ರಬಕವಿಯ ವಿದ್ಯಾನಗರದಲ್ಲಿ ಕಂಟೈನ್ಮೆಂಟ್ ವಲಯ ನಿರ್ಮಿಸಿರುವದು.
ನಿಯಂತ್ರಣಕ್ಕೆ ಬಾರದ ಕೊರೊನಾ ಮತ್ತೆ 20 ಜನರಿಗೆ ಸೋಂಕು
ರಬಕವಿ-ಬನಹಟ್ಟಿ,ಅ3: ಜಾಗತಿಕ ಪಿಡುಗಾಗಿ ಪರಿಪರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ ಕೋವಿಡ್-19 ತಾಲೂಕಿನಾದ್ಯಂತ ಸೋಮವಾರ ಮತ್ತೆ 20 ಜನರಿಗೆ ಕೊರೊನಾ ಪಾಜಿಟಿವ್ ದೃಢಪಟ್ಟ ವರದಿ ಬಂದಿದೆ. ರಬಕವಿ-ಬನಹಟ್ಟಿಯಲ್ಲಿ 4 ಹಾಗು ತೇರದಾಳ ಪಟ್ಟಣದಲ್ಲಿ 16 ಜನರಿಗೆ ಸೋಂಕು ತಗುಲಿದೆ.
ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿ ವೇಗವಾಗಿ ರ್ಯಾಪಿಡ್ ಕಿಟ್‍ಗಳ ಮೂಲಕ ಪರೀಕ್ಷೆ ನಡೆಸುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ರಬಕವಿ-ಬನಹಟ್ಟಿ, ತೇರದಾಳ ಹಾಗು ಮಹಾಲಿಂಗಪೂರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಕಂಟೈನ್ಮೆಂಟ್ ವಲಯಗಳು ಹೆಚ್ಚಾಗುತ್ತಿವೆ. ಜನತೆ ಮುಂಜಾಗ್ರತಾ ಕ್ರಮ ಹಾಗು ನಿಯಮಗಳನ್ನು ಪಾಲಿಸುವ ಮೂಲಕ ರೋಗ ನಿಯಂತ್ರಣಕ್ಕೆ ಮುಂದಾಗಬೇಕಿದೆ.
ಇತ್ತೀಚಿನ ವರದಿಗಳ ಪ್ರಕಾರ ಕಳೆದ ವಾರದಿಂದ ಪ್ರತಿ ದಿನ 150 ರಿಂದ 300 ರವರೆಗೆ ಕೊರೊನಾ ಶಂಕಿತರ ಪರೀಕ್ಷೆ ನಡಸುತ್ತಿದ್ದು, ಅತಿ ವೇಗವಾಗಿ ಸಮುದಾಯದಲ್ಲಿ ಹರಡಬಾರದೆಂಬ ಸದುದ್ದೇಶದಿಂದ ಎಲ್ಲರ ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ ಶೇ. 10 ರಿಂದ 15 ರಷ್ಟು ಜನರಿಗೆ ಕೋವಿಡ್-19 ದೃಢಪಡುತ್ತಿರುವದು ಆತಂಕಕ್ಕೆ ಎಡೆಮಾಡುತ್ತಿದೆ.

Social Plugin