ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯದಲ್ಲಿ ನೀರಿನ ಹರಿವಿನ ಪ್ರಮಾಣದಲ್ಲಿ ಭಾರಿ ಇಳಿಮುಖ ಕಂಡಿರುವದು.
`ಮಹಾ’ ನೀರು ಹರಿವಿನಲ್ಲಿ ಭಾರಿ ಇಳಿಕೆ: ಹಿಪ್ಪರಗಿ ಆಣೆಕಟ್ಟೆಯಲ್ಲಿ ಮುಚ್ಚಿದ 11 ಗೇಟ್‍ಗಳು
ರಬಕವಿ-ಬನಹಟ್ಟಿ,30: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಿಂದ, ಅಲ್ಲಿನ ಕೃಷ್ಣಾ ನದಿಯ ಎಲ್ಲ ಜಲಾಶಯಗಳ ನೀರಿನ ಸ್ಥಿತಿಗತಿ, ಸುರಿಯುತ್ತಿರುವ ಮಳೆಯ ಬಗ್ಗೆ ನಿತ್ಯವೂ ನಿಗಾ ವಹಿಸಲಾಗುತ್ತಿದ್ದು, ಸದ್ಯದ ಸ್ಥಿತಿಯಲ್ಲಿ `ಮಹಾರಾಷ್ಟ್ರದಿಂದ ಬರುವ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನಲೆ ಆಣೆಕಟ್ಟೆಯ 22 ಗೇಟ್‍ಗಳ ಪೈಕಿ 11 ಗೇಟ್‍ಗಳನ್ನು ಮುಚ್ಚಲಾಗಿದ್ದು, ಇನ್ನುಳಿದ 11 ಗೇಟ್‍ಗಳಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಜಲಾಶಯದಲ್ಲಿ ರವಿವಾರದಂದು ನೀರಿನ ಮಟ್ಟ 522.05 ಮೀ.ನಷ್ಟಿದ್ದು, 39 ಸಾವಿರ ಕ್ಯುಸೆಕ್‍ನಷ್ಟು ನೀರಿನ ಒಳಹರಿವಿದ್ದು, 18 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಹಿಪ್ಪರಗಿ ಜಲಾಶಯದ ನೀರಿನ ಸಂಗ್ರಹ ಮಟ್ಟ 524.7 ರಷ್ಟಿದೆ. 2.54 ಟಿಎಂಸಿ ನೀರಿನ ಸಂಗ್ರಹ ಪ್ರಮಾಣವಿದ್ದು, ಬರುವ ದಿನಗಳಲ್ಲಿ ಮತ್ತಷ್ಟು ಗೇಟ್‍ಗಳನ್ನು ಬಂದ್ ಮಾಡುವ ಮೂಲಕ ನೀರಿನ ಸಂಗ್ರಹದಿಂದ ಮುಂದುವರೆಯುವ ಮುನ್ಸೂಚನೆ ಕಾಣುತ್ತಿದ್ದು, ಮಳೆಯಾದಲ್ಲಿ ಮತ್ತೇ ನೀರನ್ನು ಹೊರಹಾಕುವ ಮೂಲಕ ಈ ಬಾರಿ ಪ್ರವಾಹ ನಿಯಂತ್ರಿಸುವ ಯೋಚನೆ ರಾಜ್ಯ ಸರ್ಕಾರದ್ದಾಗಿದೆ.
Social Plugin