ರಬಕವಿ-ಬನಹಟ್ಟಿ ತಾಲೂಕು ಪಂಚಾಯ್ತಿ ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು. ಎಲ್ಲ ರೀತಿ ಔಷಧಿ ಪೂರೈಸಿ: ಖಾಸಗಿ ಆಸ್ಪತ್ರೆಯಿಂದ ಸೇವೆ ನೀಡಿ *ತಾಲೂಕು ಪಂಚಾಯ್ತಿಯ ಪ್ರಥಮ ಸರ್ವ ಸದಸ್ಯರ ಸಭೆ




ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +೯೧ ೯೯೦೨೫೨೩೬೯೮...)... 

 ಎಲ್ಲ ರೀತಿ ಔಷಧಿ ಪೂರೈಸಿ: ಖಾಸಗಿ ಆಸ್ಪತ್ರೆಯಿಂದ ಸೇವೆ ನೀಡಿ *ತಾಲೂಕು ಪಂಚಾಯ್ತಿಯ ಪ್ರಥಮ ಸರ್ವ ಸದಸ್ಯರ ಸಭೆ ರಬಕವಿ-ಬನಹಟ್ಟಿ,ಅ11: ಕೊರೊನಾ ಹಾವಳಿ ಮಧ್ಯ ಎಲ್ಲ ಕಾರ್ಯಕ್ರಮಗಳನ್ನು ರದ್ದಗೊಳಿಸುವಲ್ಲಿ ಕಾರಣವಾಗಿದೆ. ಹೊರ ರೋಗಿಗಳು ಆಗಮಿಸುವಲ್ಲಿ ಗಣನೀಯ ಕಡಿಮೆಯಾಗಿದ್ದು, ಐಎಲ್‍ಐ ಹಾಗು ಸಾರಿ ಪ್ರಕರಣಕ್ಕೆ ಸಂಬಂಧಿಸಿದ ಅಸ್ತಮಾ, ರಕ್ತದೊತ್ತಡ, ಮಧುಮೇಹ ರೋಗಿಗಳೇ ಹೆಚ್ಚಾಗಿ ಆಸ್ಪತ್ರೆಗೆ ಪ್ರವೇಶವಾಗುತ್ತಿರುವ ಹಿನ್ನಲೆ ಅಂಥವರಿಗೆ ಜ್ವರದ ವಿಶೇಷತೆಗಣುಗುನವಾಗಿ ರಬಕವಿ-ಬನಹಟ್ಟಿ ತಾಲೂಕಿನಲ್ಲಿ 4 ಕಡೆ ಸ್ಯಾಂಪಲ್ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖಗೊಳ್ಳುತ್ತಿದ್ದು, ಚೇತರಿಕೆ ಪ್ರಕರಣಗಳ ಹೆಚ್ಚುತ್ತಿವೆ ಕಾರಣ ತಾಲೂಕಿನ ಎರಡು ಕಡೆ ಕೋವಿಡ್ ಕೇಂದ್ರಗಳನ್ನು ಒಂದೇ ಕಡೆ ಅದು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಮಾತ್ರ ಆರೈಕೆ ಮಾಡಲಾಗುತ್ತಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಎ.ಜಿ. ಗಲಗಲಿ ಸಭೆಯ ಪ್ರಾರಂಭಕ್ಕೆ ಮಾಹಿತಿ ಒದಗಿಸಿದರು. ಮಂಗಳವಾರ ಜರುಗಿದ ರಬಕವಿ-ಬನಹಟ್ಟಿ ತಾಲೂಕು ಪಂಚಾಯ್ತಿಯ ಪ್ರಥಮ ಸರ್ವ ಸದಸ್ಯರ ಸಭೆಯಲ್ಲಿ ವಿಶೇಷ ಚರ್ಚೆಗಳು ನಡೆದವು. ಶಾಸಕ ಸಿದ್ದು ಸವದಿ ಮಾತನಾಡಿ, ಪ್ರಥಮವಾಗಿ ತಾಲೂಕಿನ ಸಭೆಯಾಗಿರುವ ಕಾರಣ ಜಮಖಂಡಿ ಹಾಗು ಮುಧೋಳ ತಾಲೂಕಿನಿಂದ ಕ್ರೂಢಿಕರಿಸಿದ ಮಾಹಿತಿ ಬಹುತೇಕ ಇಲಾಖೆಗಳಿಂದ ದೊರಕಿಲ್ಲ. ಹೆಚ್ಚಿನ ಮಾಹಿತಿ ಕೊರತೆ ಕಾರಣ ಮುಂದಿನ ಸಭೆಯಲ್ಲಿ ಇದ್ಯಾವ ಸಮಸ್ಯೆಯೂ ಅಡ್ಡಿಯಾಗದಂತೆ ಪ್ರತ್ಯೇಕ ಮಾಹಿತಿಗಳನ್ನು ತರಬೇಕೆಂದು ಅಧಿಕಾರಿಗಳಿಗೆ ಖಡಕ್ ತಾಕೀತು ಮಾಡಿದರಲ್ಲದೆ ತೇರದಾಳ ವಿಧಾನಸಭಾ ಕ್ಷೇತ್ರಾದ್ಯಂತ ಎಲ್ಲ ಔಷಧಿ ವ್ಯಾಪಾರಿಗಳು ರೋಗಿಗಳಿಗೆ ಸಂಬಂಧಿಸಿದ ಎಲ್ಲವನ್ನೂ ಒದಗಿಸಬೇಕು. ಖಾಸಗಿ ವೈದ್ಯರು ಸರ್ಕಾರಿ ವೈದ್ಯರಂತೆ ಸೇವೆ ನಡೆಸುವಲ್ಲಿ ತಾರತಮ್ಯವೆಸಗಬಾರದೆಂದರು. ತಾಲೂಕಾ ಮಟ್ಟದ ಇನ್ನೂ ಅನೇಕ ಕಚೇರಿಗಳು ಬರಬೇಕಿದೆ. ಇದಕ್ಕೆ ಸಂಬಂಧ ಸರ್ಕಾರಮಟ್ಟದಲ್ಲಿ ಒತ್ತಾಯಿಸಲಾಗುತ್ತಿದ್ದು, ಆದರ್ಶ ತಾಲೂಕು ಹಾಗು ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಅನೇಕ ಹೊಸ ಹೊಸ ಯೋಜನೆಗಳನ್ನು ರೂಪಿಸುವಲ್ಲಿ ತಾಪಂ ಸದಸ್ಯರು ನಿರ್ಣಯಗಳನ್ನು ಕೈಗೊಳ್ಳಬೇಕೆಂದರು. ಕುಡಿಯುವ ನೀರಿಗೆ ಸಂಬಂಧ ಹೊಸ ತಾಲೂಕಿಗೆ ನ್ಯಾಯಯುತವಾಗಿ ದೊರಕಬೇಕಾದ ಸೌಲಭ್ಯಗಳನ್ನು ದೊರಕಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಕಾರ್ಯ ಮಾಡಬೇಕು. ಮುಧೋಳ ಹಾಗು ಜಮಖಂಡಿ ತಾಲೂಕಿನಿಂದ ವಿಭಜಣೆಗೊಂಡು ಹೊಸ ತಾಲೂಕಾಗಿರುವ ರಬಕವಿ-ಬನಹಟ್ಟಿಗೆ ಪ್ರತ್ಯೇಕವಾದ ಸಭೆಗಳನ್ವಯ ಅಧಿಕಾರಿಗಳು ಮಹತ್ವದ ಪಾತ್ರ ವಹಿಸುವ ಮೂಲಕ ಸಮಗ್ರ ಮಾಹಿತಿ ಒದಗಿಸುವಲ್ಲಿ ಮುಂದಿನ ಸಭೆಯಲ್ಲಿ ಮುಂದಾಗಬೇಕೆಂದರು. ವೇದಿಕೆ ಮೇಲೆ ತಾಪಂ ಅಧ್ಯಕ್ಷ ಶಿವಾನಂದ ಮಂಟೂರ, ಉಪಾಧ್ಯಕ್ಷೆ ಸುನಂದಾ ಮುಗಳಖೋಡ, ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಹಿಪ್ಪರಗಿ ಉಪಸ್ಥಿತರಿದ್ದರು. ತಾಪಂ ಸದಸ್ಯ ಗುರು ಮರಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಸದಸ್ಯರಾದ ಪರಶುರಾಮ ಬಸವ್ವಗೋಳ, ಪುಂಡಲೀಕ ಪಾಲಭಾಂವಿ ಸೇರಿದಂತೆ ತಾಪಂನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.