ಹಿಪ್ಪರಗಿ ಜಲಾಶಯದ ಎಲ್ಲ 22 ಗೇಟ್‍ಗಳ ಮೂಲಕ ಮಹಾರಾಷ್ಟ್ರದಿಂದ ಬಂದಷ್ಟೇ ನೀರನ್ನು ಹೊರಬಿಡಲಾಗುತ್ತಿರುವದು.

 

ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +೯೧ ೯೯೦೨೫೨೩೬೯೮...)... 

ಹಿಪ್ಪರಗಿ ಜಲಾಶಯ: ಎಲ್ಲ 22 ಗೇಟ್‍ಗಳಿಂದ ನೀರು ಹೊರಕ್ಕೆ
 -ಮಲ್ಲಿಕಾರ್ಜುನ ತುಂಗಳ
 ರಬಕವಿ-ಬನಹಟ್ಟಿ,ಅ8:ಕೃಷ್ಣಾ ಜಲಾನಯನ ವ್ಯಾಪ್ತಿ ಹಾಗು ವಿವಿಧ ರಾಜ್ಯದ ಜಲಾಶಯಗಳ ಅಧಿಕಾರಿಗಳ ನಡುವೆ ನಿತ್ಯ ನೀರಿನ ಅಂಕಿ-ಅಂಶ ವಿನಿಮಯ. ಒಳ ಹರಿವು ಹೆಚ್ಚಿರುವ ಕಾರಣ, ನೀರಿನ ಮೂಲದ ಕಡೆ ಸತತ ನಿಗಾ, ಎಷ್ಟು ನೀರು ಬರಬಹುದು? ಎಂಬ ಲೆಕ್ಕಾಚಾರದ ಆಧಾರದಲ್ಲಿ ಹಿಪ್ಪರಗಿ ಜಲಾಶಯದ ನೀರಿನ ನಿಯಂತ್ರಣ, ನಿರ್ವಹಣೆ ಇದರ ಪರಿಣಾಮ ನೀರನ್ನು ಜಲಾಶಯದಿಂದ ಹೊರಬಿಟ್ಟರೂ ನದಿ ಪಾತ್ರದಲ್ಲಿ ಯಾವದೇ ಮಹಾಪೂರ ಘಟಸಿಲ್ಲ. 


 ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಿಂದ, ಅಲ್ಲಿನ ಕೃಷ್ಣಾ ನದಿಯ ಎಲ್ಲ ಜಲಾಶಯಗಳ ನೀರಿನ ಸ್ಥಿತಿಗತಿ, ಸುರಿಯುತ್ತಿರುವ ಮಳೆಯ ಬಗ್ಗೆ ನಿತ್ಯವೂ ನಿಗಾ ವಹಿಸಿ, ಹಿಪ್ಪರಗಿ ಜಲಾಶಯದ ಎಲ್ಲ 22 ಗೇಟ್‍ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 523.2 ಮೀ.ನಷ್ಟಿದ್ದು, 1.75 ಲಕ್ಷ ಕ್ಯುಸೆಕ್‍ನಷ್ಟು ನೀರಿನ ಒಳಹರಿವಿದ್ದು, ಬಂದಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಸುತ್ತಲೂ ಪ್ರದೇಶದಲ್ಲಿ ಪ್ರವಾಹದ ಯಾವದೇ ಭೀತಿಯಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಪ್ಪರಗಿ ಜಲಾಶಯದ ನೀರಿನ ಸಂಗ್ರಹ ಮಟ್ಟ 524.7 ರಷ್ಟಿದೆ. ಇನ್ನೂ 1.5 ಮೀ.ನಷ್ಟು ಎತ್ತರ ಬಾಕಿಯಿರುವ ಹಿನ್ನಲೆಯಲ್ಲಿ ನೀರಿನ ಯಾವದೇ ಅಪಾಯದ ಮಟ್ಟವಿಲ್ಲವೆಂದು ತಹಶೀಲ್ದಾರ ಪ್ರಶಾಂತ ಚನಗೊಂಡ ಹಾಗು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಸ್. ನಾಯಕ ತಿಳಿಸಿದರು.