ಬನಹಟ್ಟಿಯಲ್ಲಿ ಕಂಟೈನ್ಮೆಂಟ್ ವಲಯ ನಿರ್ಮಿಸುತ್ತಿರುವ ನಗರಸಭೆ ಸಿಬ್ಬಂದಿಗಳು
10 ಜನರಿಗೆ ಕೊರೊನಾ: ನಿಲ್ಲದ ಅಟ್ಟಹಾಸ
ರಬಕವಿ-ಬನಹಟ್ಟಿ,ಅ6: ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸ ನಿಲ್ಲುತ್ತಿಲ್ಲ. ಗುರುವಾರ ಮತ್ತೇ 10 ಜನರಿಗೆ ಸೋಂಕು ದೃಢಪಟ್ಟಿದೆ.
ಕ್ವಾರಂಟೈನ್‍ನಲ್ಲಿದ್ದವರ ಪೈಕಿ 5 ಜನರಿಗೆ ಸೋಂಕು ತಗುಲಿದ್ದು, ಬನಹಟ್ಟಿಯ ಇಬ್ಬರಿಗೆ ಹಾಗು ತೇರದಾಳದ ಮೂರು ಜನರಿಗೆ ಕೊರೊನಾ ಪಾಜಿಟಿವ್ ವರದಿ ದೃಢವಾಗಿದೆ.
ರಬಕವಿ-ಬನಹಟ್ಟಿ ಸಮುದಾಯ ಆಸ್ಪತ್ರೆಯಲ್ಲಿ ಇಂದು 61 ಜನರ ಪರೀಕ್ಷೆ ನಡೆಸಲಾಗಿ ಐವರಿಗೆ ಕೊರೊನಾ ಪಾಜಿಟಿವ್ ದೃಢಪಟ್ಟಿದೆ.
ಜನತೆ ಸಾಮಾಜಿಕ ಅಂತರ, ಮಾಸ್ಕ್‍ಗಳಿಂದ ನಿಯಮಾನುಸಾರ ಸಂಚಾರ ನಡೆಸುತ್ತಿದ್ದರೆ, ಪಟ್ಟಣದ ಮಾರುಕಟ್ಟೆ ಹಾಗು ಸಂತೆ ವ್ಯಾಪಾರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ವಯಸ್ಕರಿಗೆ ಮತ್ತಷ್ಟು ಕಂಟಕವಾಗುವಲ್ಲಿ ಕಾರಣವಾಗುತ್ತಿದೆ.

Social Plugin