ಗಣೇಶ ತರುವಾಗ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮಾಡುವಂತಿಲ್ಲ ಗಣೇಶ ಪ್ರತಿಷ್ಠಾಪಣೆ ಸ್ಥಳದಲ್ಲಿ ಥರ್ಮಲ್ ಸ್ಕ್ಯಾನರ್ ಹಾಗೂ ಸ್ಯಾನಿಟೈಜರ್ ಕಡ್ಡಾಯವಾಗಿ ಇಡಬೇಕು...ತೇರದಾಳ : ಸಾರ್ವಜನಿಕ ಬಯಲು ಪ್ರದೇಶದಲ್ಲಿ ಗಣೇಶ ಪ್ರತಿಷ್ಠಾಪಿಸಲು ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು. 6 ಅಡಿಯಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, 2ಅಡಿಯಷ್ಟು ಎತ್ತರದ ಗಣಪತಿಯನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಗಣೇಶ ತರುವಾಗ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮಾಡುವಂತಿಲ್ಲವೆಂದು ಸಿಪಿಐ ಜೆ.ಕರುಣೇಶಗೌಡ ಹೇಳಿದರು. 

  
ತೇರದಾಳ ಪಟ್ಟಣದ ಪೋಲಿಸ್ ಠಾಣೆಯಲ್ಲಿ ನಡೆದ ಗಣೇಶ ಪ್ರತಿಷ್ಠಾಪಣೆ ಪೂರ್ವ ಭಾವಿ ಸಭೆಯಲ್ಲಿ ಸಿಪಿಐ ಜೆ.ಕರುಣೇಶಗೌಡ ಮಾತನಾಡಿದರು.



ಜಾಹಿರಾತುದಾರರು : ಗಂಗೋತ್ರಿ ನರ್ಸರಿ. ಬೆಳಗಾವಿ ರೋಡ ಚಿಕ್ಕೋಡಿ, ಮಾಲಿಕರು : ಕಲ್ಮೇಶ. ಶೇಡಬಾಳ. ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ ಹಾಗೂ ಸುಪ್ರಸಿದ್ಧ ಗಾರ್ಡನ್ ತಯಾರಕರು.ಸಂಪರ್ಕಿಸಿ : 9482919983.... 9535719053...ಜಾಹಿರಾತುದಾರರು ; ಇನಾಮದಾರ ಡಿಜಿಟಲ್ ಸೌಂಡ್ ಸರಕಾರಿ ಕನ್ನಡ ಶಾಲೆ ಹಿಂದೆ ತೇರದಾಳ ಮಾಲಿಕರು : ಸರವರ್‍ಖಾನ್. ಡಿ. ಇನಾಮದಾರ ಎಲ್ಲ ತರಹದ ಸೌಂಡ್ ಸಿಸ್ಟಿಮ್‍ಗಳಿಗಾಗಿ ಸಂಪರ್ಕಿಸಿ : 9036074811.. 9118206411...ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

ಗಣೇಶ ತರುವಾಗ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮಾಡುವಂತಿಲ್ಲ ಗಣೇಶ ಪ್ರತಿಷ್ಠಾಪಣೆ ಸ್ಥಳದಲ್ಲಿ ಥರ್ಮಲ್ ಸ್ಕ್ಯಾನರ್ ಹಾಗೂ ಸ್ಯಾನಿಟೈಜರ್ ಕಡ್ಡಾಯವಾಗಿ ಇಡಬೇಕು. 

ತೇರದಾಳ : ಸಾರ್ವಜನಿಕ ಬಯಲು ಪ್ರದೇಶದಲ್ಲಿ ಗಣೇಶ ಪ್ರತಿಷ್ಠಾಪಿಸಲು ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು. 6 ಅಡಿಯಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, 2ಅಡಿಯಷ್ಟು ಎತ್ತರದ ಗಣಪತಿಯನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಗಣೇಶ ತರುವಾಗ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಮಾಡುವಂತಿಲ್ಲವೆಂದು ಸಿಪಿಐ ಜೆ.ಕರುಣೇಶಗೌಡ ಹೇಳಿದರು. ಪಟ್ಟಣದ ಪೋಲಿಸ್ ಠಾಣೆಯಲ್ಲಿ ನಡೆದ ಗಣೇಶ ಪ್ರತಿಷ್ಟಾಪಣೆ ಮಂಡಳಿಯವರು ಹಾಗೂ ಪಟ್ಟಣದ ಪ್ರಮುಖರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು ದೇವಸ್ಥಾನದ ಕಟ್ಟಡಗಳಲ್ಲಿ, ಸಮುದಾಯ ಭವನಗಳಲ್ಲಿ ಗಣೇಶ ಪ್ರತಿಷ್ಠಾಪಣೆ ಮಾಡುವವರು ಪರವಾಣಿಗೆ ಅವಶ್ಯಕವಿರುವುದಿಲ್ಲ. ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಣೆ ಮಾಡುವವರು ಮಾತ್ರ ಕಡ್ಡಾಯವಾಗಿ ಪುರಸಭೆಯಿಂದ ಪರವಾಣಿಗೆಯನ್ನು ಪಡೆಯಬೇಕು. ಎರಡು ದಿವಸ ಮುಂಚಿತವಾಗಿ ಪರವಾಣಿಗೆ ಪಡೆಯಬೇಕು ಕಾರಣ ಪೋಲಿಸ್ ಅಧಿಕಾರಿಗಳು, ಪುರಸಭೆ ಅಧಿಕಾರಿಗಳು ಪ್ರಾತಿಷ್ಠಾಪಣೆ ಸ್ಥಳವನ್ನು ಪರೀಶೀಲನೆ ಮಾಡಿದ ನಂತರ ಪರವಾನಿಗೆ ಕೊಡಲಾಗುವುದು. ಹೆಸ್ಕಾಂ, ಪೋಲಿಸ್ ಹಾಗೂ ಪುರಸಭೆ ಪರವಾನಿಗೆಯನ್ನು ಒಂದೇ ಸೂರಿನಡಿಯಲ್ಲಿ ಕೊಡಲಾಗುವುದು. ಸಾರ್ವಜನಿಕ ಗಣಪತಿ ವೀಕ್ಷಣೆ ಮಾಡುವವರಿಗೆ 20ಜನರಿಗೆ ಒಂದರಂತೆ ಬ್ಯಾರಿಕೇಡ್‍ನ್ನು ಹಾಕಬೇಕು. ಕೆರೆ, ಬಾವಿಗಳಲ್ಲಿ, ಕೆನಾಲ್‍ಗಳಲ್ಲಿ ವಿಸರ್ಜನೆ ಮಾಡುವಂತಿಲ್ಲ. ಪುರಸಭೆಯವರು ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ ವಿಸರ್ಜನೆ ಮಾಡಬೇಕು. ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣಪತಿ ವಿಸರ್ಜನೆಗೆ ಪುರಸಭೆ ವತಿಯಿಂದ ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕ ಗಣಪತಿ ದರ್ಶನಕ್ಕೆ ಬರುವಂತ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಪ್ರತಿಷ್ಠಾಪಣೆ ಸ್ಥಳದಲ್ಲಿ ಧ್ವನಿವರ್ಧಕ ಬಳಸಬಹುದು ಆದರೆ ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ಹಾಗೂ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಹೇಳಿದರು. 


 ಪುರಸಭೆ ಕಿರಿಯ ಆರೋಗ್ಯ ಸಹಾಯಕಿ ಭಾಗ್ಯಶ್ರೀ ಪಾಟೀಲ ಹಾಗೂ ತೇರದಾಳ ಹೆಸ್ಕಾಂ ಶಾಖಾಧಿಕಾರಿ ಬಸವರಾಜ ಪಟ್ಟಣಶೆಟ್ಟಿ ಮಾತನಾಡಿ ವಿದ್ಯುತ್ ಸರಬರಾಜು ಹಾಗೂ ಪ್ರತಿಷ್ಠಾಪಣೆ ಮತ್ತು ವಿಸರ್ಜನೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ವಿನಾಯಕ ಬಂಕಾಪೂರ ಮತ್ತು ಬುಜಬಲಿ ಕೆಂಗಾಲಿ, ಶಂಕರ ಕುಂಬಾರ ಸಾರ್ವಜನಿಕರ ಪರವಾಗಿ ಮಾತನಾಡಿದರು. ಪಟ್ಟಣದ ಗಣೇಶ ಪ್ರತಿಷ್ಠಾಪಣೆ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಪಿಎಸ್‍ಐ ವಿಜಯ ಕಾಂಬಳೆ, ಎಎಸ್‍ಆಯ್ ಎಸ್.ಕೆ.ಸೂರ್ಯವಂಶಿ, ಆನಂದ ಕೊಲೂರ, ರಾಜು ಪೂಜಾರಿ, ಕೆ.ಹೆಚ್. ಸಣಹಟ್ಟಿ ಸೇರಿದಂತೆ ಇನ್ನಿತರರು ಇದ್ದರು. ಎಎಸ್‍ಆಯ್ ಎಚ್.ಎಸ್.ಮೆಂಡೆಗಾರ ಸ್ವಾಗತಿಸಿ ವಂದಿಸಿದರು. 

ಜಾಹಿರಾತು...