ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಕೊರೊನಾ ವೈರಸ್ ಎಗ್ಗಿಲ್ಲದೆ ಪ್ರವೇಶ ಮಾಡುತ್ತಿದ್ದು, ಮನೆ ಬಿಟ್ಟು ಎಲ್ಲಿಯೂ ಹೊರಬಾರದವರನ್ನೂ ಅಂಟಿಕೊಳ್ಳುತ್ತಿರುವ ಕೊರೊನಾ ತನ್ನ ನರ್ತನ ರೌದ್ರಮಯವನ್ನಾಗಿಸಿದೆ.
ತಾಲೂಕಿನಾದ್ಯಂತ ಒಂದೇ ದಿನ 35 ಜನರಿಗೆ ಕೋರೊನಾ ಪಾಜಿಟಿವ್ ದೃಢಪಟ್ಟ ಹಿನ್ನಲೆ ಜನತೆ ಬೆಚ್ಚಿ ಬೀಳುವಲ್ಲಿ ಕಾರಣವಾಗಿದೆ. ಈ ಮೊದಲು ದಿನಕ್ಕೆ ಎರಡರಿಂದ ಏಳೆಂಟು ಅತಿ ಹೆಚ್ಚು ಪ್ರಕರಣಗಳೆಂದು ಬಿಂಬಿಸಲಾಗುತ್ತಿತ್ತು. ಶನಿವಾರ ದಿಢೀರನೆ 35 ಕ್ಕೆ ಏರಿಕೆ ಕಂಡಿರುವದು ಎಂಥವರನ್ನೂ ಗಾಬರಿಪಡಿಸುವಲ್ಲಿ ಕಾರಣವಾಗಿದೆ.
ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿ ರ್ಯಾಪಿಡ್ ಕಿಟ್‍ಗಳ ಮೂಲಕ ಅನಾರೋಗ್ಯದಿಂದ ಬಳಲುತ್ತ ಬರುವ ರೋಗಿಗಳ ಪರೀಕ್ಷೆ ಸಂದರ್ಭ ಸೋಂಕು ದೃಢಪಡುತ್ತಿರುವದು ತಿಳಿದು ಬರುತ್ತಿದೆ.
ರಬಕವಿ-ಬನಹಟ್ಟಿ ವ್ಯಾಪ್ತಿ 25 ಜನರಿಗೆ ಹಾಗು ತೇರದಾಳ ಪಟ್ಟಣ ವ್ಯಾಪ್ತಿಯ 10 ಜನರಿಗೆ ಸೋಂಕು ದೃಢಪಟ್ಟಿದೆ.