ಪಿರನವಾಡಿ ಘಟನೆ ಖಂಡಿಸಿ ರಾಯಣ್ಣ ಅಭಿಮಾನಿ ಬಳಗದಿಂದ ಮನವಿ ರಬಕವಿ-ಬನಹಟ್ಟಿ,ಅ19: ಬೆಳಗಾವಿ ಜಿಲ್ಲೆಯ ಪಿರನವಾಡಿಯಲ್ಲಿ ರಾಯಣ್ಣ ಮೂರ್ತಿಯನ್ನು ಕಿತ್ತುಕೊಂಡು ಪೊಲೀಸ ಇಲಾಖೆ ದೌರ್ಜನ್ಯ ಎಸಗಿರುವುದನ್ನು ವಿರೋಧಿಸಿ ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ ಉಪತಹಶೀಲ್ದಾರ ಎಸ್. ಎಲ್ ಕಾಗಿಯವರ ಅವರಿಗೆ ಕ್ರಾಂತಿವೀರ ಸಂಗ್ಗೋಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಹಾಗೂ ರಾಯಣ್ಣ ಅಭಿಮಾನಿ ಬಳಗದವರು ಮನವಿ ಅರ್ಪಿಸಿದರು. 

   
ಪಿರನವಾಡಿ ಘಟನೆ ಖಂಡಿಸಿ ರಬಕವಿ-ಬನಹಟ್ಟಿ ಉಪತಹಶೀಲ್ದಾರ ಎಸ್. ಎಲ್ ಕಾಗಿಯವರ ಅವರಿಗೆ ರಾಯಣ್ಣ ಅಭಿಮಾನಿ ಬಳಗದಿಂದ ಮನವಿ ಅರ್ಪಣೆ.

ಜಾಹಿರಾತುದಾರರು : ಗಂಗೋತ್ರಿ ನರ್ಸರಿ. ಬೆಳಗಾವಿ ರೋಡ ಚಿಕ್ಕೋಡಿ, ಮಾಲಿಕರು : ಕಲ್ಮೇಶ. ಶೇಡಬಾಳ. ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ ಹಾಗೂ ಸುಪ್ರಸಿದ್ಧ ಉತ್ಕಷ್ಟವಾದ ಗಾರ್ಡನ್ ತಯಾರಕರು.ಸಂಪರ್ಕಿಸಿ : 9482919983.... 9535719053...ಜಾಹಿರಾತುದಾರರು ; ಇನಾಮದಾರ ಡಿಜಿಟಲ್ ಸೌಂಡ್ ಸರಕಾರಿ ಕನ್ನಡ ಶಾಲೆ ಹಿಂದೆ ತೇರದಾಳ ಮಾಲಿಕರು : ಸರವರ್‍ಖಾನ್. ಡಿ. ಇನಾಮದಾರ ಎಲ್ಲ ತರಹದ ಸೌಂಡ್ ಸಿಸ್ಟಿಮ್‍ಗಳಿಗಾಗಿ ಸಂಪರ್ಕಿಸಿ : 9036074811.. 9118206411...ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

 ಪಿರನವಾಡಿ ಘಟನೆ ಖಂಡಿಸಿ ರಾಯಣ್ಣ ಅಭಿಮಾನಿ ಬಳಗದಿಂದ ಮನವಿ

 ರಬಕವಿ-ಬನಹಟ್ಟಿ,ಅ19: ಬೆಳಗಾವಿ ಜಿಲ್ಲೆಯ ಪಿರನವಾಡಿಯಲ್ಲಿ ರಾಯಣ್ಣ ಮೂರ್ತಿಯನ್ನು ಕಿತ್ತುಕೊಂಡು ಪೊಲೀಸ ಇಲಾಖೆ ದೌರ್ಜನ್ಯ ಎಸಗಿರುವುದನ್ನು ವಿರೋಧಿಸಿ ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ ಉಪತಹಶೀಲ್ದಾರ ಎಸ್. ಎಲ್ ಕಾಗಿಯವರ ಅವರಿಗೆ ಕ್ರಾಂತಿವೀರ ಸಂಗ್ಗೋಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಹಾಗೂ ರಾಯಣ್ಣ ಅಭಿಮಾನಿ ಬಳಗದವರು ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅರ್ಜುನ ಜಿಡ್ಡಿಮನಿ, ಕರುನಾಡಲ್ಲಿ ಸಂಗೋಳ್ಳಿ ರಾಯಣ್ಣನಿಗೆ ಅನ್ಯಾಯವಾಗುವುದನ್ನು ಯಾರೊಬ್ಬರು ಕ್ಷಮಿಸುವುದಿಲ್ಲ. ಹಾಗೂ ಸುಮ್ಮನೇ ಕೂಡ್ರುವುದಿಲ್ಲ. ಕನ್ನಡ ನಾಡಿನಲ್ಲಿ ರಾಯಣ್ಣನಿಗೆ ಅವಮಾನ ಮಾಡಿರುವುದು ಸರಿಯಲ್ಲ. ಮೂರ್ತಿ ಸ್ಥಾಪನೆಗೆ ಅಡೆ ತಡೆ ಮಾಡಿದ್ದು ಖಂಡನೀಯ. ಅದಕ್ಕಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಹೋರಾಟ ರಾಜ್ಯ ಮತ್ತು ದೇಶ್ಯಾದ್ಯಂತ ಹರಡುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು. ಸರಕಾರ ರಾಯಣ್ಣ ಮೂರ್ತಿಯನ್ನು ಮರುಸ್ಥಾಪಿಸಲು ಅನುಮತಿ ನೀಡಬೇಕು. ಸÀಕಲ ಗೌರವಗಳೊಂದಿಗೆ ಪಿರನವಾಡಿಯಲ್ಲಿ ರಾಯಣ್ಣ ಮೂರ್ತಿಯನ್ನು ಸ್ಥಾಪಿಸಬೇಕು. ಇಲ್ಲವಾದಲ್ಲಿ ರಾಜ್ಯದ ತುಂಬೆಲ್ಲ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದೇವಪ್ಪ ಮಹಿಷವಾಡಗಿ, ದುಂಡಪ್ಪ ಕುಡುಚಿ, ವಿಠ್ಠಲ್ ಮಹಿಷವಾಡಗಿ, ಮಾಳು ದುರ್ಗನ್ನವರ, ದೇವೇಂದ್ರ ಅಸ್ಕಿ, ಹನುಮಂತ ಎಕ್ಕೆಲಿ, ಭಿಮ್ಮಪ್ಪ ಭುಜಂಗ, ಜಕ್ಕಪ್ಪ ಜಿಡ್ಡಿಮನಿ, ಮಾಳು ಹಿಪ್ಪರಗಿ, ನಾಗಪ್ಪ ಬಂಗೆನ್ನವರ, ಹನುಮಂತ ಮಹಿಷವಾಡಗಿ, ಹಾಗೂ ರಬಕವಿ ಬನಹಟ್ಟಿ ತಾಲ್ಲೂಕಿನ ರಾಯಣ್ಣ ಅಭಿಮಾನಿ ಬಳಗದ ಎಲ್ಲ ಯುವಕರು ಕುರುಬ ಸಮಾಜದ ಯುವಕರು ಇದ್ದರು. 


 ಜಾಹಿರಾತು...