ರಬಕವಿ ಬನಹಟ್ಟಿ ತಾಲ್ಲೂಕಿನ ರಾಮಪುರದ ಪೂರ್ಣಪ್ರಜ್ಞೆ ಶಿಕ್ಷಣ ಸಂಸ್ಥೆಯ ಸ್ಫೂರ್ತಿ ಸಂಗಮೇಶ ಬೆಳ್ಳಿಕಟ್ಟಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಂಗ್ಲೀಷ ಮಾಧ್ಯಮದಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ತಾಯಿ ಪ್ರೇಮಾ ಸಿಹಿ ತಿನಿಸಿದರು. 

 

ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +೯೧ ೯೯೦೨೫೨೩೬೯೮...)... 

 ಇಂಗ್ಲೀಷ ಮಾಧ್ಯಮದಲ್ಲಿ ಸ್ಫೂರ್ತಿ ರಾಜ್ಯಕ್ಕೆ 9ನೇ ಸ್ಥಾನ ರಬಕವಿ-ಬನಹಟ್ಟಿ,ಅ11: ತಾಲ್ಲೂಕಿನ ರಾಮಪುದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಸ್ಫೂರ್ತಿ ಸಂಗಮೇಶ ಬೆಳ್ಳಿಕಟ್ಟಿ ಇಂಗ್ಲಿμï ಮಾಧ್ಯಮದಲ್ಲಿ ರಾಜ್ಯಕ್ಕೆ ಒಂಭತ್ತನೆಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸ್ಫೂರ್ತಿಯವರ ತಂದೆ ಬನಹಟ್ಟಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಫೂರ್ತಿ ಇಂಗ್ಲೀಷ:123, ಕನ್ನಡ:100, ಹಿಂದಿ: 99, ಗಣಿತ:100, ಸಮಾಜ ವಿಜ್ಞಾನ: 96, ವಿಜ್ಞಾನದಲ್ಲಿ 99 ಅಂಕಗಳನ್ನು ಪಡೆದುಕೊಂಡು 625 ಕ್ಕೆ 617 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ಒಂಭತ್ತನೆಯ ಸ್ಥಾನವನ್ನು ಪಡೆದುಕೊಂಡು ಸ್ಫೂರ್ತಿ ಪತ್ರಿಕೆಯ ಜೊತೆಗೆ ಮಾತನಾಡುತ್ತ, 620ಕ್ಕೂ ಹೆಚ್ಚು ಅಂಕಗಳು ಬರಬೇಕಾಗಿತ್ತು. ಮುಂದಿನ ದಿನಗಳಲ್ಲಿ ಏರೋಸ್ಪೇಸ್ ವಿಭಾಗದಲ್ಲಿ ಓದುವ ಆಸೆಯನ್ನು ಹೊಂದಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಕುಳಿತು ಓದಿದೆ. ಶಿಕ್ಷಕರು ಆನ್ಲೈನ್ ಮೂಲಕ ಅನೇಕ ವಿಷಯಗಳನ್ನು ತಿಳಿಸಿದರು. ಶಾಲೆಯ ಶಿಕ್ಷಕರು ಮತ್ತು ತಂದೆ ಮತ್ತು ತಾಯಿ ಬಹಳಷ್ಟು ಪ್ರೋತ್ಸಾಹ ನೀಡಿದರು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕ ಸುಭಾಸ ಹಟ್ಟಿ ಮಾತನಾಡಿ, ಸ್ಫೂರ್ತಿ ಆತ್ಮ ವಿಶ್ವಾಸದ ಮತ್ತು ದಿನ ನಿತ್ಯ ಅಭ್ಯಾಸ ಮಾಡುತ್ತಿದ್ದರು. ಅವರಿಗೆ ಬೇಕಾದ ಪುಸ್ತಕ, ಪ್ರಶ್ನೆ ಪತ್ರಿಕೆಗಳನ್ನು ಶಾಲೆಯಿಂದ ಒದಗಿಸಲಾಗಿತ್ತು. ಸಮಸ್ಯೆಗಳನ್ನು ದೂರವಾಣಿಯ ಮೂಲಕ ಶಿಕ್ಷಕರನ್ನು ಕೇಳಿ ಪರಿಹರಿಸಿಕೊಳ್ಳುತ್ತಿದ್ದರು ಎಂದರು.