ತೇರದಾಳ ಮತಕ್ಷೇತ್ರ - ಸರಕಾರದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟುವಂತಾಗಬೇಕು-ಸಿದ್ದು ಸವದಿ 

ವರದಿ : ಕೆ. ಎಸ್. ರಂಗಸ್ವಾಮಿ. 

ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +೯೧ ೯೯೦೨೫೨೩೬೯೮...)... 

 ತೇರದಾಳ: ಸರಕಾರವು ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ನಿರಂತರವಾಗಿ ವಿವಿಧ ರೀತಿಯಲ್ಲಿ ಕೈಕೊಳ್ಳತ್ತಲೇ ಇದೆ. ಕಾರಣ ಸರಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತಾಗಬೇಕು ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿಯ ಹೇಳಿದರು. ತೇರದಾಳ ಪಟ್ಟಣದ ಪುರಸಭೆ ಆವರಣದಲ್ಲಿ ಸನ್ 2018-19ನೇ ಸಾಲಿನ ಎಸ್‍ಎಫ್‍ಸಿ 24.10 ಯೊಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಬಣ್ಣದ ಟಿವ್ಹಿ ಹಾಗೂ ಸೋಲಾರ್ ಲೈಟ್ ಮತ್ತು ಪುರಸಭೆ ವ್ಯಾಪ್ತಿಯ ಪರಿಶಿಷ್ಟ ಪಂಗಡ ಸಮಾಜದ ಜನರ ಸಮುದಾಯ ಭವನಗಳಿಗೆ ಅಡುಗೆ ಮಾಡುವ ಸಾಮಗ್ರಿಗಳನ್ನು ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ಪಟ್ಟಣದಲ್ಲಿ ಇನ್ನು ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಇರುತ್ತವೆ. ಆದರೆ ಕೊರೊನಾ ಕಾರಣದಿಂದಾಗಿ ವಿಳಂಬವಾಗುತ್ತಲಿವೆ. ಏಕೆಂದರೆ ಕೊರೊನಾವು ಇಡೀ ಮಾನವ ಜೀವನವನ್ನೇ ನುಂಗಿ ಹಾಕುವಂತಹ ವೈರಸ್ ಆಗಿದ್ದು ಕಾರಣ ಮೊಗಲು ನಾವು ಪ್ರಾಣ ಉಳಿಸಿಕೊಳ್ಳೋಣ. ಕೊರೊನಾ ಕಾರಣದಿಂದ ಸರಕಾರದಿಂದ ಸಾಕಷ್ಟು ಅನುದಾನಗಳು ಕಡಿಮರಯಾಗಿವೆ ಹೀಗಾಗಿ ಅಭಿವೃದ್ಧಿ ಕೆಲಸಗಳು ಕುಂಠೀತಗೊಂಡಿವೆ. 


ಕೊರೊನಾ ವಿಷಯದಲ್ಲಿ ಯಾರು ನಿರ್ಲಕ್ಷ್ಯ ಮಾಡುವುದು ಬೇಡ. ನಿರ್ಲಕ್ಷ್ಯದಿಂದ ಈಗಾಗಲೇ ಎಷ್ಟೋ ಜನ ತಮ್ಮ ಪ್ರಾಣ ತೆತ್ತಿದ್ದಾರೆ. ಸರಕಾರದ ನಿಯಗಳನ್ನು ಪಾಲಿಸಬೇಕು ಕೊರೊನಾದಿಂದ ರಕ್ಷಣೆ ಪಡೆಯಬೇಕು. ನಮ್ಮ ನಮ್ಮ ರಕ್ಷಣೆ ನಮ್ಮ ಕೈಯಲ್ಲಿದೆ. ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಯುದ್ಧೋಪಾದಿಯಲ್ಲಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್‍ಗಳಾದ ವೈದ್ಯರು ತಮ್ಮ ಸುರಕ್ಷತೆ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು. ಎಲ್ಲಕ್ಕಿಂತ ನಿಮ್ಮ ಪ್ರಾಣವು ನಮ್ಮಗೆ ಮುಖ್ಯವಾಗಿದೆ. ನಿಮ್ಮ ವಿದ್ಯೆಯು ಸಾರ್ಥಕವಾಗಲಿ. ಸಾರ್ವಜನಿಕರು ಸಹ ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸದೇ ಸಹಕಾರದಿಂದ ವರ್ತಿಸಿ ಎಂದು ಹೇಳಿದರು. 32ಇಂಚಿನ 6ಬಣ್ಣದ ಟಿವ್ಹಿ, 15ಸೋಲಾರ್ ಲೈಟ್‍ಗಳು, ವಿತರಣೆಗೆ ಒಟ್ಟುಖರ್ಚಾದ ವೆಚ್ಚ 3.20. ಹಾಗೂ ಸಮುದಾಯ ಭವನಕ್ಕೆ ಸುಮಾರು 3ಲಕ್ಷ ರೂಗಳ ವೆಚ್ಚದ ಬಾಂಡೆ ಸಾಮಾನುಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಜೆಇ ಪೋತದಾರ, ಕೇದಾರಿ ಪಾಟೀಲ, ಕುಮಾರ ಸರಿಕರ, ಶಂಕರ ಕುಂಬಾರ, ಪರಪ್ಪ ಅಥಣಿ, ಫಜಲ್ ಅತಾರಾವುತ್, ವಿನಯಕ ಬಂಕಾಪೂರ, ಸುರೇಶ ಕಬಾಡಗಿ, ಶೆಟ್ಟೆಪ್ಪ ಸುಣಗಾರ ಸೇರಿದಂತೆ ಇನ್ನಿತರರು ಇದ್ದರು.