ಬನಹಟ್ಟಿಯ ಲಕ್ಷ್ಮೀ ನಗರದ ಮನೆ ಕಂಟೈನ್ಮೆಂಟ್ ಮಾಡಲಾಗಿರುವದು.
ರಬಕವಿ-ಬನಹಟ್ಟಿ: 10 ಜನರಿಗೆ ಕೊರೊನಾ
ರಬಕವಿ-ಬನಹಟ್ಟಿ,ಅ4: ತಾಲೂಕಿನಲ್ಲಿ ಮಂಗಳವಾರದಂದು 10 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ರಬಕವಿಯಲ್ಲಿ 6, ತೇರದಾಳ 3 ಹಾಗು ಬನಹಟ್ಟಿಯ ಓರ್ವ ವ್ಯಕ್ತಿಗೆ ಪಾಜಿಟಿವ್ ವರದಿ ದೃಢಪಟ್ಟಿದೆ. ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯಲ್ಲಿ ಇಂದು 70 ಜನರಿಗೆ ರ್ಯಾಪಿಡ್ ಕಿಟ್ ಮೂಲಕ ಪರೀಕ್ಷೆ ನಡೆಸಲಾಗಿತ್ತು. ಇದರನ್ವಯ 10 ಜನರಿಗೆ ಸೋಂಕು ದೃಢಪಟ್ಟ ವರದಿಯಾಗಿದೆ.
ತಾಲೂಕಿನಾದ್ಯಂತ ಐಎಲ್‍ಐ ಹಾಗು ಸಾರಿ ರೋಗಕ್ಕೆ ಸಂಬಂಧಿಸಿದ ರೋಗಿಗಳು ಸರದಿಯಂತೆ ಸಮುದಾಯ ಆಸ್ಪತ್ರೆಗೆ ಬರುತ್ತಿದ್ದು, ಚಿಕಿತ್ಸೆ ಸಂದರ್ಭ ಕೊರೊನಾ ಪತ್ತೆಯಾಗುತ್ತಿದೆ. ಇನ್ನೂ ಅನೇಕ ಜನರು ಮನೆಯಲ್ಲಿಯೇ ತೀವ್ರ ಸಮಸ್ಯೆ ಎದುರಿಸುತ್ತಿರುವದು ಗಮನಕ್ಕೆ ಬಂದಿದ್ದು, ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳುವದು ಒಳ್ಳೆಯದೆಂದು ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.
Social Plugin