂತೆ ಅಪವಿತ್ರ ಮಾಡಿದ್ದ..

ಆಗ ಹಿಂದೂಗಳ ರಕ್ತ ಕುದ್ದುಹೋಗಿ ಎಷ್ಟೇ ಹೋರಾಟ ಮಾಡಿದರೂ ಮಂದಿರ ಯಾಕಾಗಲಿಲ್ಲ ಗೊತ್ತೇ...?
ಸ್ವತಃ ಶ್ರೀರಾಮನಿಗೇ ಇಷ್ಟವಿರಲಿಲ್ಲ...!! 

ಮೊಘಲರ ಕೀಚಕ ರಾಜ್ಯಭಾರದಲ್ಲಿ ತನ್ನ ಮಂದಿರವಾಗುವುದು ರಾಮನಿಗೆ ಬೇಕಿರಲಿಲ್ಲ... ಸತತ ಮೂರು ಶತಮಾನಗಳನ್ನೇ ಕಾದು ಕಳೆದುಬಿಟ್ಟ...

ಆಮೇಲೆ ಶಿಲುಬೆ ಹಿಡಿದು ಬಂದಿದ್ದು ಪರಂಗಿಯವರು.. ಅವರ ರಾಕ್ಷಸೀ ಆಡಳಿತದಲ್ಲೂ ಮಂದಿರವಾಗುವುದು ರಾಮನಿಗೆ ಇಷ್ಟವಿರಲಿಲ್ಲ.. ಇನ್ನೆರಡು ಶತಮಾನಗಳೂ ಕಳೆದುಹೋದವು.. 

ಆಮೇಲೆ ಬಂದಿದ್ದು ಸ್ವಾತಂತ್ರ್ಯ... ಆಗಲೂ ಕೊಳೆತ ರಾಜಕಾರಣಗಳ ಹೊಲಸು ಉದ್ದೇಶಗಳ ನಡುವೆ... ನೆನ್ನೆ ಮೊನ್ನೆ ಹುಟ್ಟಿದ ಧರ್ಮದ ಕೆಸರಾಟದ ಮಧ್ಯೆ,  ದೇಗುಲ ಅವನಿಗೆ ಬೇಕಿರಲಿಲ್ಲ...

ಅವನಿಗೆ ಬಲಿಷ್ಠ ಹಿಂದುತ್ವದ ಭದ್ರ ಬುನಾದಿ ಬೇಕಿತ್ತು... 
ಶಕ್ತಿಯುತ ಕಳಂಕರಹಿತ ಉದ್ದೇಶಗಳು ಬೇಕಿದ್ದವು.. 
ಧೀ ಶಕ್ತಿಯ ಪ್ರಚಂಡ ಪ್ರಯತ್ನಗಳ ವೇದಿಕೆ ಸಿದ್ಧವಾಗಬೇಕಿತ್ತು.. 
ಅತ್ಯಂತ ಸಧೃಢ ಸಶಕ್ತ ಅಜೇಯ ನಾಯಕತ್ವ ಬೇಕಿತ್ತು.. 
ಕೇಸರಿಪಡೆಯ ಬಲಿಷ್ಠ ಕೋಟೆಯೇ ಬೇಕಿತ್ತು... 

ಅದಕ್ಕಾಗಿ ಶ್ರೀರಾಮಚಂದ್ರ ಕಾದ.. ಕಾದ... ಆಗ ಶಬರಿಯನ್ನು ಸೀತೆಯನ್ನು ಕಾಯಿಸಿದ್ದರ ಫ಼ಲವೆಂಬಂತೆ ಶ್ರೀರಾಮ ಸುದೀರ್ಘ ಐದು ಶತಮಾನಗಳಷ್ಟು ಕಾದ... ಕೈಯಲ್ಲಿ ಕೋದಂಡ, ಬ್ರಹ್ಮಾಸ್ತ್ರವೇ ಇದ್ದರೂ... ಈ ಕಲಿಯುಗದಲ್ಲಿ ಸಹನೆಯೇ ನಿಜವಾದ ಅಸ್ತ್ರವೆಂದು ಪರೋಕ್ಷವಾಗಿ ಹೇಳುತ್ತಲೇ ಐನೂರು ವರ್ಷಗಳು ಕಾದ...

ಕಳೆದ ವರ್ಷದವರೆಗೂ ಕಾದ ನ್ಯಾಯಮೂರ್ತಿ ಶ್ರೀರಾಮನಿಗೆ ನ್ಯಾಯದೇಗುಲವೇ ಕೈಮುಗಿದು ಒಪ್ಪಿಗೆ ಕೊಟ್ಟಿತು.. 

ಆದರೂ ಏಳೆಂಟು ತಿಂಗಳು ಮತ್ತೆ ಕಾದ... ಈಗ ಅವನಿಗೂ ಒಂದು ಚಿಕ್ಕ ಆಸೆ...😊  ತಾನು ಹುಟ್ಟಿ, ಆಡಿ ಬೆಳೆದ, ಆಳಿ ಬೆಳೆದ ತನ್ನ ಮನೆಯು ಕೊಂಚ ದೊಡ್ಡದಾಗಿದ್ದರೆ...!!! ಹೆಚ್ಚು ಹೆಚ್ಚು ಭಕ್ತರನ್ನು ಒಟ್ಟಿಗೇ ನೋಡಬಹುದೆಂಬ ಆಸೆ...!!! 😊😊

ಅದರಂತೆಯೇ ಮಾಡಿಕೊಂಡೆಯಲ್ಲಾ ರಾಮಾ..!!! ನಿನ್ನ ಬೃಹತ್ ಮಂದಿರವಾಗುತ್ತಿದೆ..!! ನಿನ್ನ ನಿರಂತರ ಭಜನೆ ನಡೆಯುತ್ತಿದೆ.. 
ಶತಕೋಟಿ ಆರಾಧಕರ ಹೃದಯ ತುಂಬುತ್ತಿದೆ..!! 
ಕನ್ನಡಿಗ ಹನುಮಂತನ ಜೀವ ಆನಂದದಿಂದ ಕುಣಿಯುತ್ತಿದೆ..!! 
ಬಾ ರಾಮಾ... ಶ್ರೀರಾಮಾ... ಸಂತೋಷದಿಂದ ಬಾ... 
ಅನಂತವಾಗಿ ಬಾ... ಅಪರೂಪದ ಅದ್ಭುತಕ್ಕೆ ಸಾಕ್ಷಿಯಾಗಿ ಬಾ...  
ಮತ್ತೆ ನಿನ್ನ ಚಕ್ರಾಧಿಪತ್ಯವನ್ನು ಸ್ಥಾಪನೆ ಮಾಡು ಬಾ... 
ಭಾರತವೆಂಬ ಪುಣ್ಯಭೂಮಿಯನ್ನು ಶಾಶ್ವತವಾಗಿ ರಾಮರಾಜ್ಯವಾಗಿಸು ಬಾ....   ಜೈ ಶ್ರೀರಾಮ್..🙏🙏🙏