ಬನಹಟ್ಟಿಯ ನಿರೀಕ್ಷಣಾ ಮಂದಿರದಲ್ಲಿ ಶ್ರೀರಾಮಸೇನೆ ಸಂಘಟನೆ ಮುಖಂಡರ ಸಭೆಯಲ್ಲಿ ಉಪಾಧ್ಯಕ್ಷ ಬಸವರಾಜ ಗಾಯಕವಾಡ ಮಾತನಾಡಿದರು.
ಶ್ರೀರಾಮಸೇನೆಯಿಂದ ಅಭ್ಯಾಸ ವರ್ಗ
ರಬಕವಿ-ಬನಹಟ್ಟಿ,ಅ18: ರಾಜ್ಯಾದ್ಯಂತ ಶ್ರೀರಾಮಸೇನೆಯ ಸಂಘಟನೆಯಿಂದ ಹಿಂದು ಸಂಘಟನೆಗಳ ಕಾರ್ಯಕರ್ತರಿಗೆ ಅಭ್ಯಾಸ ವರ್ಗವನ್ನು ಮಾಡುವಲ್ಲಿ ಯೋಜನೆ ರೂಪಿಸಲಾಗಿದ್ದು, ಕಾರ್ಯಕರ್ತರ ಒತ್ತಾಸೆಯಿಂದ ಈ ನಿರ್ಣಯ ಕೈಗೊಳ್ಳಲಾಗುತ್ತಿದ್ದು, ಪ್ರಥಮವಾಗಿ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಈ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡುವದಾಗಿ ಶ್ರೀರಾಮಸೇನೆ ರಾಜ್ಯ ಉಪಾಧ್ಯಕ್ಷ ಬಸವರಾಜ ಗಾಯಕವಾಡ ತಿಳಿಸಿದರು.
ಮಂಗಳವಾರ ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ತಾಲೂಕು ಮಟ್ಟದಲ್ಲಿ ಅಭ್ಯಾಸ ವರ್ಗದ ಕಾರ್ಯಾಗಾರ ನಡೆಸುವ ಯೋಜನೆ ರೂಪಿಸಲಾಗಿದೆ. ಸಂಘಟನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಅವರ ಅನುಮತಿಯಂತೆ ಆಯಾ ಜಿಲ್ಲಾ ಹಾಗು ತಾಲೂಕು ವ್ಯಾಪ್ತಿಯಲ್ಲಿ ಅಭ್ಯಾಸ ವರ್ಗ ಪ್ರಾರಂಭಿಸಲಾಗುವದೆಂದು ತಿಳಿಸಿದರು.
ಇದೇ ಸಂದರ್ಭ ತಾಲೂಕಾಧ್ಯಕ್ಷ ಪ್ರದೀಪ ದೇಶಪಾಂಡೆ, ರವೀಂದ್ರ ಕಾಮಗೊಂಡ, ಮಾರುತಿ ಗಾಡಿವಡ್ಡರ, ಪಾಂಡುರಂಗ ಪೂಜಾರಿ ಸೇರಿದಂತೆ ಅನೇಕರಿದ್ದರು.