ಧ್ಯಾನಚಂದ ಭಾರತ ರತ್ನ ಪ್ರಶಸ್ತಿಗೆ ಅರ್ಹರು...ರಬಕವಿ-ಬನಹಟ್ಟಿ,ಅ29: ಹಾಕಿ ಕ್ರೀಡೆಯಲ್ಲಿ ಭಾರತ ಸತತ ಮೂರು ಬಾರಿ ಓಲಂಪಿಕ್ ಬಂಗಾರದ ಪದಕವನ್ನು ಪಡೆಯುವಲ್ಲಿ ಕಾರಣೀಭೂತರಾದ ಹಾಕಿ ಮಾಂತ್ರಿಕ ಧ್ಯಾನಚಂದರು ಭಾರತ ರತ್ನ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ಅಭಿಪ್ರಾಯಪಟ್ಟರು. 

 
ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತವಾಗಿ ಧ್ಯನಚಂದ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿದರು.


ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)... 

ಧ್ಯಾನಚಂದ ಭಾರತ ರತ್ನ ಪ್ರಶಸ್ತಿಗೆ ಅರ್ಹರು 
ರಬಕವಿ-ಬನಹಟ್ಟಿ,ಅ29: ಹಾಕಿ ಕ್ರೀಡೆಯಲ್ಲಿ ಭಾರತ ಸತತ ಮೂರು ಬಾರಿ ಓಲಂಪಿಕ್ ಬಂಗಾರದ ಪದಕವನ್ನು ಪಡೆಯುವಲ್ಲಿ ಕಾರಣೀಭೂತರಾದ ಹಾಕಿ ಮಾಂತ್ರಿಕ ಧ್ಯಾನಚಂದರು ಭಾರತ ರತ್ನ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ಅಭಿಪ್ರಾಯಪಟ್ಟರು. ಅವರು ಶನಿವಾರ ಸ್ಥಳೀಯ ಎಸ್ಟಿಸಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತವಾಗಿ ಧ್ಯಾನಚಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಜರ್ಮನಿಯಲ್ಲಿ ಹಿಟ್ಲರ್ ನೀಡಿದ ಆಮೀಷಗಳನ್ನು ತಿರಸ್ಕರಿಸಿರುವ ಧ್ಯಾನಚಂದರು ಇಂದಿನ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ. ಕ್ರೀಡೆ ಒಬ್ಬ ವ್ಯಕ್ತಿಯನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಸಮರ್ಥರನ್ನಾಗಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಕ್ರೀಡೆಗೂ ಕೂಡಾ ಹೆಚ್ಚಿನ ಮಹತ್ವ ನೀಡಬೇಕು ಎಂದು ಡಾ.ಜುನ್ನಾಯ್ಕರ್ ತಿಳಿಸಿದರು. ಈ ಸಂದರ್ಭದಲ್ಲಿ ದೈಹಿಕ ನಿರ್ದೇಶಕ ಗುರುನಾಥ ಪಾಟೀಲ ಮಾತನಾಡಿ, ಕಾಲೇಜು ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಬಹಳಷ್ಟು ವಿದ್ಯಾರ್ಥಿಗಳು ಇಂದು ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೌಕರಿ ಮಾಡುತ್ತಿರುವುದು ಕೂಡಾ ಹೆಮ್ಮೆಯ ಸಂಗತಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಐಕ್ಯೂಎಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಬೆನ್ನೂರ, ಪೆÇ್ರ.ವೈ.ಬಿ.ಕೊರಡೂರ, ಡಾ.ಮನೋಹರ ಶಿರಹಟ್ಟಿ, ಡಾ.ಪ್ರಕಾಶ ಕೆಂಗನಾಳೆ, ಡಾ.ರೇಶ್ಮಾ ಗಜಕೋಶ, ವಿಶ್ವನಾಥ ಯರಗಟ್ಟಿಕರ್, ರಾಜೇಶ ಧರನಾಯಕ ಸೇರಿದಂತೆ ಅನೇಕರು ಇದ್ದರು.