ಬನಹಟ್ಟಿ ಬಸ್ ನಿಲ್ದಾಣ ವೀಕ್ಷಣೆ ಮಾಡಿದ ಶಾಸಕ ಸಿದ್ದು ಸವದಿ.

ಬಸ್ ನಿಲ್ದಾಣ ವೀಕ್ಷಿಸಿದ ಶಾಸಕ ಸಿದ್ದು ಸವದಿ

ರಬಕವಿ-ಬನಹಟ್ಟಿ,ಅ4: ತಾಲೂಕಾ ಕೇಂದ್ರವಾಗಿರುವ ರಬಕವಿ-ಬನಹಟ್ಟಿಯ ಬಸ್ ನಿಲ್ದಾಣವನ್ನು ಶಾಸಕ ಸಿದ್ದು ಸವದಿ ವೀಕ್ಷಣೆ ನಡೆಸಿದರು.

ಬನಹಟ್ಟಿ ಬಸ್ ನಿಲ್ದಾಣ ಆವರಣದೊಳಗೆ ಸುಸಜ್ಜಿತ ಶೌಚಾಲಯವಿಲ್ಲದ ಕಾರಣ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದರು. ಈ ಕುರಿತು ತಕ್ಷಣವೇ ಶೌಚಾಲಯ ಪ್ರಾರಂಭಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಂಡುವಂತೆ ಸೂಚಿಸಿದರು. ಪಟ್ಟಣದ ಪ್ರಮುಖ ರಸ್ತೆಗಳ ಅಗಲೀಕರಣ ಸಂದರ್ಭ ತಡೆಗೋಡೆ ಇಲ್ಲದೆ ಬಸ್ ನಿಲ್ದಾಣದ ಜನತೆ ಸಮಸ್ಯೆ ಎದುರಿಸುತ್ತಿದ್ದರು. ಇವೆಲ್ಲವನ್ನೂ ವೀಕ್ಷಿಸಿ ತಡೆಗೋಡೆಯೊಂದಿಗೆ ಇತರೆ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭ ರಾಜು ಅಂಬಲಿ, ಆನಂದ ಕಂಪು, ಕುಮಾರ ಕದಂ, ಯೂನಸ್ ಚೌಗಲಾ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಸೇರಿದಂತೆ ಇತರರು ಇದ್ದರು.