
ಬನಹಟ್ಟಿಯ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಅನುದಾನರಹಿತ ಶಿಕ್ಷಕರಿಗೆ ದಿನಸಿ ಕಿಟ್ ವಿತರಿಸಿದ ಮಾಜಿ ಸಚಿವೆ ಉಮಾಶ್ರೀ.
ಅನುದಾನರಹಿತ ಶಿಕ್ಷಕರಿಗೆ ದಿನಸಿ ಕಿಟ್ ವಿತರಣೆ
ರಬಕವಿ-ಬನಹಟ್ಟಿ,ಅ29: ಅನುದಾನರಹಿತ ಶಿಕ್ಷಕರ ಸ್ಥಿತಿ-ಗತಿ ತೀವ್ರ ಚಿಂತಾಜನಕವಾಗಿದೆ ಸರ್ಕಾರ ಶೀಘ್ರವೇ ಇವರಿಗೆ ವಿಶೇಷ ಪ್ಯಾಕೇಜ್ ಕಾರ್ಯರೂಪಕ್ಕೆ ತರುವ ಮೂಲಕ ಸಾವಿರಾರು ಕುಟುಂಬಗಳಿಗೆ ಆಸರೆಯಾಗಬೇಕೆಂದು ಮಾಜಿ ಸಚಿವೆ ಉಮಾಶ್ರೀ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಉಮಾಶ್ರೀ ಅಭಿಮಾನಿ ಬಳಗದಿಂದ ನೂರಕ್ಕೂ ಅಧಿಕ ಅನುದಾನರಹಿತ ಶಿಕ್ಷಕರಿಗೆ ದಿನಸಿ ಕಿಟ್ ವಿತರಿಸಿ ನಂತರ ಮಾತನಾಡಿದರು. ಕೋವಿಡ್-19 ದಿಂದಾಗಿ ಉದ್ಯೋಗ ವಂಚಿತರಾಗಿರುವ ಶಿಕ್ಷಕ ವೃಂದಕ್ಕೆ ತಾತ್ಕಾಲಿಕ ವ್ಯವಸ್ಥೆಯನ್ನಾದರೂ ಒದಗಿಸುವಲ್ಲಿ ವೈಫಲ್ಯ ಕಂಡಿರುವ ಸರ್ಕಾರದ ಕ್ರಮ ಖಂಡಿಸಿದರು.
ಕಾಂಗ್ರೆಸ್ ಪಕ್ಷ ಸದಾ ಶಿಕ್ಷಕರಿಗೆ ಬೆನ್ನೆಲುಬಾಗಿ ನಿಲ್ಲುವ ಮೂಲಕ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಮಾಡುತ್ತದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಇದೇ ಸಂದರ್ಭ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ರಬಕವಿ-ಬನಹಟ್ಟಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಭದ್ರನ್ನವರ, ನಗರಸಭಾ ಸದಸ್ಯ ಓಂಪ್ರಕಾಶ ಮನಗೂಳಿ, ಬಸವರಾಜ ಗುಡ್ಡೋಡಗಿ, ರಾಜು ಶಾಸ್ತ್ರಿಗೊಲ್ಲರ, ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಕೊಕಟನೂರ, ಸಂಗಮೇಶ ಮಡಿವಾಳ, ಯೂಥ್ ಕಾಂಗ್ರೆಸ್ ಅಧ್ಯಕ್ಷ ಪಿಂಟೂ ಕುಂಬಾರ, ರಾಹುಲ್ ಕಲಾಲ, ಕಿರಣ ಕರಲಟ್ಟಿ, ಬಸವರಾಜ ಬೀಳಗಿ, ದಾನಪ್ಪ ಹುಲಜತ್ತಿ, ಶ್ರೀಕರ ಪಿಸೆ, ಶ್ರೀಶೈಲ ಹಿತ್ತಲಮನಿ, ಶಂಕರ ಕೆಸರಗೊಪ್ಪ, ಹುಜೇಫಾ ಮುಲ್ಲಾ ಉಪಸ್ಥಿತರಿದ್ದರು.
Social Plugin