ನೇಕಾರರ ಸೌಲಭ್ಯಕ್ಕಾಗಿ ಸರ್ಕಾರದೊಂದಿಗೆ ಸಂಘರ್ಷಕ್ಕೂ ಸಿದ್ಧ...ರಬಕವಿ-ಬನಹಟ್ಟಿ,ಅ29: ರಾಜ್ಯದ ಬಡನೇಕಾರರಿಗೆ ಕೂಲಿ ಒದಗಿಸುವ ಸಲುವಾಗಿಯೇ ನಿರ್ಮಿತಗೊಂಡಿರುವ ಕೆಎಚ್‍ಡಿಸಿ ನಿಗಮದಲ್ಲಿ ವರ್ಷಗಳು ಉರುಳಿದಂತೆ ಆಡಳಿತ ವ್ಯವಸ್ಥೆಯ ದುರಾವಸ್ಥೆಯಿಂದ ಇಂದು ನೇಕಾರರು ಸಂದಿಗ್ಧ ಪರಿಸ್ಥಿತಿ ಎದುರಿಸುವಲ್ಲಿ ಕಾರಣವಾಗಿದೆ. ನೇಕಾರರ ಸೌಲಭ್ಯಗಳಿಗಾಗಿ ಸರ್ಕಾರದೊಂದಿಗೆ ಸಂಘರ್ಷಕ್ಕೂ ಸಿದ್ಧನಿದ್ದೇನೆ ಎಂದು ಶಾಸಕ ಸಿದ್ದು ಸವದಿ ಹೇಳಿದರು. 

   
ಬನಹಟ್ಟಿಯ ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‍ನಲ್ಲಿ ಕೆಎಚ್‍ಡಿಸಿ ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಾಸಕ ಸಿದ್ದು ಸವದಿಯವರನ್ನು ಸನ್ಮಾನಿಸಲಾಯಿತು.


ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)... 

 ನೇಕಾರರ ಸೌಲಭ್ಯಕ್ಕಾಗಿ ಸರ್ಕಾರದೊಂದಿಗೆ ಸಂಘರ್ಷಕ್ಕೂ ಸಿದ್ಧ 
ರಬಕವಿ-ಬನಹಟ್ಟಿ,ಅ29: ರಾಜ್ಯದ ಬಡನೇಕಾರರಿಗೆ ಕೂಲಿ ಒದಗಿಸುವ ಸಲುವಾಗಿಯೇ ನಿರ್ಮಿತಗೊಂಡಿರುವ ಕೆಎಚ್‍ಡಿಸಿ ನಿಗಮದಲ್ಲಿ ವರ್ಷಗಳು ಉರುಳಿದಂತೆ ಆಡಳಿತ ವ್ಯವಸ್ಥೆಯ ದುರಾವಸ್ಥೆಯಿಂದ ಇಂದು ನೇಕಾರರು ಸಂದಿಗ್ಧ ಪರಿಸ್ಥಿತಿ ಎದುರಿಸುವಲ್ಲಿ ಕಾರಣವಾಗಿದೆ. ನೇಕಾರರ ಸೌಲಭ್ಯಗಳಿಗಾಗಿ ಸರ್ಕಾರದೊಂದಿಗೆ ಸಂಘರ್ಷಕ್ಕೂ ಸಿದ್ಧನಿದ್ದೇನೆ ಎಂದು ಶಾಸಕ ಸಿದ್ದು ಸವದಿ ಹೇಳಿದರು. ನಗರದ ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‍ನಲ್ಲಿ ಕೆಎಚ್‍ಡಿಸಿ ನಿಗಮದ ನೂತನ ಅಧ್ಯಕ್ಷರಾಗಿದ್ದಕ್ಕೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನೇಕಾರರ ಕ್ಷೇತ್ರದ ಶಾಸಕರೆಲ್ಲರೂ ಒತ್ತಡ ಹೇರಿದ್ದೇವೆ. ಸರ್ಕಾರ 10 ಲಕ್ಷ ಸೀರೆಗಳನ್ನಾದರೂ ಖರೀದಿಸಿ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ನೇಕಾರರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ. ರಾಜ್ಯದಲ್ಲಿ ಕೆಎಚ್‍ಡಿಸಿ ನಿಗಮ ಚೇತರಿಕೆಯಾಗುವಲ್ಲಿ ಸಚಿವ ಬಸವರಾಜ ಬೊಮ್ಮಾಯಿಯವರೊಂದಿಗೆ ಸಭೆ ನಡೆಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ನೇಕಾರರ ನೆರವಿಗೆ ವೇತನ, ಗೌರವ ಧನ ಹೆಚ್ಚಿಸುವಲ್ಲಿ ಚರ್ಚೆ ನಡೆಸಲಾಗಿದೆ. ಬೆಂಗಳೂರಿನಲ್ಲಿ 3 ಎಕರೆ ಹಾಗು ಹುಬ್ಬಳ್ಳಿಯಲ್ಲಿ ಎರಡುವರೆ ಎಕರೆಯಷ್ಟು ಆಸ್ತಿ ಹೊಂದಿದೆ. 6 ಜಿಲ್ಲೆಗಳಲ್ಲಿ ಪ್ರಿಯದರ್ಶಿನಿ ಪ್ರದರ್ಶನ ಮಳಿಗೆಗಳು ಇದೀಗ ಬಂದ್ ಆಗಿದ್ದು, ಇವೆಲ್ಲವನ್ನೂ ಪುನರ್ ಪ್ರಾರಂಭಿಸುವದರ ಮೂಲಕ ನಿಗಮಕ್ಕೆ ಮರುಜೀವ ನೀಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು. ಶಾಸಕ ಸ್ಥಾನಕ್ಕೆ ರಾಜೀನಾಮೆ: ನೇಕಾರರ ಸಾಲ ಮನ್ನಾ ವಿಷಯದಲ್ಲಿ ಶಾಸಕರು ಅಡ್ಡಿಯಗುತ್ತಿದ್ದಾರೆಂದು ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿರುವದು ಸತ್ಯಕ್ಕೆ ದೂರಾಗಿದೆ. ಅಧಿಕಾರಿಗಳು ಕೆಳ ಹಂತದ ತನಿಖೆ ನಡೆಸುವ ಸಂದರ್ಭ ಕೆಲ ಸಹಕಾರಿ ಸಂಘಗಳು ಮಾಡಿದ ಪ್ರಮಾದದಿಂದಾಗಿ ವಿಳಂಬಕ್ಕೆ ಕಾರಣವಾಗಿದೆ. ಒಂದು ವೇಳೆ ಸಾಲ ಮನ್ನಾ ವಿಷಯದಲ್ಲಿ ನನ್ನ ಹಸ್ತಕ್ಷೇಪವಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವದಾಗಿ ನೇರವಾಗಿ ಹೇಳಿದರು. ಬ್ಯಾಂಕ್ ಅಧ್ಯಕ್ಷ ಶಂಕರ ಜುಂಜಪ್ಪನವರ, ಉಪಾಧ್ಯಕ್ಷ ಮಲ್ಲಣ್ಣ ಕಕಮರಿ, ಧರೆಪ್ಪ ಉಳ್ಳಾಗಡ್ಡಿ, ರಾಜು ಅಂಬಲಿ, ರಾಮಣ್ಣ ಭದ್ರನ್ನವರ, ಸಿದ್ರಾಮಪ್ಪ ಸವದತ್ತಿ, ಜಗದೀಶ ಕೋರಿಪೇಠ, ವಿಜಯ ಹುಡೇದಮನಿ, ರಮೇಶ ಮಂಡಿ, ಪ್ರವೀಣ ಕೋಲಾರ, ಪಂಡಿತ ಪಟ್ಟಣ, ಶ್ರೀಶೈಲ ಬೀಳಗಿ, ಕುಮಾರ ಕದಂ, ಮಹಾಲಿಂಗ ಬಾಗಲಕೋಟ, ಸಂಜಯ ಜವಳಗಿ ಸೇರಿದಂತೆ ಅನೇಕರಿದ್ದರು. `ನೇಕಾರ ಸಾಲಮನ್ನಾ ವಿಳಂಬದಲ್ಲಿ ನನ್ನದೇನು ಪಾತ್ರವಿಲ್ಲ. ಕೆಲ ಸಹಕಾರಿ ಸಂಘಗಳ ಪ್ರಮಾದ ಕಾರಣವಾಗಿದೆ. ಹಸ್ತಕ್ಷೇಪ ಸಾಬೀತಾದರೆ ಶಾಸಕತ್ವಕ್ಕೆ ರಾಜೀನಾಮೆ ನೀಡುವೆ.’-----ಸಿದ್ದು ಸವದಿ, ಶಾಸಕರು, ತೇರದಾಳ.