ತೇರದಾಳ ವಿಧಾನಸಭಾ ಕ್ಷೇತ್ರದ ಶಾಸಕ ಸಿದ್ದು ಸವದಿ ತಮ್ಮ ಎರಡು ವರ್ಷಗಳ ಶಾಸಕಾವಧಿ ಸಾಧನೆಯ ಕರಪತ್ರ ಬಿಡುಗಡೆಗೊಳಿಸಿದರು.
ಎರಡು ವರ್ಷಗಳ ಶಾಸಕಾವಧಿ ಸಾಧನೆಯ ಕರಪತ್ರ ಬಿಡುಗಡೆ
ರಬಕವಿ-ಬನಹಟ್ಟಿ,ಅ30: ತೇರದಾಳ ವಿಧಾನಸಭಾ ಕ್ಷೇತ್ರದ ಶಾಸಕ ಸಿದ್ದು ಸವದಿ ಎರಡು ವರ್ಷಗಳ ಅಧಿಕಾರವಧಿಯಲ್ಲಿ ಮಾಡಿದ ಸಾಧನೆಗಳ ಪಟ್ಟಿ ಸಮೇತ ಕರಪತ್ರವನ್ನು ಪಕ್ಷದ ಕಾರ್ಯಾಲಯ ಆವರಣದಲ್ಲಿ ಬಿಡುಗಡಗೊಳಿಸಿದರು.
ಇದೇ ಸಂದರ್ಭ ಶಾಸಕ ಸಿದ್ದು ಸವದಿ ಮಾತನಾಡಿ, ಪ್ರವಾಹ ಹಾಗು ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮಹತ್ವದ ಯೋಜನೆಗಳನ್ನು ಕ್ಷೇತ್ರಾದ್ಯಂತ ಒದಗಿಸುವ ಮೂಲಕ ಸಮಾಧಾನ ತಂದಿದೆ ಎಂದರು.
ನೂರು ಕೋಟಿ ರೂ.ಗಳಲ್ಲಿ ರಸ್ತೆ ಹಾಗು ಸೇತುವೆ ಕಾಮಗಾರಿ, 4 ಕೋಟಿಗೂ ಅಧಿಕ ರೂ.ಗಳಲ್ಲಿ ಸಮುದಾಯ ಭವನ ಹಾಗು ದೇವಸ್ಥಾನ ನಿರ್ಮಾಣ, ಚಿಕಿತ್ಸಾ ಪರಿಹಾರ ಧನ, ಶಾಲಾ ಕೊಠಡಿ ಹಾಗು ಜೀರ್ಣೊದ್ಧಾರ, 500 ಜನ ಫಲಾನುಭವಿಗಳಿಗೆ ಉದ್ಯೋಗಕ್ಕಾಗಿ ಸಹಾಯ ಧನ ಹಾಗು ಸಾಲ. ಕೊರೊನಾ ಬಿಕ್ಕಟ್ಟಿನ ಸಂದರ್ಭ 25 ಸಾವಿರ ಕುಟುಂಬಗಳಿಗೆ 1.38 ಕೋಟಿ ರೂ.ಗಳ ದಿನಸಿ ಸಾಮಗ್ರಿ ಕಿಟ್ ವಿತರಣೆ, ನೇಕಾರ ಸಮ್ಮಾನ ಯೋಜನೆಯಡಿ ಕೈಮಗ್ಗ ಹಾಗು ಪಾವರ್‍ಲೂಮ್ ನೇಕಾರರಿಗೆ ತಲಾ 2 ಸಾವಿರ ಸಹಾಯ ಧನ. ನೇಕಾರರ 21.84 ಕೋಟಿ ರೂ.ಗಳ ಸಾಲಮನ್ನಾ. ರಬಕವಿ-ಬನಹಟ್ಟಿ, ತೇರದಾಳ ಹಾಗು ಮಹಾಲಿಂಗಪೂರ ಪಟ್ಟಣಗಳಲ್ಲಿ ವಿವಿಧ ಯೋಜನೆಯಡಿ ಮೂಲಭೂತ ಸೌಕರ್ಯಗಳಿಗೆ 40 ಕೋಟಿ ರೂ.ಗಳ ಮಂಜೂರು ಸೇರಿದಂತೆ ಹಲವಾರು ಕಾರ್ಯ ಯೋಜನೆಗಳು ನಡೆಯುತ್ತಿರುವದು ಸಂತಸವೆನಿಸುತ್ತದೆ ಎಂದರು.
ಇದೇ ಸಂದರ್ಭ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ, ರಬಕವಿ-ಬನಹಟ್ಟಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ತೇರದಾಳ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ತೇರದಾಳ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲಕ್ಕಪ್ಪ ಪಾಟೀಲ, ಪ್ರಧಾನ ಕಾರ್ಯದರ್ಶಿ ಆನಂದ ಕಂಪು, ಶಂಕರ ಹುನ್ನೂರ, ಭೀಮಶಿ ಪಾಟೀಲ ಉಪಸ್ಥಿತರಿದ್ದರು.
Social Plugin