ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಮನವಿಗೆ ಮಾತನಾಡಿದ ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ.
ಶಾಸಕರ ದೊಡ್ಡಗುಣ ಮೆಚ್ವುಂಥದ್ದು
*ರಾಜು ಅಂಬಲಿಗೆ ಅಧ್ಯಕ್ಷ ಸ್ಥಾನ ಸಿಗಲೇಬೇಕು
ರಬಕವಿ-ಬನಹಟ್ಟಿ,ಜು2: ರಾಜ್ಯ ಸರ್ಕಾರದ ಕೆಎಚ್‍ಡಿಸಿ ನಿಗಮದ ಅಧ್ಯಕ್ಷ ಸ್ಥಾನವನ್ನು ಕಡಾಖಂಡಿತವಾಗಿ ತಳ್ಳಿ ಹಾಕುವ ಮೂಲಕ ಅನುಭವಿ ನೇಕಾರ ಮುಖಂಡರೋರ್ವರಿಗೆ ಸ್ಥಾನ ಒದಗಿಸಬೇಕೆಂದು ಹೇಳಿರುವದು ಶಾಸಕ ಸಿದ್ದು ಸವದಿ ನಿಜವಾಗಿಯೂ ದೊಡ್ಡ ಗುಣವನ್ನು ತೋರಿಸುತ್ತದೆ ಎಂದು ಬಿಜೆಪಿ ಮುಖಂಡ, ನಗರಸಭಾ ಸದಸ್ಯ ಸಂಜಯ ತೆಗ್ಗಿ ಹೇಳಿದರು.
ಬನಹಟ್ಟಿಯಲ್ಲಿ ಇಂದು ಸಭೆ ಸೇರಿ ಮಾತನಾಡಿದ ಅವರು, ಶಾಸಕರು ಸ್ವಯಂಪ್ರೇರಿತವಾಗಿ ನೇಕಾರರಿಗೆ ನೀಡಬೇಕೆಂದು ಒತ್ತಾಯಿಸಿರುವದನ್ನು ಸ್ವಾಗತಿಸುತ್ತೇವೆ. ಕಳೆದ ಹಲವಾರು ದಶಕಗಳಿಂದ ನೇಕಾರರ ಪರ ಚಿಂತನೆಯೊಂದಿಗೆ ಸಹಾಯ ಸಹಕಾರ ನೀಡುತ್ತಿರುವ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿಯವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಬ್ರಿಜ್‍ಮೋಹನ ಡಾಗಾ ಮಾತನಾಡಿ, ನೇಕಾರ ಸಮುದಾಯವನ್ನೊಳಗೊಂಡ ರಾಜ್ಯದ ಬಹು ಸಂಖ್ಯಾತ ತಾಲೂಕು ರಬಕವಿ-ಬನಹಟ್ಟಿಯಾಗಿದೆ. ಕೆಎಚ್‍ಡಿಸಿ ಪ್ರಧಾನ ಕಚೇರಿ ಹೊಂದುವ ಮೂಲಕ ಅತಿ ಹೆಚ್ಚಿನ ನೇಕಾರಿಕೆಯನ್ನು ಹೊಂದಿರುವ ಪ್ರದೇಶ ರಬಕವಿ-ಬನಹಟ್ಟಿಯಾಗಿದ್ದು, ಇಲ್ಲಿಯವರನ್ನೇ ಅಧ್ಯಕ್ಷ ಸ್ಥಾನವನ್ನಾಗಿ ಆಯ್ಕೆ ಮಾಡಿದಲ್ಲಿ ಸರ್ಕಾರ ಹಾಗು ನೇಕಾರರ ನಡುವನ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಹೆಚ್ಚು ಸಹಕಾರಿಯಾಗುವದಲ್ಲದೆ, ನೇಕಾರಿಕೆ ವೃತ್ತಿಯಲ್ಲಿ ಅನುಭವಿ ಹೊಂದಿರುವ ನೇಕಾರ ಜನಾಂಗದವರಾದ ಅಂಬಲಿಯವರ ಆಯ್ಕೆ ಸೂಕ್ತವಾಗಿದೆ. ಇದಕ್ಕೆ ಸಂಬಂಧ ಮುಖ್ಯಮಂತ್ರಿಗಳಿಗೂ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭ ರಾಜು ಅಂಬಲಿ ಮಾತನಾಡಿ, ಶಾಸಕರಾಗಿ ಸಿದ್ದು ಸವದಿ ಕಳೆದ 2006 ರಿಂದ ನೇಕಾರ ಸಮುದಾಯಕ್ಕೆ ಅವ್ಯಾಹತವಾಗಿ ಸಹಾಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪುನಶ್ಚೇತನಕ್ಕಾಗಿ ಶ್ರಮಿಸಿದವರು, ಇದೀಗ ನಿಗಮದ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದರೂ ನೇಕಾರ ಸಮುದಾಯಕ್ಕೆ ಒದಗಿಸಬೇಕೆಂಬ ಉದ್ದೇಶದಿಂದ ಹಿಂದೆ ಸರಿಯುತ್ತಿದ್ದಾರೆ. ಈಗಾಗಲೇ ನೇಕಾರಿಕೆ ವೃತ್ತಿಯಲ್ಲಿಯೇ ಶ್ರಮಿಸಿರುವ ನನಗೆ ಸಹಕಾರ ನೀಡುವಂತೆ ಶಾಸಕರಲ್ಲಿಯೂ ವಿನಂತಿಸಿದರು.
ಸಿದ್ರಾಮಪ್ಪ ಸವದತ್ತಿ, ರವೀಂದ್ರ ಕಾಮಗೊಂಡ, ಕುಮಾರ ಕದಂ, ಶ್ರೀಶೈಲ ಬೀಳಗಿ, ವಿಜಯ ಕಲಾಲ್, ಪ್ರವೀಣ ದಭಾಡಿ, ಸದಾಶಿವ ಪರೀಠ, ಶಿವಾನಂದ ದೇಸಾಯಿ, ಮಿಲನ್ ಚುನಮುರಿ, ಸಚಿನ್ ಕಾಟಕರ್, ಸದಾಶಿವ ದೇಸಟ್ಟಿ, ಕಾಡು ಹನಗಂಡಿ, ಜಡೇಶ ಗಂಟಿ, ಅರವಿಂದ ಹೊರಟ್ಟಿ, ಪ್ರವೀಣ ಕೋಲಾರ ಉಪಸ್ಥಿತರಿದ್ದರು.

Social Plugin