ತೇರದಾಳ : ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು ಪಟ್ಟಣದಲ್ಲಿ 16 ಪಾಸಿಟಿವ ಪ್ರಕರಣಗಳು ಪತ್ತೆಯಾಗಿದ್ದು ರವಿವಾರ ದಿನ ಕಿಲ್ಲಾ ಭಾಗದ 79ವರ್ಷದ ಮಹಿಳೆಯನ್ನು ಬಲಿ ತಗೆದುಕೊಂಡು ಪಟ್ಟಣದ ಜನತೆಯನ್ನು ಚಿಂತೆಗೀಡು ಮಾಡಿದೆ.
ಪಟ್ಟಣದಲ್ಲಿ ಸೋಂಕಿತರ ಸಂಪರ್ಕದಲ್ಲಿರುವ ಜನರನ್ನು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುದರ್ಶನ ನಿಡೋಣಿ ಇವರು ರ್ಯಾಪಿಡ್ ಪರೀಕ್ಷೆಯ ಮೂಲಕ ಸೋಂಕಿತರ ಸಂಪರ್ಕದಲ್ಲಿರುವವರ 83ಜನರ ಪರೀಕ್ಷೆ ಮಾಡಿದಾಗ 16ಜನರು ಪಾಸಿಟಿವ ಪ್ರಕರಣಗಳು ಪತ್ತೆಯಾಗಿವೆ. ಪ್ರಭುಗಲ್ಲಿಯ 62ವರ್ಷದ ಪುರುಷನಿಗೆ ಸೋಂಕು ಅಂಟಿಕೊಂಡಿದ್ದರೆ ಅದೇ ಗಲ್ಲಿಯ 68ವರ್ಷದ ಪುರುಷ ಹಾಗೂ 65ವರ್ಷದ ಮಹಿಳೆಗೆ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಗಣಪತಿ ಗಲ್ಲಿಯ 50ವರ್ಷದ ಪುರುಷನಿಗೆ ಮತ್ತು 32ವರ್ಷದ ಮಹಿಳೆಗೆ ಸೋಂಕು ಅಂಟಿಕೊಂಡರೆ 5ವರ್ಷದ ಮತ್ತು 2ವರ್ಷದ ಬಾಲಕರಿಗೆ ಸೋಂಕು ವಕ್ಕರಿಸಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಗುರುಕುಲ ರಸ್ತೆಯ 43ವರ್ಷದ ಪುರುಷನಿಗೆ ಸೋಂಕು ಅಂಟಿಕೊಂಡಿದೆ. ಅದರಂತೆ 30ವರ್ಷದ ಮಹಿಳೆಗೆ ಸೋಂಕು ತಗುಲಿದೆ. ದೇವರಾಜ ನಗರದ 36ವರ್ಷದ ಪುರುಷನಿಗೆ, 34 ವರ್ಷದ ಮಹಿಳೆಗೆ ಸೋಂಕು ವಕ್ಕರಿಸಿದೆ. ಕುಂಬಾರ ಗಲ್ಲಿಯ 41ವರ್ಷದ ಪುರುಷನಿಗೆ ಅಂಟಿದರೆ ಅದೇ ಗಲ್ಲಿಯ 38ವರ್ಷದ ಮಹಿಳೆಗೆ ಹಾಗೂ 6ವರ್ಷದ ಬಾಲಕನಿಗೆ ಸೋಂಕು ತಗುಲಿದೆ. ಆಝಾದ ನಗರದ 32ವರ್ಷದ ಪುರುಷನಿಗೆ ಸೋಂಕು ತಗುಲಿದರೆ ಮಾಂಗ ಗಲ್ಲಿಯ 35ವರ್ಷದ ಪುರುಷನಿಗೆ ಸೋಂಕು ಅಂಟಿಕೊಂಡಿದೆ. ಮಹಾಮಾರಿ ಪಟ್ಟಣದಲ್ಲಿ ರಣಕೇಕೆ ಹಾಕುತ್ತಿದೆ. ವೈದ್ಯಾಧಿಕಾರಿಗಳು, ಪುರಸಭೆಯವರು, ಪೋಲಿಸ್ ಇಲಾಖೆಯವರು, ಆಶಾಕಾರ್ಯಕರ್ತೆಯರು ಕೊರೊನಾ ವೈರಸ್ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ ಆದರೂ ಜನತೆ ಈ ವರೆಗೆ ಸರಕಾರದ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಮನೆಯಲ್ಲಿಯೇ ಇದ್ದು ಕೊರೊನಾದಿಂದ ರಕ್ಷಣೆ ಪಡೆಯಬಹುದು. ಎಲ್ಲರೂ ತಪ್ಪದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರಿಂದ ವೈರಸ್ ಹರಡುವುದನ್ನು ತಡೆಗಟ್ಟಬಹುದು. ಅನಾವಶ್ಯಕವಾಗಿ ಯಾರೂ ಮನೆಯಿಂದ ಹೊರಗೆ ಬರಬೇಡಿ.
Social Plugin