(ಸ್ವರೂಪ ಸಂದರ್ಶನ ವರದಿ : ಮ.ಕೃ.ಮೇಗಾಡಿ)
ಕಡಪಟ್ಟಿ (ತಾ : ಜಮಖಂಡಿ) : ಕೋವಿಡ್-19 ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವುದರಿಂದ, ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ, ಪೊಲೀಸ್ ಬಂದೋಬಸ್ತಿನಲ್ಲಿ ಗುರುವಾರ ಕಡಪಟ್ಟಿ ಪವಾಡ ಬಸವೇಶ್ವರ, ಸುವರ್ಣಖಂಡಿ ಸಂಗಮೇಶ್ವರ ದೊಡ್ಡ ಬಸವಣ್ಣನ ದೇವರ ದೇವಸ್ಥಾನದಲ್ಲಿ ಈ ವರ್ಷ ಸರಳವಾಗಿ ಪೂಜಾಭಿಷೇಕ ನಡೆಸಲಾಯಿತು.
ಕಡಪಟ್ಟಿ ಪವಾಡ ಬಸವೇಶ್ವರ ದೇವಸಾನದಲ್ಲಿ ಪಾರ್ವತಿ ಪರಮೇಶ್ವರ, ಕಾಡಸಿದ್ಧೇಶ್ವರ, ಬಸವಣ್ಣನ ಬುತ್ತಿಪೂಜೆ, ಹೂಗಳಿಂದ ಅಲಂಕೃತವಾದ ದೇವಾಲಯ ಬಂದ ಭಕ್ತರಿಗೆ ಸಂತಸವನ್ನುಂಟು ಮಾಡಿತು. ಬರುಬ ಸದ್ಭಕ್ತರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡಿರಬೇಕು. ಸೆನಿಟೈಸರ್ ಬಳಕೆ, ಸಾಮಾಜಿಕ ಅಂತರದೊಂದಿಗೆ ದೇವಾಲಯ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು.
ಅರ್ಚಕರಾದ ಚನ್ನಯ್ಯ ಶಂಕ್ರಯ್ಯ ಹರಗಣಿಮಠ, ಶಿವಯ್ಯಾ ಈ. ಪೂಜಾರಿ, ಪವಾಡಯ್ಯಾ ಅ. ಪೂಜಾರಿ, ಮಲ್ಲಿಕಾರ್ಜುನಯ್ಯಾ ರಾ. ಪೂಜಾರಿ, ಸಂಜು ಹರಗಣಿಮಠ ಅವರು ಪ್ರಾತಃಕಾಲ ವಿಶೇಷ ಪೂಜಾದಿಗಳನ್ನು ನಡೆಸಿದರು. ಬರುವ ಭಕ್ತರಿಗೆ ಸಾಮಾಜಿಕ ಅಂತರದೊಂದಿಗೆ ದೇವಾಲಯ ಪ್ರವೇಶಿಸಲು ಧ್ವನಿವರ್ಧಕ ಮೂಲಕ ಜಾಗೃತಿ ಮೂಡಿಸಲಾಗುತ್ತಿತ್ತು. ಅಲ್ಲಲ್ಲಿ ಬ್ಯಾನರ್ ಹಾಕಲಾಗಿತ್ತು. ಕೋರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ಪ್ರಭಾವ ಹೆಚ್ಚಿಸುತ್ತಿರುವುದರಿಂದ ಯಾರಿಗೂ ತೊಂದರೆಯಾಗಬಾರದೆಂದು ಈ ವರ್ಷ ಜಾತ್ರೆ, ರಥೋತ್ಸವ ರದ್ದುಪಡಿಸಲಾಗಿದೆ ಎಂದು ಬಸವೇಶ್ವರ ಸೇವಾ ಸಮಿತಿಯವರು ಭಕ್ತರಿಗೆ ತಿಳಿಸಿದರು.
ಫೋಟೊ ವಿವರ :
ಜಮಖಂಡಿ ಸಮೀಪದ ಕಡಪಟ್ಟಿ ಪವಾಡ ಬಸವೇಶ್ವರ ದೇವಸಾನದಲ್ಲಿ ಗುರುವಾರ ಪಾರ್ವತಿ ಪರಮೇಶ್ವರ, ಕಾಡಸಿದ್ಧೇಶ್ವರ, ಬಸವಣ್ಣನ ಬುತ್ತಿಪೂಜೆ, ಹೂಗಳಿಂದ ಅಲಂಕೃತವಾದ ದೇವಾಲಯ ಆಕರ್ಷಕವಾಗಿತ್ತು.
ಜಾಹಿರಾತು...
Social Plugin