ತೇರದಾಳ: ಅಗಷ್ಟ 15 ರ ಧ್ವಜಾರೋಹಣಕ್ಕೆ ಸಂಭಂಧಿಸಿದಂತೆ ಪೂರ್ವಭಾವಿ ಸಭೆಯನ್ನು ಇಂದು ದಿನಾಂಕ 11-08-2020 ಮಂಗಳವಾರ ದಿನ ತೇರದಾಳ ಪಟ್ಟಣದ ಪುರಭೆಯ ಆವರಣದಲ್ಲಿ ಸಭೆ ಏರ್ಪಡಿಸಲಾಗಿತ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಬಕವಿ ಬನಹಟ್ಟಿ ತಾಲೂಕಾ ದಂಡಾಧಿಕಾರಿಗಳಾದ ಪ್ರಶಾಂತ ಚನಗೊಂಡ ಇವರು ಪ್ರತಿವರ್ಷದಂತೆ ಈ ವರ್ಷ ಧ್ವಜಾರೋಹಣ ಆಚರಣೆಯಲ್ಲಿ ಸ್ವಲ್ಪು ಬದಲಾವಣೆ ಮಾಡುವ ಅವಶ್ಯಕತೆ ಇದೆ.ಏಕೆಂದರೆ ದೇಶದಲ್ಲಿ ಕೊರೋನಾ ವೈರಸ್ ಕಾರಣದಿಂದ ನಾಗರಿಕರ ಸುರಕ್ಷತಾ ಹಿತದೃಷ್ಟಿಯ ಸಲುವಾಗಿ ಸರಕಾರವು ಎಲ್ಲರಿಗೂ ಕಡ್ಡಾಯವಾಗಿ ಮಾಸ್ಕ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಜರ ಬಳಸುವುದು ಹೀಗೆ ಸರಕಾರವು ಹಲವು ನಿಯಮಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಿದೆ ಅಲ್ಲದೆ ಸಾರ್ವಜನಿಕ ಸಮಾರಂಭ,ಸಂತೆ,ಹಬ್ಬ ,ಜಾತ್ರೆ ಹೀಗಾಗಿ ಮುಂತಾದ ಕಾರ್ಯಕ್ರಮಗಳನ್ನು ನೀಷೇಧ ಮಾಡಿದೆ.ಜನಸಂದನಿ ಇರುವಲ್ಲಿ ಕೊರೋನಾದ ಅಪಾಯ ಹೆಚ್ಚಾಗಿರುತ್ತದೆ ಆದ್ದರಿಂದ ನಾವೆಲ್ಲ ಜನಸಂದನಿಯಾಗದಂತೆ ನೋಡಿಕೊಳ್ಳುವುದು ಅತೀ ಅವಶ್ಯಕವಾಗಿದೆ.ಆದರೇ ಸ್ವಾತಂತ್ರ್ಯ ದಿನೋತ್ಸವವು ನಮ್ಮ ರಾಷ್ಟ್ರೀಯ ಹಬ್ಬವಾಗಿರುವದರಿಂದ ಇದನ್ನು ನಾವೆಲ್ಲ ಆಚರಿಸುವ ಅವಶ್ಯಕತೆ ಇದೆ. ಆದರೇ ಪ್ರತಿ ವರ್ಷದಂತೆ ನಾವು ವಿಜೃಂಭನೆಯಿಂದ ಮಾಡಲು ಅವಕಾಶವಿಲ್ಲ. ಹೀಗಾಗಿ ಈ ವರ್ಷ ಈ ರಾಷ್ಟ್ರೀಯ ಹಬ್ಬವನ್ನು ಸರಳರೀತಿಯಲ್ಲಿ ಆಚರಿಸುವ ಅನಿವಾರ್ಯತೆ ಇದೆ.ಇದರಿಂದ ಈ ವರ್ಷ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ಸುರಕ್ಷತಾ ಹಿತದೃಷ್ಟಿಯಿಂದ ಭಾಗವಹಿಸಲು ಅವಕಾಶ ಕಲ್ಪಿಸಲಾಗಿರುವುದಿಲ್ಲ. ಅಲ್ಲದೆ ಜನದಟ್ಟಣೆಗೆ ಅವಕಾಶವಿಲ್ಲದ ಕಾರಣ ಜನಸಂದನಿಯಾಗದಂತೆ ಜಾಗೃತೆಯಿಂದ ಕಾರ್ಯಕ್ರಮವನ್ನು ನಡೆಸಲಾಗುವುದು.ದ್ವಜಾರೋಹನ ನಡೆಯುವ ಗಾಂಧಿ ಕ್ರಿಡಾಂಗಣದ ಪ್ರವೇಶದ್ವಾರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಬರುವ ಎಲ್ಲರನ್ನೂ ಥರ್ಮಲ್ ಸ್ಕ್ಯಾನರ ಮೂಲಕ ತಪಾಸಣೆ ಮಾಡಿ ಪ್ರವೇಶ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ದೇಶವ್ಯಾಪಿ ಹರಡಿರುವ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸಗಳಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗುವುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ದಲಿತ ಯುವ ಮುಖಂಡ ದಯಾನಂದ ಕಾಳೆ ಈ ಕೊರೋನಾ ಮಹಾಮಾರಿಯು ಯಾರನ್ನು ಬಿಡದೇ ಎಲ್ಲರಿಗೂ ಮಾರಕವಾಗಿದೆ. ಈಗ ಮಳೆಗಾಲ ಇರುವುದರಿಂದ ಸಾಮಾನ್ಯವಾಗಿ ಸಾಕಷ್ಟು ಜನರು ಕೆಮ್ಮು,ನೆಗಡಿ,ಜ್ವರದಿಂದ ಬಳಲುತ್ತಾರೆ. ಹೀಗಾಗಿ ಸಾಕಷ್ಟು ಜನರು ಈ ಖಾಯಿಲೆಗೆ ತುತ್ತಾಗಿ ಬಳಲುತ್ತಿರುವಂತಹ ಸಂದರ್ಬದಲ್ಲಿ ಸಾಕಷ್ಟು ಖಾಸಗಿ ವೈದ್ಯರು ಕೊರೋನಾ ಕಾರಣದಿಂದ ತಮ್ಮ ಆಸ್ಪತ್ರೆಗಳನ್ನು ಬಂದ ಮಾಡಿದರು.ಆದರೆ ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲೂ ಚಿಕಿತ್ಸೆಗಾಗಿ ಬಂದ ಅನೇಕ ಜನರಿಗೆ ಚಿಕಿತ್ಸೇ ನೀಡಿ ಮಾನವೀಯತೆ ಮೆರೆದ ತೇರದಾಳ ಪಟ್ಟಣದ ವೈದ್ಯರಾದ ಡಾ: ಅಥಣಿ, ಡಾ ಭುಜಕ್ಕನವರ ಡಾ: ಬಸವರಾಜ ನಾಗನೂರ ಮತ್ತು ಇನ್ನೂ ಕೆಲವು ಎಲೆ ಮರೆಯ ಕಾಯಿಯಂತೆ ಸೇವೆ ನೀಡಿದ ವೈದ್ಯರಿಗೆ ಸಭೆಯಲ್ಲಿ ಧನ್ಯವಾದ ತಿಳಿಸಿದರಲ್ಲದೆ ಈಗ ಬಂದಾಗಿರುವ ಆಸ್ಪತ್ರೆಗಳನ್ನು ಪುನಃ ಪ್ರಾರಂಭಿಸಲು ಕೂಡಲೇ ಕ್ರಮ ಕೈಕೊಳ್ಳಬೇಕೆಂದು ತಹಶೀಲದಾರರಿಗೆ ವಿನಂತಿಸಿಕೊಂಡರು.
ತಕ್ಷಣವೇ ಇದಕ್ಕೆ ಸ್ಪಂದಿಸಿದ ತಹಶೀಲದಾರರು ಇಂದೇ ಈ ಬಗ್ಗೇ ವೈದ್ಯರ ಸಭೆ ಕರೆದು ಈ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರೇಡ್‍ಟು ತಹಶೀಲದಾರ ಎಸ್.ಬಿ.ಕಾಂಬಳೆಯವರು ಪಟ್ಟಣದಲ್ಲಿ ದ್ವಜಾರೋಹನ ಮಾಡುವ ಯಾವುದೇ ಶಿಕ್ಷಣ ಸಂಸ್ಥೆಗಳಾಗಲಿ ಅಥವಾ ಖಾಸಗಿ ಇನ್ನಿತರ ಯಾರೇ ಇದ್ದರೂ ರಾಷ್ಟ್ರ ಧ್ವಜವು ಶುಭ್ರವಾಗಿರುವಂತೆ ನೋಡಿಕೊಳ್ಳಬೇಕು. ಎಲ್ಲರೂ ಕಡ್ಡಾಯವಾಗಿ ಅತ್ಯಂತ ಗುಣಮಟ್ಟದ ರಾಷ್ಟ್ರ ಧ್ವಜಗಳನ್ನು ಬಳಸಬೇಕು.ಅಲ್ಲದೆ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ ಧ್ವಜಗಳನ್ನು ಯಾರು ಮಾರಾಟ ಮಾಡಬಾರದು ಹಾಗೂ ಯಾರೂ ಬಳಸಬಾರದು ಎಂದು ಹೇಳಿದರು.
ಧ್ವಜಾರೋಹಣ ಸಮಯ: ಈ ವರ್ಷ ಧಜಾರೋಹಣ ಸಮಯವನ್ನು ಬದಲಾವಣೆ ಮಾಡಲಾಗಿದೆ. ಮುಂಜಾನೆ ಸರಿಯಾಗಿ 8 ಗಂಟೆ 30 ನಿಮಿಷಕ್ಕೆ ಧ್ವಜಾರೋಹಣ ಮಾಡಲಾಗುವುದು.ಧ್ವಜಾರೋಹಣವನ್ನು ತಾಲೂಕಾ ದಂಡಾಧಿಕಾರಿ ಪ್ರಶಾಂತ ಚನಗೊಂಡ ನೆರವೇರಿಸುವವರು.
ಈ ಸಂದರ್ಭದಲ್ಲಿ ತೇರದಾಳ ಉಪತಹಶೀಲದಾರರಾದ ಎಸ್.ಬಿ.ಮಾಯನ್ನವರ ಕಂದಾಯ ನೀರಿಕ್ಷಕರಾದ ಎಸ್.ಬಿ.ತಾಳಿಕೋಟಿ,ಗ್ರಾಮಲೆಕ್ಕಾಧಿಕಾರಿ ಪಿ.ಮಠಪತಿ,ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಹಾಗೂ ಪಟ್ಟಣದ ಪ್ರಮುಖರು ಮತ್ತು ಪುರಸಭೆಯ ಸದಸ್ಯರುಗಳು ಉಪಸ್ಥಿತರಿದ್ದರು. ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಸ್ವಾಗತಿಸಿ ವಂದಿಸಿದರು.
Social Plugin