ಬನಹಟ್ಟಿಯ ತೇರದಾಳ ಕ್ಷೇತ್ರದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮ ದಿನಾಚರಣೆಯಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು.
ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮದಿನಾಚರಣೆ.
ರಬಕವಿ-ಬನಹಟ್ಟಿ,ಅ20: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮ ದಿನಾಚರಣೆಯನ್ನು ತೇರದಾಳ ಕ್ಷೇತ್ರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಚರಿಸಲಾಯಿತು.
ರಾಜೀವ್ ಗಾಂಧಿ ಹಾಗು ದೇವರಾಜ ಅರಸು ಭಾವಚಿತ್ರಕ್ಕೆ ಮಾಜಿ ಸಚಿವೆ ಉಮಾಶ್ರೀ ಪುಷ್ಪ ನಮನ ಸಲ್ಲಿಸಿದರು. ಸರ್ವರಿಗೂ ಸಮಪಾಲು, ಸಮಬಾಳು ಕಲ್ಪನೆಯಿದೆ. ಈ ಕಲ್ಪನೆಯನ್ನು ಜಾರಿಗೆ ತಂದವರು ದೇವರಾಜ ಅರಸು, ಶಿಕ್ಷಣ, ರಾಜಕೀಯದಲ್ಲಿ ಮೀಸಲಾತಿ ತಂದ ರಾಜೀವ್ ಗಾಂಧಿ ಕೂಡ ಧೀಮಂತ ನಾಯಕ ಎಂದು ಉಮಾಶ್ರೀ ಬಣ್ಣಿಸಿದರು.
ಬೇರೆಯವರು ಫಲ ಅನುಭವಿಸುತ್ತಾರೆ ಭಾಷಣವನ್ನೂ ಮಾಡ್ತಾರೆ ಆದರೆ ಸಾಮಾಜಿಕ ನ್ಯಾಯ ಎತ್ತಿಹಿಡಿಯುತ್ತಿಲ್ಲ ಬಿಜೆಪಿಯವರು ಬರೀ ಭಾಷಣಕಾರರು. ಗಿಮಿಕ್ ಮಾಡುವದಷ್ಟೇ ಅವರ ಕೆಲಸ. ಆದರೆ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರೋದು ಕಾಂಗ್ರೆಸ್ ಪಕ್ಷ ಎಂದರು.
ಬಿಜೆಪಿಯವರು ಮೀಸಲಾತಿ ವಿರೋಧಿಸಿಗಳು, ಮಂಡಲ್ ಆಯೋಗ ವರದಿಗೆ ವಿರೋಧ ಮಾಡಿ ರಥಯಾತ್ರೆ ಮಾಡಿದವರು. ಕೆಳವರ್ಗದ ಪರ ಬಿಜೆಪಿಯಿಲ್ಲ, ಅವರ ಅಪ್ರಪ್ರಚಾರದಿಂದ ಸೋಲಬೇಕಾಯಿತು. ಜನರನ್ನು ದಾರಿ ತಪ್ಪಿಸುವದೇ ಅವರ ಕೆಲಸವಾಗಿದೆ ಎಂದು ಉಮಾಶ್ರೀ ಟೀಕಿಸಿದರು.
ಅಧಿಕಾರವಿಲ್ಲದಿದ್ದರೂ ಹೋರಾಟ ಮಾಡುವವರೇ ನಿಜವಾದ ನಾಯಕರು, ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಎಷ್ಟೊಂದು ಪ್ರಭಾವಿತ ಹಾಗು ಎಂಥಹ ವ್ಯಕ್ತಿಗಳನ್ನು ನಿರ್ಮಿಸಿದೆ ಎಂಬುದನ್ನು ಇತಿಹಾಸ ಓದಿದಾಗ ಮಾತ್ರ ಅರಿವಾಗುವದು. ಪಕ್ಷ ಸದೃಢ ಹಾಗು ಯುವಕರ ಮಾರ್ಗದರ್ಶನಕ್ಕೆ ಇತಿಹಾಸವನ್ನು ಓದಿದಾಗ ಮಾತ್ರ ಮುಂದಿನ ನಾಯಕರಾಗಲು ಸಾಧ್ಯ. ಪ್ರತಿಯೊಬ್ಬ ಕಾರ್ಯಕರ್ತ ಕಾಂಗ್ರೆಸ್‍ನ ಪರಂಪರೆ ಹಾಗು ವ್ಯಕ್ತಿಗಳ ಮಾಹಿತಿ ಅರಿಯಬೇಕೆಂದರು.
ಡಾ. ಎ.ಆರ್. ಬೆಳಗಲಿ, ರಂಗನಗೌಡ ಪಾಟೀಲ, ಎಸ್.ಎಂ. ಉಳ್ಳಾಗಡ್ಡಿ, ರಾಜು ಭಾಗವಾನ ಮಾತನಾಡಿದರು. ಶ್ರೀಶೈಲ ಮೇಣಿ, ಸತ್ಯಪ್ಪ ಮಗದುಮ್, ಸಂಗಪ್ಪ ಕುಂದಗೋಳ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ರಾಜೇಂದ್ರ ಭದ್ರನ್ನವರ, ಬಸವರಾಜ ಕೊಕಟನೂರ, ಈಶ್ವರ ಚಮಕೇರಿ, ಬಸವರಾಜ ಗುಡೋಡಗಿ, ಸದಾಶಿವ ಗೋಂದಕರ, ಪ್ರಕಾಶ ಮಮದಾಪುರ, ಮಾರುತಿ ಸೊರಗಾಂವಿ ಸೇರಿದಂತೆ ಅನೇಕರಿದ್ದರು.
ಜಾಹಿರಾತು...
Social Plugin