ತೇರದಾಳ:ಕಳೆದ ಸುಮಾರು ತಿಂಗಳುಗಳಿಂದ ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದ ನಿರಂತರ ನೀರು ಸರಬರಾಜು ಕಾಮಗಾರಿಯು ಈಗ ಪುನಃ ಆರಂಭವಾಗಿದೆ. ಪಟ್ಟಣದಲ್ಲಿರುವ ಎಲ್ಲಾ ಮನೆಗಳಿಗೆ 24*7 ತಾಸು ನಿರಂತರವಾಗಿ ನೀರು ಸಿಗಲಿ ಎಂಬ ಉದ್ದೆಶದಿಂದ ಪಟ್ಟಣದ ತುಂಬೆಲ್ಲಾ ಪೈಪ ಆಳವಡಿಕೆ ಕಾಮಗಾರಿ ಆರಂಭಮಾಡಲಾಗಿತ್ತು. ಆದರೇ ಏಕೊ ಎನೋ ಗೊತ್ತಿಲ್ಲ ಈ ಕಾಮಗಾರಿಯು ಕಳೆದ ವರ್ಷದಿಂದಲೇ ಸ್ಥಗಿತಗೊಳಿಸಲಾಗಿತ್ತು. ಆದರೇ ಪುನಃ ಈಗ ಈ ಕಾಮಗಾರಿ ಆರಂಭವಾದದ್ದನ್ನು ಕಂಡು ಪಟ್ಟಣದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈ ಕಾಮಗಾರಿಯೂ ಈ ಹಿಂದೆಯೇ ಭಾಗಶಃ ಪೂರ್ಣಗೊಂಡಿದೆ ಎನ್ನಬಹುದು.ಈ ಹಿಂದೆಯೇ ಸರಿಸುಮಾರು ಪಟ್ಟಣದ ತುಂಬೆಲ್ಲ ಪೈಪ ಅಳವಡಿಕೆ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ. ಆದರೆ ಪಟ್ಟಣದ ಪ್ರಮುಖ ರಸ್ತೆ ಹಾಗೂ ಬೀದಿಗಳಲ್ಲಿ ಪೈಪ ಅಳವಡಿಸುವ ಸಂದರ್ಭದಲ್ಲಿ ಮಾತ್ರ ಈ ಕಾಮಗಾರಿಯು ಸ್ಥಗಿತಗೊಂಡಿತ್ತು. ಇದರಿಂದ ಪಟ್ಟಣದ ರಸ್ತೆಗಳೆಲ್ಲ ಹದಗೆಟ್ಟು ಹೋಗಿದ್ದವು. ಈಗಾಗಲೇ ಈ ರಸ್ತಗಳಿಗೆ ಡಾಂಬರೀಕರಣ ಮಾಡಲು ಇಲಾಖೆ ತಯಾರಾಗಿದೆ ಆದರೇ ಪೈಪ ಅಳವಡಿಸುವ ಕಾರ್ಯ ಆಗದೇ ಇರುವದರಿಂದ ಈ ರಸ್ತೆಗಳು ದುರಸ್ತಿಯಾಗದೇ ಹಾಗೇ ಉಳಿದವು. ಹೀಗಾಗಿ ಇದೇ ರಸ್ತೆಯೇ ಪಟ್ಟಣದ ಮುಖ್ಯ ರಸ್ತೆಯಾದುದರಿಂದ ನಿರಂತರವಾಗಿ ಜನರು ಹಾಗೂ ವಾಹನಗಳು ಸಂಚರಿಸುವದರಿಂದ ಇನ್ನಷ್ಟು ರಸ್ತೆಗಳು ಹದಗೆಟ್ಟು ಹೋದವು. ಇದರಿಂದ ಸ್ಥಳಿಯ ನಾಗರಿಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬರುವಂತಹ ಸಾಕಷ್ಟು ಜನರು ತುಂಬಾ ತೊಂದರೆ ಅನುಭವಿಸುವಂತಾಯಿತು. ಈ ಪಟ್ಟಣದ ಮುಖ್ಯರಸ್ತೆಯ ದುರವಸ್ತೆ ಕಂಡು ಸಾರ್ವಜನಿಕರು ಸಂಭಂದಿಸಿದ ಇಲಾಖೆಗಳನ್ನ ನಿರಂತರವಾಗಿ ಶಪಿಸುತ್ತಿದ್ದರು. ಈ ಬಗ್ಗೆಯೂ ಮಾದ್ಯಮದಲ್ಲೂ ಸಹ ಹಲವು ಬಾರಿ ಈ ಹದಗೆಟ್ಟ ರಸ್ತೆಗಳನ್ನು ಕೂಡಲೆ ದುರಸ್ತೆ ಮಾಡಬೇಕೆಂದು ಸಾರ್ವಜನಿಕರು ಸಂಭಂಧಿಸಿದ ಇಲಾಖೆಗೆ ಮನವಿ ಮಾಡಕೊಳ್ಳಲಾಗುತ್ತಿತ್ತು. ಅಲ್ಲದೇ ನಮ್ಮ ಸ್ವರೂಪ ಸಂದರ್ಶನ ವಾಹಿನಿಯು ಸಂಭಂಧಿಸಿದ ಅಧಿಕಾರಿಗಳನ್ನು ನೇರವಾಗಿ ಭೆಟ್ಟಿಯಾಗಿ ಈ ರಸ್ತೆಗಳ ದುರಸ್ಥಿ ಕಾರ್ಯ ಕೈಕೊಳ್ಳುವಂತೆ ಸಾಕಷ್ಟು ವರದಿ ಮಾಡಿತ್ತು. ಅಧಿಕಾರಿಗಳು ಸಹ ಕೊರೊನಾ ಕಾರಣಕ್ಕಾಗಿ ಈ ಕಾರ್ಯ ವಿಳಂಬವಾಗಿದ್ದು ಆದಷ್ಟು ಬೇಗನೆ ಈ ಕಾರ್ಯ ಮಾಡಲಾಗುವುದು ಎಂಬ ಬರವಸೆ ನೀಡಿದ್ದರು. ತಡವಾದರೂ ಚಿಂತೆಯಿಲ್ಲ ಈಗ ಈ ಕೆಲಸ ಪುನಃ ಪ್ರಾರಂಭವಾಗಿದ್ದು ಕಂಡು ಪಟ್ಟಣದ ಪ್ರಮುಖರು ಹರ್ಷಗೊಂಡಿದ್ದಾರೆ.
ಕೈಗೆತ್ತಿಕೊಂಡಿರುವ ಈ ಕಾಮಗಾರಿಯನ್ನು ದಯವಿಟ್ಟು ಪೂರ್ಣಗೊಳಿಸುವವರೆಗೂ ಕೈಬಿಡಬಾರದು ಆದಷ್ಟು ಬೇಗನೆ ಪೂರ್ಣಗೊಳಿಸುವ ಕಾರ್ಯವಾಗಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಈ ಮೂಲಕ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Social Plugin