ಶ್ರೀಅಲ್ಲಮಪ್ರಭು ದೇವರ ಜಾತ್ರೆಯ ನಿಮಿತ್ಯ ಸಾಂಕೇತಿಕ ಕುಸ್ತಿ ತೇರದಾಳ : ಪಟ್ಟಣದ ಶ್ರೀಅಲ್ಲಮಪ್ರಭು ದೇವರ ಜಾತ್ರೆಯ ನಿಮಿತ್ಯ ಸಂಪ್ರದಾಯದಂತೆ ಕುಸ್ತಿ ಕಮೀಟಿಯವರು ಲಕ್ಕವ್ವನ ದೇವಸ್ಥಾನ ಹತ್ತಿರವಿರುವ ಕುಸ್ತಿ ಮೈದಾನದಲ್ಲಿ ಸಾಂಕೇತಿಕ ಕುಸ್ತಿಯನ್ನು ಆಡಿಸಿದರು. 

 
ತೇರದಾಳ ಪಟ್ಟಣದ ಲಕ್ಕವ್ವನ ದೇವಸ್ಥಾನದ ಹತ್ತಿರವಿರುವ ಕುಸ್ತಿ ಮೈದಾನವನ್ನು ಪಟ್ಟಣದ ಹಿರಿಯರು ಪೂಜೆಗೈದರು.


 
ಜಾಹಿರಾತುದಾರರು : ಗಂಗೋತ್ರಿ ನರ್ಸರಿ. ಬೆಳಗಾವಿ ರೋಡ ಚಿಕ್ಕೋಡಿ, ಮಾಲಿಕರು : ಕಲ್ಮೇಶ. ಶೇಡಬಾಳ. ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ ಹಾಗೂ ಸುಪ್ರಸಿದ್ಧ ಉತ್ಕಷ್ಟವಾದ ಗಾರ್ಡನ್ ತಯಾರಕರು.ಸಂಪರ್ಕಿಸಿ : 9482919983.... 9535719053...ಜಾಹಿರಾತುದಾರರು ; ಇನಾಮದಾರ ಡಿಜಿಟಲ್ ಸೌಂಡ್ ಸರಕಾರಿ ಕನ್ನಡ ಶಾಲೆ ಹಿಂದೆ ತೇರದಾಳ ಮಾಲಿಕರು : ಸರವರ್‍ಖಾನ್. ಡಿ. ಇನಾಮದಾರ ಎಲ್ಲ ತರಹದ ಸೌಂಡ್ ಸಿಸ್ಟಿಮ್‍ಗಳಿಗಾಗಿ ಸಂಪರ್ಕಿಸಿ : 9036074811.. 9118206411...ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

ಶ್ರೀಅಲ್ಲಮಪ್ರಭು ದೇವರ ಜಾತ್ರೆಯ ನಿಮಿತ್ಯ ಸಾಂಕೇತಿಕ ಕುಸ್ತಿ 

ತೇರದಾಳ : ಪಟ್ಟಣದ ಶ್ರೀಅಲ್ಲಮಪ್ರಭು ದೇವರ ಜಾತ್ರೆಯ ನಿಮಿತ್ಯ ಸಂಪ್ರದಾಯದಂತೆ ಕುಸ್ತಿ ಕಮೀಟಿಯವರು ಲಕ್ಕವ್ವನ ದೇವಸ್ಥಾನ ಹತ್ತಿರವಿರುವ ಕುಸ್ತಿ ಮೈದಾನದಲ್ಲಿ ಸಾಂಕೇತಿಕ ಕುಸ್ತಿಯನ್ನು ಆಡಿಸಿದರು. ದೇಶಾದ್ಯಂತ ಕೊರೊನಾ ಮಹಾಮಾರಿ ವೈರಾಣುವಿನ ಅಬ್ಬರ ಹೆಚ್ಚಾಗಿದ್ದು ಅದನ್ನು ತಡೆಗಟ್ಟಲು ಸರಕಾರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಜನರು ಗುಂಪುಗೂಡದಂತೆ ಜಾತ್ರೆ, ಸಂತೆ, ಮದುವೆಗಳಂತವುಗಳನ್ನು ನಿಷೇಧ ಮಾಡಿದೆ. ಅದರಂತೆ ಸರಕಾರದ ಆದೇಶವನ್ನು ಪಾಲಿಸಲು ಶ್ರೀಅಲ್ಲಮಪ್ರಭುದೇವರ ಜಾತ್ರೆಯನ್ನು ರದ್ದುಗೊಳಿಸಲಾಗಿತ್ತು. ಈ ವರ್ಷದ ಜಾತ್ರೆಯನ್ನು ಸಂಪ್ರದಾಯದಂತೆ ಸರಳವಾಗಿ ಅರ್ಚಕರು ಮಾತ್ರ ಸೇರಿಕೊಂಡು ಮಾಡಲಾಗಿತ್ತು. ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯನ್ನು ನಿಲ್ಲಿಸಬಾರದು ಎಂದು ಕುಸ್ತಿ ಕಮೀಟಿಯ ಹಿರಿಯರು ಕುಸ್ತಿ ಮೈದಾನವನ್ನು ಪೂಜೆಗೈದು ಸಾಂಕೇತಿಕವಾಗಿ ಐದು ಜೋಡಿಯನ್ನು ಕುಸ್ತಿ ಆಡಲು ಹಚ್ಚಿ ಬಿಡಿಸಿದರು. ಉತ್ತರ ಕರ್ನಾಟಕದಲ್ಲಿ ಶ್ರಾವಣ ಮಾಸದಲ್ಲಿ ಕೊನೆಯ ಸೋಮವಾರ ಜಾತ್ರೆಯ ನಂತರ ಮಂಗಳವಾರ ಶ್ರೀಅಲ್ಲಮಪ್ರಭು ದೇವರ ಜಾತ್ರೆಯ ನಿಮಿತ್ಯ ಹಮ್ಮಿಕೊಂಡ ಕುಸ್ತಿಗಳು ಪ್ರಸಿದ್ಧ. ಕುಸ್ತಿಯನ್ನು ನೋಡಲು ದೂರದ ಊರಿನಿಂದ ಕುಸ್ತಿ ಪ್ರೇಮಿಗಳು ಬಂದು ಕುಸ್ತಿ ವೀಕ್ಷಣೆ ಮಾಡಿ ಸಂತೋಷ ಪಡುತ್ತಿದ್ದರು. ದೇಶ ಹೊರ ದೇಶದಿಂದ ಕುಸ್ತಿ ಪಟುಗಳು ಬಂದು ತಮ್ಮ ಕೈಚಳಕವನ್ನು ತೋರಿಸಿ ಕುಸ್ತಿ ಪ್ರೇಮಿಗಳಿಂದ ಮೆಚ್ಚುಗೆಯನ್ನು ಪಡೆಯುತ್ತಿದ್ದರು ಅಲ್ಲದೇ ಕಮೀಟಿಯವರು ಕೊಡುವ ಬಹುಮಾನವನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈ ವರ್ಷ ಮಾತ್ರ ಮಹಾಮಾರಿ ಕೊರೊನಾ ವೈರಾಣುವಿನದಿಂದಾಗಿ ಕುಸ್ತಿ ಪ್ರೇಮಿಗಳಿಗೆ ನಿರಾಶೆಯನ್ನುಂಟು ಮಾಡಿದೆ. ಸಂಪ್ರದಾಯದಂತೆ ಐದು ಜೋಡಿಗಳನ್ನು ಮಾತ್ರ ಕುಸ್ತಿ ಆಡಿಸಿದರು. 

ತೇರದಾಳ ಪಟ್ಟಣದ ಲಕ್ಕವ್ವನ ದೇವಸ್ಥಾನದ ಹತ್ತಿರವಿರುವ ಕುಸ್ತಿ ಮೈದಾನದಲ್ಲಿ ಸಾಂಕೇತಿಕವಾಗಿ ಕುಸ್ತಿ ಆಡುತ್ತಿರುವ ಕುಸ್ತಿ ಪಟುಗಳು.

ಈ ಸಂದರ್ಭದಲ್ಲಿ ರೇವಣೇಶ ಹಿರೇಮಠ ಹಾಗೂ ಬಸಯ್ಯ ಹಿರೇಮಠ ಕುಸ್ತಿ ಮೈದಾನವನ್ನು ಪೂಜೆಗೈದರು. ವಿಜಯಮಹಾಂತ ನಾಡಗೌಡ, ಬಸಪ್ಪ ಮುಕರಿ, ಜಿನ್ನಪ್ಪ ಸವದತ್ತಿ, ಬುಜಬಲಿ ಕೆಂಗಾಲಿ, ನಿಂಗಪ್ಪ ಮಾಲಗಾವಿ, ಮುರಿಗೆಪ್ಪ ಹನಗಂಡಿ, ಪರಪ್ಪ ಅಥಣಿ, ಬಸವರಾಜ ಬಾಳಿಕಾಯಿ, ಮಲ್ಲಪ್ಪ ಮುಕರಿ, ಬಸವರಾಜ ಅವರಾದಿ, ರಮೇಶ ಮುಕರಿ, ಹನಮಂತ ಪುರಾಣಿಕ, ಷಣ್ಮುಖ ಗಾಡದಿ, ಯಾಶೀನ ಸಾತಬಚ್ಚೆ ಸೇರಿದಂತೆ ಇನ್ನಿತರರು ಇದ್ದರು. 


ಜಾಹಿರಾತು...