ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಗ್ರಾಮೀಣ ಘಟಕದ ಯುವಮೋರ್ಚಾದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಸನ್ಮಾನಿಸಲಾಯಿತು.
ಪಕ್ಷದ ಸೇವೆ ಭಾರತ ಮಾತೆ ಸೇವೆಯಾಗಿರಲಿ
ರಬಕವಿ-ಬನಹಟ್ಟಿ,ಅ29: ಪಕ್ಷದಲ್ಲಿ ಪದಾಧಿಕಾರಿಗಳಾಗಿ ಅನೇಕ ಹುದ್ದೇಗಳನ್ನೇರಿ ಕಾಟಾಚಾರಕ್ಕೆ ಅಥವಾ ಪದವಿವಾಗಿ ಸೇವೆ ಮಾಡದೆ ಪ್ರಾಮಾಣಿಕ ಹಾಗು ಭಾರತಾಂಬೆಯ ಸೇವೆಯಲ್ಲಿರುವಂತೆ ಬಿಂಬಿತವಾಗುವ ರೀತಿಯಲ್ಲಿ ಸೇವೆ ಸಲ್ಲಿಸಿದ್ದಲ್ಲಿ ನಿಜವಾಗಿಯೂ ಫಲ ದೊರಕುವದೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ತೇರದಾಳ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಘಟಕದ ಯುವ ಮೋರ್ಚಾದ ನೂತನ ಪದಾಧಿಕಾರಿಗಳ ಆಯ್ಕೆ ಹಾಗು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕ್ಷೇತ್ರದಲ್ಲಿ ಕೆಳಮಟ್ಟದ ವ್ಯಕ್ತಿಗಳಿಗೆ ತೊಂದರೆಯಾದರೂ ಪ್ರತಿಭಟಿಸುವ ಮೂಲಕ ನ್ಯಾಯ ಒದಗಿಸುವ ಕಾರ್ಯ ಪ್ರತಿಯೊಬ್ಬರದ್ದಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಎಲ್ಲ ಅರ್ಹ ಫಲಾನುಭವಿಗಳಿಗೆ ದೊರಕುವಂತೆ ಮಾಡಬೇಕು. ಹೃದಯದಿಂದ ದೇಶಸೇವೆಯಷ್ಟೇ ಪ್ರಾಮಾಣಿಕತೆ ಪಾಲಿಸಿದ್ದಲ್ಲಿ ನಿಜಕ್ಕೂ ಮಾದರಿ ವ್ಯಕ್ತಿಯಾಗುವಲ್ಲಿ ಸಂಶಯವಿಲ್ಲವೆಂದರು. ವೇದಿಕೆ ಮೇಲೆ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ, ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಯುವ ಮೋರ್ಚಾ ಅಧ್ಯಕ್ಷ ಲಕ್ಕಪ್ಪ ಪಾಟೀಲ, ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಪ್ರಧಾನ ಕಾರ್ಯದರ್ಶಿ ಆನಂದ ಕಂಪು ಇದ್ದರು.
Social Plugin