ಬನಹಟ್ಟಿ ಬಸ್ ನಿಲ್ದಾಣದ ಸಮೀಪ ರಾಜ್ಯ ಹೆದ್ದಾರಿ ಮಧ್ಯದಲ್ಲಿಯೇ ಮೀನು ಮಾರಾಟ ಮಾಡುತ್ತಿರುವ ವ್ಯಾಪಾರಿಗಳು.
ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಆಗ್ರಹ *ಮೂಗು ಮುಚ್ಚಿಕೊಂಡೇ ಸಾಗುವ ಜನ ರಬಕವಿ-ಬನಹಟ್ಟಿ,ಅ28: ತಾಲೂಕಿಗೆ ಸಂಬಂಧ ಮೀನು ಮಾರಾಟಗಾರರಿಗೆ ಮೀನು ಮಾರುವದೇ ಒಂದು ಸವಾಲಾಗಿ ಪರಿಣಮಿಸಿದೆ. ಬನಹಟ್ಟಿಯ ಬಸ್ ನಿಲ್ದಾಣ ಬಳಿಯ ಜನನೀಬೀಡ ಪ್ರದೇಶದಲ್ಲಿ ನಿತ್ಯ ಮೀನು ಮಾರಾಟ ಮಾಡುತ್ತಿದ್ದು, ಸಾರ್ವಜನಿಕರ ಅದರಲ್ಲೂ ಮಹಿಳೆಯರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ರಾಜಧಾನಿಯಿಂದ ಆಗಮಿಸುವ ಎಲ್ಲ ಖಾಸಗಿ ಬಸ್‍ಗಳ ನಿಲುಗಡೆ ಇಲ್ಲಿಯೇ ಇರುವ ಕಾರಣ ಪ್ರಯಾಣಿಕರಿಗೆ ತೀವ್ರ ಸಂಕಟಮಯವಾಗಿ ಕಾಡುತ್ತಿದೆ.
ಇಲ್ಲಿನ ಮೀನು ವ್ಯಾಪಾರಿಗಳಿಗೆ ಸುಸಜ್ಜಿತ ಮಾರುಕಟ್ಟೆ ನೀಡಿದ್ದಲ್ಲಿ ಸ್ವಚ್ಛತೆಯೊಂದಿಗೆ ಶಿಸ್ತುಬದ್ಧವಾಗಿ ವ್ಯಾಪಾರ ನಡೆಸುವಲ್ಲಿ ಕಾರಣವಾಗುವದು. ಸದ್ಯ ಮೀನು ವ್ಯಾಪಾರಿಗಳು ಅಳಿದುಳಿದ ಮಾಂಸವನ್ನು ಅಲ್ಲಿಯೇ ಬಿಟ್ಟು ತೆರಳುವದರಿಂದ ನಿತ್ಯ ಮಲೀನತೆ ಎದ್ದು ಕಾಣುತ್ತಿದೆ.
`ಸಾರ್ವಜನಿಕರಿಂದ ಲಿಖಿತ ಸಮಸ್ಯೆ ಬಂದಿಲ್ಲ. ಅಂತಹ ಪರಿಸ್ಥಿತಿ ಎದುರಾದಲ್ಲಿ ಸೂಕ್ತ ಜಾಗೆಯೊಂದಿಗೆ ಮಾರುಕಟ್ಟೆ ಸ್ಥಳಾಂತರಿಸಲಾಗುವದು.’----ಶ್ರೀನಿವಾಸ ಜಾಧವ, ಪೌರಾಯಕ್ತರು, ರಬಕವಿ-ಬನಹಟ್ಟಿ.
Social Plugin