ಶ್ರೀಸಿದ್ದೇಶ್ವರ ಶಾಲೆ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ದೀಪಶ್ರೀ ಘೊಂಗಡಿ ಪ್ರಥಮ
ತೇರದಾಳ : ಜೂನ ತಿಂಗಳಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಪಟ್ಟಣದ ಪ್ರತಿಷ್ಠಿತ ಶ್ರೀಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಶ್ರೀಸಿದ್ಧೇಶ್ವರ ಪ್ರೌಢಶಾಲೆಯ ಫಲಿತಾಂಶ ಶೇ.94.31ರಷ್ಟಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ದೇಸ್ತೋಟ ಹಾಗೂ ಸಂಘದ ಚೇರಮನ್ ರಮೇಶ ಅವರಾದಿ ಮತ್ತು ಶಾಲಾ ಚೇರಮನ್ ಮಹೇಶ ಯಾದವಾಡ ತಿಳಿಸಿದ್ದಾರೆ.
ದೀಪಶ್ರೀ ಹೀರಾಚಂದ.ಘೊಂಗಡಿ. 625ಕ್ಕೆ 599(ಶೇ.95.84)ಅಂಕ ಪಡೆದು ಶಾಲೆಗೆ ಪ್ರಥಮ, ಮಹೇಶ ಶ್ರೀಶೈಲ ಚಿಂಚಲಿ 625ಕ್ಕೆ593(94.78) ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಹಾಗೂ ಸುಪ್ರಿಯಾ ಶಂಕರ ಬಾಬನ್ನವರ 625ಕ್ಕೆ 587(93.92)ರಷ್ಟು ಅಂಕ ಪಡೆದು ಶಾಲೆಗೆ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 88 ವಿದ್ಯಾರ್ಥಿಗಳಲ್ಲಿ 26ವಿದ್ಯಾರ್ಥಿಗಳು ಡಿಸ್ಟಿಂಗ್ಸ್‍ನಲ್ಲಿ, 41ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 16 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. 100ಕ್ಕೆ100 ಕನ್ನಡ ವಿಷಯದಲ್ಲಿ 10 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ಒಬ್ಬ ವಿದ್ಯಾರ್ಥಿ 100ಕ್ಕೆ 100 ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶಾಲೆಯ ಫಲಿತಾಂಶ ಹೆಚ್ಚಿಸಿದ ಎಲ್ಲ ವಿದ್ಯಾರ್ಥಿಗಳನ್ನು ಶಿಕ್ಷಕ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
Social Plugin