ತೇರದಾಳ : ಕೊರೋನಾ ಎಂಬ ಕಣ್ಣಿಗೆ ಕಾಣದ ವೈರಸ್ ಇಡಿ ಪ್ರಪಂಚವನ್ನೇ ತನ್ನ ಕಪಿಮುಷ್ಠಿಯಲ್ಲಿ ಹಿಡಿದುಕೊಂಡಿದೆ ಎನ್ನಬಹುದು.ಇದರಿಂದ ಇಡಿ ಜೀವ ಜಗತ್ತು ತತ್ತರಿಸಿಹೋಗಿದೆ. ಎಲ್ಲಾಕಡೆಗೂ ಕೊರೋನಾದೇ ಚರ್ಚೆ. ಟಿ.ವ್ಹಿ.ಆನ್ ಮಾಡಿದರೇ ಸಾಕು ಅಲ್ಲಿ ಇಷ್ಟು ಪಜಟಿವ್ಹ ಇಲ್ಲಿ ಇಷ್ಟು ಪಜಟಿವ್ಹ ಎನ್ನುವುದನ್ನೇ ಕೇಳುತ್ತೇವೆ ಹೊರತು ಮತ್ತೇನನ್ನು ಕೇಳುವುದಿಲ್ಲ. ಇಷ್ಟೊಂದು ಮನೆಮಾತಾಗಿರುವ ಕೊರೋನಾ ವೈರಸ್ ಎಲ್ಲರನ್ನು ಮನಸೊ ಇಚ್ಛೆ ಹೊರಗೆ ಬರದಂತೆ ತಡೆಗೋಡೆ ನಿರ್ಮಿಸಿದೆ. ಹೀಗಾಗಿ ಈ ಕರೋನಾ ಎಂಬ ಮಹಾಮಾರಿಯು ಇಡಿ ದೇಶದ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ನಿಟ್ಟಿನಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಲು ನಾಗಾಲೋಟದಿಂದ ಸಾಗುತ್ತಲಿದೆ ಎಂದು ಹೇಳಬಹುದು.
ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಸರಕಾರವು ಇದರ ನಿಯಂತ್ರಣಕ್ಕಾಗಿ ಸಾಕಷ್ಟು ಕಸರತ್ತುಗಳನ್ನು ಮಾಡುತ್ತಲೇ ಇದೆ. ಆರೋಗ್ಯ ಇಲಾಖೆ,ಪೌರಾಡಳಿತ ಇಲಾಖೆ,ಪೋಲಿಸ್ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಹಗಲಿರುಳು ಶ್ರಮಿಸುತ್ತಲೇ ಇವೆ.ಇದು ಅಷ್ಟೇ ಅವಶ್ಯವಾಗಿದೆ.ವಾಸ್ತವವಾಗಿ ಇಂದಿನ ಪರಿಸ್ತಿತಿ ತುಂಬಾ ಸೂಕ್ಷ್ಮವಾಗಿದೆ. ರಾಜಕೀಯ ನಾಯಕರುಗಳು ಸಹ ನಾವೆಲ್ಲ ಕೊರೋನಾ ಜೋತೆ ಬದುಕಬೇಕಾಗಿದೆ ಎಂದು ಹೇಳುತ್ತಿದ್ದಾರೆ. ಅಂದ ಬಳಿಕ ವಿಷಯ ತುಂಬಾ ನಾಜೂಕಾಗಿದೆ ಹೀಗಿರುವಾಗ ನಾಜೂಕಾಗಿಯೇ ಜೀವನ ನಡೆಸಬೇಕಾಗಿದೆ. ಸರಕಾರವೇ ಎಲ್ಲರಿಗೂ ಕರೋನಾ ಜೋತೆ ಜೀವನ ಮಾಡಿ ಎಂದು ಹೇಳಿದೆ. ಇದರಿಂದ ನಾವೆಲ್ಲ ಇಂದು ಸರಕಾರ ಹೇಳಿದ ಸುರಕ್ಷಾ ಕ್ರಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ನಡೆಸಬೇಕಾಗಿದೆ.ಇದನ್ನು ಬಿಟ್ಟು ನಮಗೆ ಅನ್ಯ ಮಾರ್ಗವಿಲ್ಲ ಹೀಗಾಗಿ ಮಾಡು ಇಲ್ಲವೆ ಮಡಿ ಎನ್ನುವ ಹಾಗಾಗಿದೆ ಇಂದಿನ ನಮ್ಮ ಸ್ಥಿತಿ.ಇದೊಂದು ಕಡೆ ಆದರೆ ಈ ಕೊವಿಡ್ ಕಾರಣದಿಂದ ಹಲವಾರು ಪಟ್ಟಣಗಳಲ್ಲಿ ಸಾಕಷ್ಟು ಕೆಲಸ ಕಾರ್ಯಗಳು ಹಾಗೇ ಉಳಿದು ಪಟ್ಟಣಗಳು ಅವ್ಯವಸ್ಥೆಯ ಆಗರಗಳಾಗುತ್ತಿವೆ ಎಂದು ತಿಳಿದುಬರುತ್ತಿದೆ. ಅದರ ಹಾಗೆ ತೇರದಾಳ ಪಟ್ಟಣವು ಹೊರತಾಗಿಲ್ಲ ಎಂದು ಹೇಳಬಹುದು.
ಪಟ್ಟಣದ ಮುಖ್ಯ ರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ ಅಲ್ಲದೆ ಪಟ್ಟಣದ ಪ್ರವೇಶದ ಪ್ರಮುಖ ರಸ್ತೆಗಳು ಸಹ ಹದಗೆಟ್ಟು ಹೋಗಿವೆ ಇಲ್ಲಿ ಬರುವ ಸಾಕಷ್ಟು ನಾಗರಿಕರು ಇಲ್ಲಿಯ ವ್ಯವಸ್ಥಯನ್ನು ಕಂಡು ಛಿಮಾರಿ ಹಾಕುತ್ತಿದ್ದಾರೆ.ಸಾಕಷ್ಟು ಸಮಾಜ ಸೇವಕರು, ಸಾಮಾಜಿಕ ಚಿಂತಕರು,ಹೋರಾಟಗಾರರನ್ನು ಹೊಂದಿದ ತೇರದಾಳ ಪಟ್ಟಣದಲ್ಲಿ ಹೀಗಾಗಿದ್ದು ತೇರದಾಳ ನಾಗರಿಕರಿಗೆ ತುಂಬಾ ಅಸಮಾಧಾನ ಉಂಟಾಗಿದೆ ಎಂದು ಹೇಳಬಹುದು. ಮುಖ್ಯರಸ್ಥೆಗಳೆಲ್ಲ ಹದಗೆಟ್ಟು ಹೋಗಿವೆ,ಎಲ್ಲೆಂದರಲ್ಲಿ ತಗ್ಗು ದಿನ್ನೆಗಳು ಬಿದ್ದು ವಾಹನಗಳು ಸಂಚರಿಸಲು ತುಂಬಾ ಅನಾನುಕೂಲವಾಗುತ್ತಲಿದೆ.ಇಡೀ ಪಟ್ಟಣವನ್ನೊಮ್ಮೆ ಸುತ್ತಿ ಬಂದು ಸುತ್ತಿ ಬಂದು ನೋಡಿದರೆ ಇನ್ನೂ ಸಾಕಷ್ಟು ಕೆಲಸಗಳು ಮಾಡದೆ ಹಾಗೇ ಉಳಿದಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಕೊವಿಡ್ ಕಾರಣಕ್ಕಾಗಿ ಸ್ವಲ್ಪ ವಿಳಂಬವಾಗುತ್ತಲಿದೆ ಎಂಬ ಉತ್ತರ ಕೇಳಿ ಬರುತ್ತಲಿದೆ.ಆದರೇ ಸರಕಾರವೆ ಈ ಹಿಂದೇಯೇ ಹೇಳಿದೆ, ನಾವೆಲ್ಲ ಕೊರೋನಾ ಜೋತೆಗೆನೇ ಜೀವನ ನಡೆಸಬೇಕು ಅಂತಾ . ಹೀಗಾಗಿ ಹೇಗೆ ಈಗ ಕೊರೋನಾ ಜೋತೆ ಜೀವನ ನಡೆಸುತ್ತಿದ್ದೆವೆಯೋ ಇದೇ ರೀತಿಯಾಗಿ ಪಟ್ಟಣದಲ್ಲಿ ಮಾಡಬೇಕಾದ ಕೆಲಸಕಾರ್ಯಗಳನ್ನೂ ಸಹ ಕೊರೋನಾ ಜೋತೆಗೆನೆ ಮಾಡಿದರೆ ಆಗುವುದಿಲ್ಲವೆ ?ಎಂದು ಪಟ್ಟಣದ ಹಿತಚಿಂತಕರು ಪ್ರಶ್ನಿಸುತ್ತಿದ್ದಾರೆ.ಎಷ್ಟು ದಿನ ಅಂತಾ ನಾವು ಈ ಹದಗೆಟ್ಟ ಅವ್ಯವಸ್ಥೆಯಲ್ಲಿ ಜೀವನ ಮಾಡೊದು.ಇಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಅಧಿಕಾರಿ ವರ್ಗದವರಾಗಲಿ ಅಥವಾ ಸ್ಥಾನಿಕ ರಾಜಕೀಯ ನಾಯಕರುಗಳಾಗಲಿ ಈ ಬಗ್ಗೇ ಗಮನ ಹರಿಸಿ ಸರಿಪಡಿಸುವುದು ನಿಮ್ಮ ಕರ್ತವ್ಯವಾಗಬೇಕಾಗಿದೆ.
ತೇರದಾಳ ಪಟ್ಟಣದ ಹಲವಾರು ಹಿರಿಯ ಜೀವಿಗಳು ಯುವಮಿತ್ರರು,ಸಾಕಷ್ಟು ಸಂಘಸಂಸ್ಥಗಳು ಸೇರಿ ಸಾಕಷ್ಟು ರೀತಿಯಿಂದ ಹಗಲಿರುಳೆನ್ನದೇ ಐತಿಹಾಸಿಕ ಹೋರಾಟ ಮಾಡಿ ತೇರದಾಳ ಪಟ್ಟಣವನ್ನು ತಾಲೂಕನ್ನಾಗಿ ಮಾಡಿದ್ದಾರೆ. ಹೀಗಿರುವಾಗ ತಾಲೂಕಾದ ಪಟ್ಟಣವನ್ನು ಇನ್ನಷ್ಟು ಅಭಿವೃದ್ಧಿ ಕೆಲಸ ಕಾರ್ಯ ಮತ್ತು ಪಟ್ಟಣದ ಸೌಂದರ್ಯ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೊರಗಿನಿಂದ ತಮ್ಮ ಕೆಲಸ ಕಾರ್ಯಗಳಿಗೆ ತೇರದಾಳ ಪಟ್ಟಣಕ್ಕೆ ಬರುವ ಜನತೆ ಪಟ್ಟಣದ ಸ್ಥಿತಿಗತಿ ನೋಡಿ ನಮ್ಮನ್ನು ಅಳೆಯುತ್ತಾರೆ. ಇದೊಂದು ನಮ್ಮ ಗೌರವದ ಪ್ರಶ್ನೆಯಾಗಿದೆ. ಹೀಗಿರುವಾಗ ಪಟ್ಟಣದ ಸೌಂದರ್ಯ, ಸ್ವಚ್ಛತೆ ಕಾಪಾಡಿಕೊಂಡು ಹೋಗುವ ಹೊಣೆ ಹೊತ್ತ ಇಲಾಖೆಯವರು ಈ ಬಗ್ಗೆ ಸ್ವಲ್ಪು ಗಮನ ಹರಿಸಿ ಪಟ್ಟಣವನ್ನು ಸುಧಾರಣೆ ಮಾಡಿ ಪುಣ್ಯಕಟ್ಟಿಕೊಳ್ಳಿ ಎಂದು ಸಾಕಷ್ಟು ಹಿರಿಯ ಜೀವಿಗಳು ನೋವಿನಿಂದ ಸಂಬಂಧಿಸಿದ ಎಲ್ಲ ಅಧಿಕಾರಿ ವರ್ಗದವರಿಗೆ ಹಾಗೂ ರಾಜಕೀಯ ನಾಯಕರುಗಳಿಗೆ ಈ ಮೂಲಕ ತಿಳಿಸಿದ್ದಾರೆ.
Social Plugin