ಮೇಣ ಹಾಗು ಸಿಲಿಕಾನ್ ಮೂರ್ತಿ ತಯಾರಿಸುವ `ಆನಂದ’ *ಬಣ್ಣದ ನಗರಿಗೆ ಮತ್ತೊಂದು ಮತ್ತೊಂದು ಕಿರೀಟ...ರಬಕವಿ-ಬನಹಟ್ಟಿ ಉತ್ತರ ಕರ್ನಾಟಕದ `ಮ್ಯಾಂಚೇಸ್ಟರ್’ ಎಂಬ ಖ್ಯಾತಿ ಪಡೆದಿರುವ ರಬಕವಿ-ಬನಹಟ್ಟಿ ನಗರ ಬಣ್ಣ ಬಣ್ಣದ ಸೀರೆ ಉತ್ಪಾದನೆಯಷ್ಟೇ ಅಲ್ಲದೆ ಸಾಹಿತಿ, ಕಲಾವಿದರ ತವರೂರೆಂದು ಸಾಬೀತು ಪಡಿಸುವಲ್ಲಿ ಸಾರಿ ಸಾರಿ ಹೇಳುತ್ತಿದೆ. 

    
ಸಿಲಿಕಾನ್ ರಬ್ಬರ್ ಹಾಗು ಮೇಣದಿಂದ ತಯಾರಿಸಿದ ವಿವಿಧ ಗಣ್ಯರ ಮೂರ್ತಿಗಳು.


ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)... 

 ಮೇಣ ಹಾಗು ಸಿಲಿಕಾನ್ ಮೂರ್ತಿ ತಯಾರಿಸುವ `ಆನಂದ’ *ಬಣ್ಣದ ನಗರಿಗೆ ಮತ್ತೊಂದು ಮತ್ತೊಂದು ಕಿರೀಟ 

ರಬಕವಿ-ಬನಹಟ್ಟಿ ಉತ್ತರ ಕರ್ನಾಟಕದ `ಮ್ಯಾಂಚೇಸ್ಟರ್’ ಎಂಬ ಖ್ಯಾತಿ ಪಡೆದಿರುವ ರಬಕವಿ-ಬನಹಟ್ಟಿ ನಗರ ಬಣ್ಣ ಬಣ್ಣದ ಸೀರೆ ಉತ್ಪಾದನೆಯಷ್ಟೇ ಅಲ್ಲದೆ ಸಾಹಿತಿ, ಕಲಾವಿದರ ತವರೂರೆಂದು ಸಾಬೀತು ಪಡಿಸುವಲ್ಲಿ ಸಾರಿ ಸಾರಿ ಹೇಳುತ್ತಿದೆ. ಇದೀಗ ರಬಕವಿಯ ಆನಂದ ರಾಚಪ್ಪ ಬೀಳಗಿ ಎಂಬ 32 ವರ್ಷದ ಯುವಕನ ಸಾಧನೆ ಅಪ್ರತಿಮವಾದುದು. ಇತ್ತೀಚೆಗೆ ಸಿಲಿಕಾನ್ ರಬ್ಬರ ಮೂಲಕ ಮಹಿಳೆಯೋರ್ವಳ ಮೂರ್ತಿ ತಯಾರಿಸುವ ಮೂಲಕ ರಾತ್ರೋರಾತ್ರಿ ಇಡೀ ರಾಜ್ಯವಷ್ಟೇ ಅಲ್ಲದೆ ದೇಶವೇ ಈ ಕಲಾವಿದನನ್ನು ಕಂಡು ನಿಬ್ಬೆರಗಾಗುವಲ್ಲಿ ಕಾರಣವಾಗಿದೆ. ಚಿಕ್ಕವರಿಂದಾಗಲೂ ಚಿತ್ರಕಲೆಯತ್ತ ಹೆಚ್ಚು ಗಮನವಿದ್ದ ಕಾರಣ ಎಸ್‍ಎಸ್‍ಎಲ್‍ಸಿವರೆಗೆ ರಬಕವಿಯ ಎಂ.ವಿ. ಪಟ್ಟಣ ಹೈಸ್ಕೂಲ್‍ನಲ್ಲಿ ಕಲಿತ ಆನಂದ ಪಿಯುಸಿಯನ್ನು ಜಮಖಂಡಿಯ ಮಹೇಶ ಚಿತ್ರಕಲಾ ಮಂದಿರದಲ್ಲಿ ಮುಗಿಸಿ ಪದವಿಯನ್ನು ದಾವಣಗೆರೆಯ ಫೈನ್ ಆರ್ಟ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ವಿಜುವಲ್ ಆರ್ಟ್(ಪೇಂಟಿಂಗ್) ಮುಗಿಸಿಕೊಂಡರು. ಅದೇ ವರ್ಷದಿಂದ ತನ್ನ ಚಿತ್ರಕಲೆಗಳ ಪ್ರದರ್ಶನದಿಂದ ಪ್ರಶಸ್ತಿಗಳು ಲಭಿಸಿದ್ದೇ ಅನನ್ಯ. ಪ್ರಮುಖವಾಗಿ 2009 ರಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಹಾಗು ಶಂಕರ ಘಟ್ಟದ ಸಹ್ಯಾದ್ರಿ ಉತ್ಸವ ಪ್ರಶಸ್ತಿ ಬಾಚಿಕೊಂಡು ಇಂದಿಗೂ ವಿಶೇಷ ಕಲೆಯೊಂದಿಗೆ ಹೆಸರು ಪಡೆದವರಾಗಿದ್ದಾರೆ. ದಾವಣಗೆರೆಯಲ್ಲಿ 2007 ರಿಂದ 2009 ರವರೆಗೆ ನಡೆದ ಚಾಲುಕ್ಯ ಸಿರಿ, ಚಿತ್ರೋತ್ಸವ ಗ್ರೂಪ್‍ನ ಚಿತ್ರಕಲೆ ಪ್ರದರ್ಶನದಲ್ಲಿ ಭಾಗಿಯಾಗಿ ವಿಶೇಷ ವ್ಯಕ್ತಿಯಾಗಿ ಹೊರಹೊಮ್ಮಿದವರು. ನಂತರ ಕಲಾ ಮೇಳದಲ್ಲಿ 2013 ರಲ್ಲಿ ಹುಬ್ಬಳ್ಳಿ, 2014 ರಲ್ಲಿ ಹಾವೇರಿ, 2014 ಹಾಗು 2015 ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಕಲಾಮೇಳದಲ್ಲಿ ಮಹತ್ವ ಪಡೆದಿದ್ದಲ್ಲದೆ 2016 ರಲ್ಲಿ ಮೂಡಬಿದಿರೆಯ ಆಳ್ವಾಸ್ ಮಹಾವಿದ್ಯಾಲಯ ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. 2009 ರಲ್ಲಿ ಕೇರಳದ ಕ್ಯಾಲಿಕತ್‍ನಲ್ಲಿ ನಡೆದ ದಕ್ಷಿಣ ಭಾರತ ಕಲಾಸ್ಪರ್ಧೆ, 2012 ಹಾಗು 2015 ರಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್‍ನ ಚಿತ್ರ ಸಂತೆಯಲ್ಲಿ ಪಾಲ್ಗೊಂಡ ಗರಿಮೆ ಇವರದಾಗಿದೆ.

ಮೂರ್ತಿ ತಯಾರಕ ರಬಕವಿಯ ಆನಂದ ರಾಚಪ್ಪ ಬೀಳಗಿ. 

ಕಳೆದ 14 ವರ್ಷಗಳಿಂದ ಬೆಂಗಳೂರಿನಲ್ಲಿಯೇ ಕಲಾಸೇವೆಯಲ್ಲಿ ಮುನ್ನಡೆಯುತ್ತಿರುವ ಆನಂದ ಬೀಳಗಿ ಇದೀಗ ಕಳೆದ ಮೂರು ವರ್ಷಗಳಿಂದ ಶ್ರೀಧರ ಮೂರ್ತಿ ಕೆ. ಅವರೊಂದಿಗೆ `ಗೊಂಬೆ ಮನೆ’ ಎಂಬ ಸಂಸ್ಥೆ ನಿರ್ಮಿಸುವ ಮೂಲಕ ಅಗಾಧ ಮೇಣದ ಮೂರ್ತಿಗಳ ಮೂಲಕ ತನ್ನ ಕಲೆಯ ಕೈಚಳಕ ತೋರಿಸುವಲ್ಲಿ ಯಶಸ್ವಿ ಕಂಡಿದ್ದಾರೆ.
ಇದೀಗ ಇತ್ತೀಚೆಗೆ ಕೊಪ್ಪಳದಲ್ಲಿನ ಕೂದಲು ಉದ್ಯಮಿ ಶ್ರೀೀನಿವಾಸ ಗುಪ್ತಾ ಅವರ ಗೃಹ ಪ್ರವೇಶ ನಿಮಿತ್ತ ಪತ್ನಿಯ ಸಿಲಿಕಾನ್ ರಬ್ಬರ್ ಪ್ರತಿಮೆಗೆ ಎಲ್ಲಿಲ್ಲದ ಬೇಡಿಕೆ ಹಾಗು ಗಮನ ಸೆಳೆಯುವಲ್ಲಿ ಕಾರಣವಾಗಿತ್ತು. ಈ ಸಿಲಿಕಾನ್ ರಬ್ಬರ್ ಪ್ರತಿಮೆ ತಯಾರಿಸಿದ್ದು ಮೊದಲ ಬಾರಿಗೆ ಎನ್ನುತ್ತಾರೆ ಆನಂದ. ಎರಡುವರೆ ತಿಂಗಳ ಕಾಲ ಈ ಪ್ರತಿಮೆ ರೂಪಿಸುವಲ್ಲಿ ಸಮಯಾವಕಾಶ ಬೇಕಾಯಿತು. ತುಂಬಾ ಕಷ್ಟದಾಯಕವಾಗಿದ್ದರೂ ಒಳ್ಳೆಯ ಗುಣಮಟ್ಟದಲ್ಲಿ ತಯಾರಿಸುವಲ್ಲಿ ಯಶಸ್ವಿಯಾದೇವು ಎನ್ನುತ್ತಾರೆ ಆನಂದ.
ಸಿಲಿಕಾನ್ ರಬ್ಬರ್ ಮೂಲಕ ತಯಾರಿಸುವ ಮೂರ್ತಿಗಳು ಮೇಣದಿಂದ ಮಾಡುವದಕ್ಕಿಂತಲೂ ಉತ್ತಮ ಗುಣಮಟ್ಟ ಹಾಗು ಬಾಳ್ವಿಕೆ ಹೆಚ್ಚುಕಾಲ ಬರುತ್ತದೆ. ಸಿಲಿಕಾನ್ ರಬ್ಬರ್ ಎಷ್ಟೇ ವರ್ಷಗಳು ಕಳೆದರೂ ತನ್ನ ಗುಣಮಟ್ಟದಲ್ಲಿ ಕ್ಷೀಣಿಸುವದಿಲ್ಲ ಅಲ್ಲದೆ ಉನ್ನತ ಗುಣಮಟ್ಟದಿಂದ ಕಂಪನಿಯ ಬಣ್ಣಗಳನ್ನು ಲೇಪಿಸುವದರಿಂದ ಬಾಳ್ವಿಕೆ ಹಾಗು ಬಣ್ಣ ಕಳೆಗುಂದುವದಿಲ್ಲವೆನ್ನುತ್ತಾರೆ.
ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿ ಮೂರ್ತಿ, ಬಾಬಾ ರಾಮದೇವ್, ಮದರ್ ಥೇರೆಸಾ, ದಲೈ ಲಾಮಾ ಸೇರಿದಂತೆ ರಾಷ್ಟ್ರ ಹಾಗು ಅಂತರಾಷ್ಟ್ರೀಯ ವ್ಯಕ್ತಿಗಳ ಮೂರ್ತಿಗಳನ್ನು ಮೇಣದಿಂದ ತಯಾರಿಸಿದ್ದಲ್ಲದೆ ಇತರೆ ರಾಜ್ಯಗಳಲ್ಲಿಯೂ ಸೇರಿದಂತೆ ನೂರಾರು ಮೂರ್ತಿಗಳನ್ನು ತಯಾರಿಸಿದ್ದೇವೆ ಎನ್ನುತ್ತಾರೆ ಆನಂದ ಬೀಳಗಿ. 

ಮೇಣ ಹಾಗು ಸಿಲಿಕಾನ್ ಮೂರ್ತಿ ತಯಾರಿಸುವ `ಆನಂದ’*ಬಣ್ಣದ ನಗರಿಗೆ ಮತ್ತೊಂದು ಮತ್ತೊಂದು ಕಿರೀಟ...ರಬಕವಿ-ಬನಹಟ್ಟಿ ಉತ್ತರ ಕರ್ನಾಟಕದ `ಮ್ಯಾಂಚೇಸ್ಟರ್’ ಎಂಬ ಖ್ಯಾತಿ ಪಡೆದಿರುವ ರಬಕವಿ-ಬನಹಟ್ಟಿ ನಗರ ಬಣ್ಣ ಬಣ್ಣದ ಸೀರೆ ಉತ್ಪಾದನೆಯಷ್ಟೇ ಅಲ್ಲದೆ ಸಾಹಿತಿ, ಕಲಾವಿದರ ತವರೂರೆಂದು ಸಾಬೀತು ಪಡಿಸುವಲ್ಲಿ ಸಾರಿ ಸಾರಿ ಹೇಳುತ್ತಿದೆ.