ರಾಂಪೂರದಲ್ಲಿ ಜನತೆ ಸ್ವಯಂಪ್ರೇರಿತವಾಗಿ ಗಲ್ಲಿಯನ್ನು ನಿತ್ಯ ಸ್ಯಾನಿಟೈಜರ್ ಮಾಡುತ್ತಿರುವದು.

ರಾಂಪೂರದಲ್ಲಿ ಸ್ವಯಂಪ್ರೇರಿತ ಸ್ಯಾನಿಟೈಜ್ ಮಾಡುತ್ತಿರುವ ಸಾರ್ವಜನಿಕರು.

ರಬಕವಿ-ಬನಹಟ್ಟಿ,ಅ4: ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಕೊರೊನಾ ವೈರಸ್ ತನ್ನ ಕಬಂಧಬಾಹು ಚಾಚುತ್ತಿರುವ ಹಿನ್ನಲೆ ರಾಂಪೂರದ ಕೆಲ ವಾರ್ಡ್‍ಗಳಲ್ಲಿನ ಜನತೆ ನಗರಸಭೆ ಅಥವಾ ಇತರೆ ಇಲಾಖೆಗಳ ಸಹಾಯ ಪಡೆಯದೆ ಸ್ವಯಂಪ್ರೇರಿತವಾಗಿ ಗಲ್ಲಿಗಳನ್ನು ಸ್ಯಾನಿಟೈಜ್ ಮಾಡುತ್ತಿರುವದು ವಿಶೇಷ.

ನಿತ್ಯ ಜನತೆ ಸಂಚಾರದಿಂದ ಅಲ್ಲದೆ ಚರಂಡಿ ಹಾಗು ರಸ್ತೆ ಮೇಲೆ ಗಲೀಜು ಕಾರಣ ಕೊರೊನಾ ಆತಂಕಕ್ಕೆ ಎಡೆ ಮಾಡುತ್ತಿರುವ ಹಿನ್ನಲೆಯಾಗಿ ಸ್ಥಳೀಯ ಯುವಕರು ಗುಂಪು ದಿನಂಪ್ರತಿ ಎರಡು ಬಾರಿ ಕ್ಯಾಟ್ ಕಿನೈಲ್ ಹಾಗು ಸೋಡಿಯಂ ಹೈಪೋಲ್ಕೋರೈಟ್ ರಸಾಯನಿಕ ಮಿಶ್ರಣದೊಂದಿಗೆ ರಸ್ತೆ ಬದಿ ಸ್ಯಾನಿಟೈಜರ್ ಮಾಡುತ್ತಿದ್ದಾರೆ.

ಪ್ರತಿ ನಿತ್ಯ ಉದ್ಯೋಗ ಮುಗಿಸಿಕೊಂಡು ಸರದಿಯಂತೆ ಗೆಳೆಯ ವೃಂದದಿಂದ ವಿಕಾಸ ಜಾನ್ವೇಕರ್, ಸಚಿನ ಕಾಟಕರ, ರಾಜು ಮಗದುಮ್ಕರ, ಉಮೇಶ ಕಾಟಕರ, ಬಸವರಾಜ ದೊಡ್ಡಮನಿ, ಆಕಾಶ ಕಾಜುವೆ ಸೇರಿ ತಮ್ಮ ತಮ್ಮ ಗಲ್ಲಿಗಳ ಸ್ವಚ್ಛತೆಯೊಂದಿಗೆ ಕೊರೊನಾ ವೈರಸ್‍ನ ಜಾಗೃತಿ ಮೂಡಿಸುವದರ ಜೊತೆಗೆ ಅಲ್ಲಿನ ಜನತೆಯ ಆರೋಗ್ಯದ ಹಿತ ಕಾಪಾಡುವಲ್ಲಿ ಮುಂದಾಗಿರುವದು ವಿಶೇಷವಾಗಿದೆ.