ನಗರ ಹಿತಕ್ಕಾಗಿ ಒಂದಾಗಿ ಕೆಲಸ ಮಾಡಿ ರಬಕವಿ-ಬನಹಟ್ಟಿ,ಅ29: ರಬಕವಿ-ಬನಹಟ್ಟಿ ನಗರಸಭೆ ಜಿಲ್ಲೆಯಲ್ಲಿಯೇ ಮಹತ್ವದ ಪಡೆದಿದೆ. ಸಾಕಷ್ಟು ಯೋಜನೆ, ಅನುದಾನಗಳು ನಗರಸಭೆ ದೊರಕುತ್ತಿವೆ. ಇವುಗಳನ್ನು ಪ್ರಾಮಾಣಿಕ ಹಾಗು ಸದ್ಬಳಕೆ ಮೂಲಕ ನಗರದ ಹಿತಕ್ಕಾಗಿ ಎಲ್ಲ ಸದಸ್ಯರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದಲ್ಲಿ ಮಾದರಿ ನಗರವನ್ನಾಗಿಸಲು ಸಾಧ್ಯವೆಂದು ಶಾಸಕ ಸಿದ್ದು ಸವದಿ ಹೇಳಿದರು. 

 
ರಬಕವಿ-ಬನಹಟ್ಟಿ ನಗರಸಭೆ ವತಿಯಿಂದ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು.


ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)... 

ನಗರ ಹಿತಕ್ಕಾಗಿ ಒಂದಾಗಿ ಕೆಲಸ ಮಾಡಿ 
ರಬಕವಿ-ಬನಹಟ್ಟಿ,ಅ29: ರಬಕವಿ-ಬನಹಟ್ಟಿ ನಗರಸಭೆ ಜಿಲ್ಲೆಯಲ್ಲಿಯೇ ಮಹತ್ವದ ಪಡೆದಿದೆ. ಸಾಕಷ್ಟು ಯೋಜನೆ, ಅನುದಾನಗಳು ನಗರಸಭೆ ದೊರಕುತ್ತಿವೆ. ಇವುಗಳನ್ನು ಪ್ರಾಮಾಣಿಕ ಹಾಗು ಸದ್ಬಳಕೆ ಮೂಲಕ ನಗರದ ಹಿತಕ್ಕಾಗಿ ಎಲ್ಲ ಸದಸ್ಯರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದಲ್ಲಿ ಮಾದರಿ ನಗರವನ್ನಾಗಿಸಲು ಸಾಧ್ಯವೆಂದು ಶಾಸಕ ಸಿದ್ದು ಸವದಿ ಹೇಳಿದರು. ನಗರದ ವಿಶ್ರಾಂತಿ ಗ್ರಹದಲ್ಲಿ ಕೆಎಚ್‍ಡಿಸಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕಾರಣ ನಗರಸಭೆ ನೂತನ ಸದಸ್ಯರ ಹಾಗು ಅಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಬೇಕು. ಅವಶ್ಯಕತೆಯಿಂದ ಅನುದಾನ ಸದ್ಬಳಕೆ ಮಾಡಿಕೊಂಡಲ್ಲಿ ತಾರತಮ್ಯ ಹೋಗಲಾಡಿಸಬಹುದಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸದಸ್ಯರಾಗಿ ಕಾರ್ಯನಿರ್ವಹಿಸುವದರ ಜೊತೆಗೆ ಪ್ರತಿಯೊಬ್ಬ ಸದಸ್ಯ ವಾರದ ಮೂರ್ನಾಲ್ಕು ದಿನಗಳನ್ನಾದರೂ ವಾರ್ಡ್‍ನ ಜನರೊಂದಿಗೆ ಬೆರೆತಾಗ ಮಾತ್ರ ನೈಜ ಸಮಸ್ಯೆ ಹಾಗು ಪರಿಹಾರಕ್ಕೆ ಮಾರ್ಗೋಪಾಯ ಸಾಧ್ಯವಾಗಿ ತಕ್ಷಣದಲ್ಲಿಯೇ ಶೇ.50 ರಷ್ಟು ಕೆಲಸವಾಗುವ ಸಾಮಥ್ರ್ಯ ಹೊಂದುವದು ಎಂದರು. ಸದ್ಯ ರಬಕವಿ-ಬನಹಟ್ಟಿ ನಗರಸಭೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತಿದೆ. ನಗರಸಭೆಯ ನೂತನ ಸದಸ್ಯರ ಅಧಿಕಾರ ಸ್ವೀಕಾರದ ಜೊತೆಗೆ ಸಿಬ್ಬಂದಿಗಳ ಕೊರತೆ ನೀಗಿಸುವದಾಗಿ ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು. ವೇದಿಕೆ ಮೇಲೆ ಪೌರಾಯುಕ್ತ ಶ್ರೀನಿವಾಸ ಜಾಧವ, ಧರೆಪ್ಪ ಉಳ್ಳಾಗಡ್ಡಿ, ರಾಜು ಅಂಬಲಿ, ಆನಂದ ಕಂಪು, ಚಿದಾನಂದ ಹೊರಟ್ಟಿ, ಸಂಜು ತೆಗ್ಗಿ, ಯೂನಸ್ ಚೌಗಲಾ, ಯಲ್ಲಪ್ಪ ಕಟಗಿ, ದುರ್ಗವ್ವ ಹರಿಜನ, ಗೌರಿ ಮಿಳ್ಳಿ, ರವಿ ಕೊರತೆ, ಸಾರವಾಡ, ಪ್ರವೀಣ ದಭಾಡಿ, ಶ್ರೀಶೈಲ ಬೀಳಗಿ, ಎಸ್.ಬಿ. ಶರಣಪ್ಪನವರ, ಹಿಪ್ಪರಗಿ, ಬಂದೇನವಾಜ ಡಾಂಗೆ, ಕುಮಾರ ಕದಮ, ಚೌಡಕಿ, ಗುಡಿಮನಿ, ಅಭಿನಂದನ ಸೋನಾರ,