ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಪೂರ್ಣಪ್ರಜ್ಞ ಶಾಲೆ ಉತ್ತಮ ಸಾಧನೆ ರಬಕವಿ-ಬನಹಟ್ಟಿ,ಅ11: ರಾಮಪೂರದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಇಂಗ್ಲೀಷ್ ಹಾಗು ಕನ್ನಡ ಮಾಧ್ಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. 


j

ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +೯೧ ೯೯೦೨೫೨೩೬೯೮...)...

ರಬಕವಿ-ಬನಹಟ್ಟಿ,ಅ11: ರಾಮಪೂರದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಇಂಗ್ಲೀಷ್ ಹಾಗು ಕನ್ನಡ ಮಾಧ್ಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಒಟ್ಟು 85 ವಿದ್ಯಾರ್ಥಿಗಳ ಪೈಕಿ 82 ವಿದ್ಯಾರ್ಥಿಗಳು ತೇರ್ಗಡೆ ಹೊಂದ ಶೇ.96.47 ರಷ್ಟು ಸಾಧನೆಯಾಗಿದೆ. 35 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 40 ವಿದ್ಯಾರ್ಥಿಗಳು ಪ್ರಥಮ ಹಾಗು 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದಾರೆ. ಸ್ಪೂರ್ತಿ ಬೆಳ್ಳಿಕಟ್ಟಿ 617 ಅಂಕ ಪಡೆದು ಶೇ.98.72 ರಷ್ಟಾಗಿ ಪ್ರಥಮ ಸ್ಥಾನ, ಪ್ರಾಂಜಲ ಕಲಾಲ 616 ಅಂಕದೊಂದಿಗೆ ಶೇ.98.56 ಹಾಗು ತೇಜಪಾಲ ಬುರ್ಶಿ 608 ಅಂಕ ಪಡೆದು ಶೇ,97.28 ಅಂಕ ಗಳಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಶೇ.93.75 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 64 ವಿದ್ಯಾರ್ಥಿಗಳ ಪೈಕಿ 6 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 30 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 12 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗು 12 ವಿದ್ಯಾರ್ಥಿಗಳು ತೃತಿಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ನವೀನ ಕಡ್ಲಿಮಟ್ಟಿ 606 ಅಂಕ ಪಡೆದು ಶೇ.96.96 ಅಂಕ ಪಡೆದು ಪ್ರಥಮ ಸ್ಥಾನಗಿಟ್ಟಿಸಿಕೊಂಡರೆ, ಸ್ವಾತಿ ನಾಗರಾಳ 596 ಅಂಕ ಪಡೆದು ಶೇ.95.36 ಹಾಗು ಸಂಜನಾ ಬಡ್ಡಿ 585 ಅಂಕದೊಂದಿಗೆ ಶೇ.93.60 ಅಂಕ ಪಡೆದಿದ್ದಾಳೆ.