ತೇರದಾಳ ಪಟ್ಟಣದ ಶ್ರೀಅಲ್ಲಮಪ್ರಭು ದೇವರ ದೇವಾಲಯಕ್ಕೆ ಜೆಡಿಎಸ್ ಬಾಗಲಕೋಟ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಬೇಟಿ ನೀಡಿದರು. ಭೂ ಕಾಯ್ದೆ ತಿದ್ದುಪಡಿ ರೈತರ ವಿರೋಧಿ ಆಗಿದೆ - ಜಿಲ್ಲಾಧ್ಯಕ್ಷ ಮಾವಿನಮರದ ತೇರದಾಳ : ಕೇಂದ್ರ ಸರಕಾರ ಯಾವುದೇ ಸದನದಲ್ಲಿ ಚರ್ಚೆ ಮಾಡದೇ ಎಪಿಎಮ್‍ಸಿ ಮಾರುಕಟ್ಟೆಯನ್ನು ಮುಕ್ತ ಮಾಡಿದ್ದು ಜನ ವಿರೋಧಿ ನೀತಿಯಾಗಿದೆ. ಹಾಗೂ ರಾಜ್ಯ ಸರಕಾರ ಜಾರಿಗೆ ತಂದಿರುವ ಭೂ ಕಾಯ್ದೆ ತಿದ್ದುಪಡಿ ರೈತರ ವಿರೋಧಿ ಆಗಿದೆ ಎಂದು ಜೆಡಿಎಸ್ ಬಾಗಲಕೋಟ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು. 

 



ಜಾಹಿರಾತುದಾರರು : ಗಂಗೋತ್ರಿ ನರ್ಸರಿ. ಬೆಳಗಾವಿ ರೋಡ ಚಿಕ್ಕೋಡಿ, ಮಾಲಿಕರು : ಕಲ್ಮೇಶ. ಶೇಡಬಾಳ. ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ ಹಾಗೂ ಸುಪ್ರಸಿದ್ಧ ಉತ್ಕಷ್ಟವಾದ ಗಾರ್ಡನ್ ತಯಾರಕರು.ಸಂಪರ್ಕಿಸಿ : 9482919983.... 9535719053...ಜಾಹಿರಾತುದಾರರು ; ಇನಾಮದಾರ ಡಿಜಿಟಲ್ ಸೌಂಡ್ ಸರಕಾರಿ ಕನ್ನಡ ಶಾಲೆ ಹಿಂದೆ ತೇರದಾಳ ಮಾಲಿಕರು : ಸರವರ್‍ಖಾನ್. ಡಿ. ಇನಾಮದಾರ ಎಲ್ಲ ತರಹದ ಸೌಂಡ್ ಸಿಸ್ಟಿಮ್‍ಗಳಿಗಾಗಿ ಸಂಪರ್ಕಿಸಿ : 9036074811.. 9118206411...ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

 ತೇರದಾಳ ಪಟ್ಟಣದ ಶ್ರೀಅಲ್ಲಮಪ್ರಭು ದೇವರ ದೇವಾಲಯಕ್ಕೆ ಜೆಡಿಎಸ್ ಬಾಗಲಕೋಟ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಬೇಟಿ ನೀಡಿದರು. 

ಭೂ ಕಾಯ್ದೆ ತಿದ್ದುಪಡಿ ರೈತರ ವಿರೋಧಿ ಆಗಿದೆ - ಜಿಲ್ಲಾಧ್ಯಕ್ಷ ಮಾವಿನಮರದ ತೇರದಾಳ : ಕೇಂದ್ರ ಸರಕಾರ ಯಾವುದೇ ಸದನದಲ್ಲಿ ಚರ್ಚೆ ಮಾಡದೇ ಎಪಿಎಮ್‍ಸಿ ಮಾರುಕಟ್ಟೆಯನ್ನು ಮುಕ್ತ ಮಾಡಿದ್ದು ಜನ ವಿರೋಧಿ ನೀತಿಯಾಗಿದೆ. ಹಾಗೂ ರಾಜ್ಯ ಸರಕಾರ ಜಾರಿಗೆ ತಂದಿರುವ ಭೂ ಕಾಯ್ದೆ ತಿದ್ದುಪಡಿ ರೈತರ ವಿರೋಧಿ ಆಗಿದೆ ಎಂದು ಜೆಡಿಎಸ್ ಬಾಗಲಕೋಟ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು. ಪಟ್ಟಣದ ಶ್ರೀಅಲ್ಲಮಪ್ರಭು ದೇವರ ದೇವಾಲಯಕ್ಕೆ ಬೇಟಿ ನೀಡಿದ ಅವರು ಶ್ರೀಅಲ್ಲಮಪ್ರಭು ದೇವರ ದರ್ಶನಾಶೀರ್ವಾದ ಪಡೆದು ಜೆಡಿಎಸ್ ಕಾರ್ಯಕರ್ತರ ಹಾಗೂ ತಾಲೂಕಾ ಹೋರಾಟ ಸಮೀತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. 


ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಪಟ್ಟಣದ ಜನತೆಗೆ ಕೊಟ್ಟಿರುವ ಮಾತಿನಂತೆ ತೇರದಾಳ ಪಟ್ಟಣವನ್ನು ತಾಲೂಕವನ್ನಾಗಿ ಘೋಷಣೆ ಮಾಡಿದ್ದರು. ನಂತರ ಈಗಿನ ಸರಕಾರ ಅದರ ಮುಂದುವರೆದ ಕೆಲಸವನ್ನು ಮಾಡಿಲ್ಲ. ತೇರದಾಳ ತಾಲೂಕಿಗೆ ಬೇಕಾಗುವ ಹಳ್ಳಿಗಳನ್ನು ವಿಂಗಡಣೆ ಮಾಡಿಕೊಡಬೇಕು. ಅಗತ್ಯ ಬಿದ್ದರೆ ಮತ್ತೊಂದು ಬಾರಿ ಹೋರಾಟ ಮಾಡೋಣ. ಹೋರಾಟದ ಸಂಪೂರ್ಣ ನೇತೃತ್ವವನ್ನು ವಹಿಸಿಕೊಳ್ಳಲಾಗುವುದು. ಪಕ್ಷವನ್ನು ಸಂಘಟಣೆ ಮಾಡಲಿಕ್ಕೆ ತಳ ಮಟ್ಟದಿಂದ ಎಲ್ಲ ಜವಾಬ್ದಾರಿ ಹೊರಿಸಿದ್ದಾರೆ. ತಳಮಟ್ಟದಿಂದ ಸಂಘಟಣೆ ಮಾಡಲು ಪ್ರಯತ್ನಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಹಾಗೂ ತಾಲೂಕ ಹೋರಾಟ ಸಮೀತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ಹೋರಾಟ ಸಮೀತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಾ ಹೋರಾಟ ಸಮೀತಿಯ ಅಧ್ಯಕ್ಷ ಬುಜಬಲಿ ಕೆಂಗಾಲಿ, ರೇವಣೇಶ ಹಿರೇಮಠ, ಅನ್ವರ ಸಂಗತ್ರಾಸ, ಕಲ್ಲಪ್ಪ ಕಬಾಡಗಿ, ಮಗೆಪ್ಪಾ ತಾರದಾಳ ಸೇರಿದಂತೆ ಇನ್ನಿತರರು ಇದ್ದರು. ಪ್ರಭು ಹೂಗಾರ ಸ್ವಾಗತಿಸಿ ವಂದಿಸಿದರು. 

 ಜಾಹಿರಾತು....