ತೇರದಾಳ ಮತಕ್ಷೇತ್ರ : ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ವಿಗ್ರಹ ಕೂಡಿಸುವದಕ್ಕೆ ಅವಕಾಶವಿಲ್ಲ-ತಹಶೀಲದಾರ ಚನಗೊಂಡ... 

 
        ವರದಿ ಕೆ.ಎಸ್.ರಂಗಸ್ವಾಮಿ.

  ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)...



ತೇರದಾಳ: ಕೊರೋನಾ ನಿಯಂತ್ರಣ ಕಾರಣದಿಂದ ಸರಕಾರವು ಈಗಾಗಲೇ ಸಾರ್ವಜನಿಕ ಸಭೆ ಸಮಾರಂಭಗಳನ್ನು ಜಾತ್ರೆ ಸಂತೆ ಹಬ್ಬ ಹರಿದಿನಗಳನ್ನು ನೀಷೇದ ಮಾಡಿರುವುದು ತಮಗೆಲ್ಲ ಗೊತ್ತಿರುವ ವಿಷಯ.ಕಾರಣ ನಾಳೆ ಬರುವ ಗಣಪತಿ ಹಬ್ಬದಂದು ಯಾವುದೇ ಗಜಾನನ ಮಂಡಳಿಯವರು ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ವಿಗ್ರಹವನ್ನು ಇಡುವಂತಿಲ್ಲ. ಇದು ಸರಕಾರದ ಆದೇಶವಾಗಿರುವುದರಿಂದ ದಯವಿಟ್ಟು ಎಲ್ಲರೂ ಸಹಕರಿಸಬೇಕು ಎಂದು ರಬಕವಿ ಬನಹಟ್ಟಿ ತಾಲೂಕಾ ದಂಡಾಧಿಕಾರಿ ಪ್ರಶಾಂತ ಚನಗೊಂಡ ತಿಳಿಸಿದರು. ಪಟ್ಟಣದ ಪೋಲಿಸ್ ಠಾಣೆಯಲ್ಲಿ ಏರ್ಪಡಿಸಿದ ಗಣಪತಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಅತಿಥಿಯಾಗಿ ಆಗಮಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ತಹಶೀಲದಾರ ಚನಗೊಂಡ ಅವರು ಕೊರೋನಾ ಹೆಮ್ಮಾರಿ ತುಂಬಾ ಭಯಾನಕವಾಗಿದ್ದು ಇದು ಇನ್ನೂ ನಮ್ಮ ಕಂಟ್ರೋಲಿಗೆ ಬಂದಿರುವುದಿಲ್ಲ ಹೀಗಾಗಿ ಈ ಕೊರೊನಾದ ವಿರುದ್ಧ ನಾವೆಲ್ಲ ಕೊರೋನಾ ವಾರಿಯರ್ಸಗಳಾಗಿ ಹೋರಾಟ ಮಾಡಬೇಕಾಗಿದೆ.ಹೀಗಾಗಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಯಾರು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಗಣೇಶ ವಿಗ್ರಹವನ್ನು ಕೂಡಿಸತಕ್ಕದ್ದಲ್ಲ. ತಾವುಗಳು ವಯಕ್ತಿಕವಾಗಿ ತಮ್ಮ ತಮ್ಮ ಮನೆಯಲ್ಲಿ ಗಣಪತಿ ಕೂಡಿಸಬಹುದು. ಆದಷ್ಟು ಎಲ್ಲರೂ ಚಿಕ್ಕದಾದ ಚೊಕ್ಕದಾದ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನೇ ಕೊಡಿಸಬೇಕು.ವಿಸರ್ಜನೆ ಸಮಯದಲ್ಲಿ ಎಲ್ಲಿ ಬೇಕಾದಲ್ಲಿ ವಿಸರ್ಜನೆ ಮಾಡದೆ ಪುರಸಭೆಯವರು ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ವಿಸರ್ಜಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಹಾಜರಿದ್ದ ಆನಂದ ನಡುವಿನಕೇರಿ,ಶಂಕರ ಕುಂಬಾರ.ವಿನಾಯಕ ಬಂಕಾಪುರ ಹಾಗೂ ಎಲ್ಲ ಗಜಾನನ ಮಿತ್ರಮಂಡಳಿಯ ಯುವಮಿತ್ರರು ಸೇರಿ ನಾವೆಲ್ಲ ಪ್ರತಿ ವರ್ಷ ಈ ಹಬ್ಬವನ್ನು ಅತೀ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದೇವೆ.ಆದರೇ ಈ ಸಲ ನಾವು ಕರೋನಾ ಕಾರಣಕ್ಕಾಗಿ ತಾವು ಹೇಳಿದಂತೆ ಅತ್ಯಂತ ಸರಳ ರೀತಿಯಲ್ಲಿ ಸರಕಾರದ ನಿಯಮಗಳ ಪ್ರಕಾರ ಹಬ್ಬವನ್ನು ಆಚರಿಸುತ್ತೇವೆ ಕಾರಣ ನಮಗೆ ಪ್ರತಿವರ್ಷ ಕೂಡಿಸುವ ಸ್ಥಳದಲ್ಲಿಯೇ ಗಣಪತಿ ಕೂಡಿಸಲು ಅವಕಾಶ ಕೊಡಿ ಎಂದು ಅಧಿಕಾರಿಗಳಲ್ಲಿ ವಿನಂತಿ ಮಾಡಿಕೊಂಡರು. 




 ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಸಿ.ಪಿ.ಐ. ಜೆ.ಕರುಣೇಶಗೌಡರವರು ನಿಮ್ಮೆಲ್ಲ ಭಾವನೆಗಳು ನಮಗೆ ಅರ್ಥವಾಗುತ್ತವೆ ಆದರೆ ತಾವು ಯೋಚನೆ ಮಾಡಿದಂತೆ ಅವಕಾಶವಿಲ್ಲ. ಸದ್ಯದ ಪರಿಸ್ಥಿತಿ ಹೇಗಿದೆ ಎಂಬುದು ತಮಗೂ ಗೊತ್ತೇ ಇದೆ. ನಾವೆಲ್ಲ ಹಿಂದಿನಿಂದ ನಮ್ಮ ಪೂರ್ವಜರು ಹಾಕಿಕೊಟ್ಟ ಆಚಾರ,ವಿಚಾರ,ನಡೆ,ನುಡಿ,ಸಂಪ್ರದಾಯದ ಆಧಾರದ ಮೇಲಿಂದ ಜೀವನ ಸಾಗಿಸುತ್ತಾ ಬಂದಿದ್ದೇವೆ. ನಾವು ಎಷ್ಟೊಂದು ಅವುಗಳಿಗೆ ಹೊಂದಿಕೊಂಡಿದ್ದೇವೆ ಎಂದರೆ ಅದನ್ನು ಬಿಟ್ಟು ಜೀವನ ನಡೆಸಲು ಸಾದ್ಯವೇ ಇಲ್ಲ ಎಂದು ಹೇಳಬಹುದು.ಇಂತಹ ವ್ಯವಸ್ಥೆಗೆ ಹೊಂದಿಕೊಂಡು ಜೀವನ ನಡೆಸಿಕೊಂಡ ಬರುತ್ತಿರುವ ನಮಗೆ ಈ ಹಬ್ಬಗಳನ್ನು ಆಚರಿಸದಿದ್ದರೇ ತುಂಬಾ ನೋವಾಗುತ್ತದೆ. ಅದರೆ ಏನು ಮಾಡುವುದು ಕೊರೋನಾ ಕಾರಣಕ್ಕಾಗಿ ಈ ನಿರ್ಧಾರ ತಗೆದುಕೊಳ್ಳುವೆ ಅವಶ್ಯಕತೆ ಇದೆ. ನಿಮ್ಮೆಲ್ಲರ ರಕ್ಷಣೆಗಾಗಿ ಸರಕಾರ ಈ ಕ್ರಮಕೈಕೊಂಡಿದೆ. ಹೀಗಾಗಿ ಇಂದು ಎಲ್ಲರಿಗೂ ಅನಿವಾರ್ಯವಾಗಿದೆ. ಹೀಗಾಗಿ ಸ್ವಲ್ಪು ದಿನಗಳ ಮಟ್ಟಿಗೆ ಈ ನಮ್ಮ ಬದುಕಿನ ಶೈಲಿಯನ್ನು ಬದಲಾಯಿಸುವ ಅವಶ್ಯಕತೆ ಇದೆ. ನಾವು ಏನಾದರೂ ಭಾವನೆಗಳಿಗೆ ಸೋತು ನಿರ್ಲಕ್ಷಮಾಡಿದಲ್ಲಿ ಮುಂದೆ ಅದಕ್ಕೆ ದೊಡ್ಡ ಬೆಲೆ ತೆತ್ತಬೇಕಾಗುತ್ತದೆ. ಕಾರಣ ದಯವಿಟ್ಟು ಪರಿಸ್ಥಿತಿ ಅರ್ಥಮಾಡಿಕೊಳ್ಳಿ ಗಣೇಶ ಹಬ್ಬವು ಮುಂದಿನ ಸಲವೂ ಬರುತ್ತೆ.ಇದೊಂದು ಸಲು ಬಿಡೋನ ಮುಂದಿನ ಸಲ ಆಚರಿಸೋಣ.ಆದರೇ ಈಗ ನಮ್ಮೆಲ್ಲರ ಮುಖ್ಯ ಜವಾಬ್ದಾರಿ ಏನೆಂದರೆ ಮೋದಲು ಈ ಕೊರೋನಾವನ್ನು ತೊಲಗಿಸುವುದು. ಏಕೆಂದರೇ ಈ ಹಿಂದೆ ಇದೇ ವಿಷಯದಲ್ಲಿ ನಿರ್ಲಕ್ಷ ತೋರಿ ಸಾಕಷ್ಟು ಜನ ತೊಂದರೆಗಿಡಾಗಿ ಸಾವು ನೋವು ಸಂಭವಿಸಿದ ನಿದರ್ಶನಗಳು ನಮ್ಮ ಮುಂದಿವೆ. ಈ ಕಾರಣಕಾಗಿಯೇ ಇಂದು ಬಾಗಲಕೋಟ ಜಿಲ್ಲಾ ಕೊವಿಡ್ ಆಸ್ಪತ್ರೆ ತುಂಬಿ ಹೋಗಿವೆ. ಆದಕಾರಣ ಅದಕ್ಕೆ ಅವಕಾಶ ಕೊಡೋದು ಬೇಡ ದಯವಿಟ್ಟು ಸರಕಾರದೊಂದಿಗೆ ಸಹಕರಿಸಿ ಎಂದು ಹೇಳಿದರು. ಠಾಣೆಯ ಪಿ.ಎಸ್.ಐ. ವಿಜಯ ಕಾಂಬಳೆಯವರು ಪ್ರಾಸ್ತಾವಿಕ ಮಾತನಾಡಿ ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು ಮತ್ತು ಯಾವುದೇ ರೀತಿಯ ಅನ್ನಸಂತರ್ಪನೆಗೆ ಅವಕಾಶವಿಲ್ಲ ಹಾಗೂ ಗಣಪತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ವಿಸರ್ಜನೆ ಮಾಡುವಂತಿಲ್ಲ ಎಂದು ಹೇಳಿದರಲ್ಲದೆ ಇದಕ್ಕಾಗಿ ಪುರಸಭೆ ಇಲಾಖೆಯು ಗಣೇಶ ವಿಸರ್ಜನೆಗೆ ಪಟ್ಟಣದ ಮಹಾತ್ಮಾಗಾಂಧಿ ಕ್ರಿಡಾಂಗಣದಲ್ಲಿ ವ್ಯವಸ್ಥೆ ಮಾಡಿರುತ್ತಾರೆ ದಯವಟ್ಟು ಎಲ್ಲರೂ ನಿಗದಿಪಡಿಸಿದ ಸ್ಥಳದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ವಿಸರ್ಜನೆ ಮಾಡಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಉಪಸ್ಥಿತರಿದ್ದರು. ಪೋಲಿಸ್ ಇಲಾಖೆ ಸಿಬ್ಬಂದಿವರ್ಗ ಊರ ಪ್ರಮುಖರು ಹಾಜರಿದ್ದರು.