ತೇರದಾಳದಲ್ಲಿಂದ ಕೊರೊನಾ ಪಾಸಿಟಿವ 10ಪ್ರಕರಣ ಪತ್ತೆ

ಒಂದೇ ಕುಟುಂಬದ ಐದು ಜನರಿಗೆ ಸೋಂಕು ವಕ್ಕರಿಸಿದೆ 

ತೇರದಾಳ : ಪಟ್ಟಣದಲ್ಲಿ ಕೊರೊನಾ ರುದ್ರ ನರ್ತನ ಮುಂದುವರೆದಿದ್ದು ಇಂದು ತೇರದಾಳದಲ್ಲಿಂದು 8 ಪಾಸಿಟಿವ ಹಾಗೂ ಹಳಿಂಗಳಿ ಗ್ರಾಮದಲ್ಲಿ 2 ಪಾಸಿಟಿವ ಪ್ರಕರಣ ಪತ್ತೆಯಾಗಿದ್ದು ಪಟ್ಟಣದ ಜನತೆಯಲ್ಲಿ ತಲ್ಲಣ ಉಂಟಾಗಿದೆ.

   ಒಂದೇ ಕುಟುಂಬದ ಐದು ಜನರಿಗೆ ಸೋಂಕು ವಕ್ಕರಿಸಿ ಪಟ್ಟಣದ ಜನತೆಯನ್ನು ಭಯ ಭೀತರನ್ನಾಗಿಸಿದೆ. ಹಳೆಪೇಠ ಗಲ್ಲಿಯ ದೊಡ್ಡಮನಿ ಹತ್ತಿರ ಇರುವ ಕುಟುಂಬದಲ್ಲಿ 21 ವರ್ಷದ ಯುವಕ, 20ವರ್ಷದ ಮಹಿಳೆ, 34ವರ್ಷದ ಮಹಿಳೆ, 14ವರ್ಷದ ಬಾಲಕ, 70ವರ್ಷದ ಪುರುಷ ಸೇರಿದಂತೆ ಒಂದೇ ಕುಟುಂಬದ ಐದು ಜನರಿಗೆ ಕೊರೊನಾ ವಕ್ಕರಿಸಿ ಪಟ್ಟಣದ ಜನತೆಯನ್ನು ಚಿಂತೆಗೀಡು ಮಾಡಿದೆ. ಹಳೆಪೇಠೆಯ ಹಳೆಯ ಡಿಸಿಸಿ ಬ್ಯಾಂಕ ಹತ್ತಿರವಿರುವ 58 ವರ್ಷದ ಪುರುಷನಿಗೆ ಸೋಂಕು ಅಂಟಿಕೊಂಡಿದೆ. ಗಣಪತಿ ಗುಡಿಯ ಹತ್ತಿರ 24 ವರ್ಷದ ಪುರುಷನಿಗೆ ಸೋಂಕು ತಗುಲಿದರೆ ಅದೇ ಗಲ್ಲಿಯ 32 ವರ್ಷದ ಪುರುನಿಗೆ ಸೋಂಕು ವಕ್ಕರಿಸಿ ಜನತೆಯಲ್ಲಿ ಭಯವನ್ನುಂಟು ಮಾಡಿದೆ. 

  ಸಮೀಪದ ಹಳಿಂಗಳಿ ಗ್ರಾಮದ 21 ವರ್ಷದ ಪುರುಷ ಹಾಗೂ ಅದೇ ಗ್ರಾಮದ 65ವರ್ಷದ ಪುರುಷನಿಗೆ ಸೋಂಕು ತಗಲಿದ್ದೆ. ಇಂದು ತೇರದಾಳ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ 43ಜನರ ರಾಪೀಡ್ ಪರೀಕ್ಷೆ ಮಾಡಲಾಗಿದೆ. ಈ 43 ಜನರಲ್ಲಿ 10ಜನರಿಗೆ ಕೊರೊನಾ ಸೋಂಕು ಅಂಟಿಕೊಂಡಿದೆ. ಸೋಂಕಿತರು ವಾಸಿಸುವ ಪ್ರದೇಶವನ್ನು ಸ್ಯಾನಿಟೈಜರ್ ಮಾಡಲಾಗಿದೆ ಹಾಗೂ ಆ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ಸ್ಥಳೀಯ ವೈದ್ಯಾಧಿಕಾರಿ ಡಾ. ಸುದರ್ಶನ ನಿಡೋಣಿ ತಿಳಿಸಿದ್ದಾರೆ.