ರಾಜ್ಯದಲ್ಲಿ ’ಕೊರೋನಾ ಹಗರಣ’ ಮುಖ್ಯಮಂತ್ರಿಗಳಿಗೆ ಮೂರನೇ ಪತ್ರ!
ಲೇಖನ -ವಸಂತ್ ಗಿಳಿಯಾರ್
ಮುಖ್ಯಮಂತ್ರಿಗಳೇ ಡಾಕ್ಟರ್ ಸುಧಾಕರ್ ಕೈಗೊಳ್ಳುವ ಎಲ್ಲಾ ನಿರ್ಧಾರಗಳ ಹಿಂದೆಯೂ ಒಂದು ರೀತಿಯ ಒಳಸಂಚು ಕಾಣಿಸುತ್ತಿದೆ! ಇದು ನಿಮ್ಮ ಸರ್ಕಾರದ ಮೇಲೆ ಬಲವಾದ ಕಪ್ಪುಚುಕ್ಕೆಯನ್ನ ಮೂಡಿಸುವ ಸಾಧ್ಯತೆಗಳಿವೆ! ಎಷ್ಟಾದರೂ ಅಧಿಕಾರದ ಆಸೆಗೆ ಅವರು ಬೆಳೆಸಿದ ಪಕ್ಷವನ್ನೇ ತುಳಿದು, ಮಾತೃಪಕ್ಷಕ್ಕೆ ದ್ರೋಹ ಎಸಗಿ ಬಂದವರು! ಅದು ರಾಜಕೀಯದಾಟ ಎನ್ನಿ! ಆದರೆ ಇಲ್ಲಿ ಕೊರೋನಾದ ಸಮಯದಲ್ಲೇ ದೊಡ್ಡದೊಂದು ’ಹಗರಣದ ಸುಳಿಯೊಳಗೆ ನಿಮ್ಮ ಸರ್ಕಾರವನ್ನ ತಳ್ಳುವ ಸೂಚನೆ ದೊರಕುತ್ತಿದೆ! ಹೌದು, ನನಗೆ ರಾಜ್ಯ ಸರ್ಕಾರದ ಮೇಲೆ ಬಲವಾದ ಅನುಮಾನವಿದೆ! ನೀವು ಒಪ್ಪದೇ ಇರಬಹುದು!ಆದರೆ ಕೊರೋನಾ ಪ್ರಕರಣದಲ್ಲಿ ಮೇಘಾಲೂಟಿ ನಡೆದಿರುವುದು ಸುಳ್ಳಲ್ಲ! ವಿಪಕ್ಷಗಳು ಆರೋಪ ಮಾಡಿದ ತಕ್ಷಣ ಅದನ್ನ ರಾಜಕೀಯದ ಕಾರಣಕ್ಕೆ ಮಾಡುತ್ತಿದ್ದಾರೆ ಎನ್ನುವುದು ವಾಡಿಕೆ! ಆದರೆ ಕೊರೋನಾ ಹೆಸರಲ್ಲಿ ರಾಜ್ಯದ ಮಂತ್ರಿಗಳು ಅಥವಾ ಅವರ ಐ.ಎ.ಎಸ್. ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆ ಹೆಚ್ಚು! ಇವತ್ತು ನಾನು ನಿಮಗೆ ಕೇವಲ ಪಿ.ಪಿ.ಇ. ಕಿಟ್ ಬಗ್ಗೆ ಮಾತ್ರವೇ ಒಂದಷ್ಟು ಮಾಹಿತಿ ಕೊಡುತ್ತೇನೆ! ನನ್ನ ಗೆಳೆಯರೊಬ್ಬರೂ ಸಹ ಸರ್ಜಿಕಲ್ ಕಂಪೇನಿ ಮಾಡಿಕೊಂಡಿದ್ದಾರೆ, ಅವರ ಪ್ರಕಾರ ಒಂದು ಪಿ.ಪಿ.ಇ ಕಿಟ್ ರಿಯಾಯತಿ ದರದಲ್ಲಿ ಐದು ನೂರು ರೂಪಾಯಿಗೂ ಕೊಡಬಹುದು ಎಂದು! ಅದರ ಮಾರುಕಟ್ಟೆ ಬೆಲೆ ಎಂದರೆ ಎರಡೂವರೆ ಸಾವಿರ ರೂಪಾಯಿ. ಸರ್ಕಾರ ಇದುವರೆಗೂ ಕೋಟ್ಯಾಂತರ ಪಿ.ಪಿ.ಇ. ಕಿಟ್ ಅಂದಾಜು ಒಂದೂವರೆ ಸಾವಿರ ರೂಪಾಯಿಯಲ್ಲಿ ಖರೀಧಿಸಿದೆ! ಹಾಗಿದ್ದರೆ ಪಿ.ಪಿ.ಇ ಕಿಟ್ ಹೆಸರಲ್ಲಿ ನಡೆದ ಲೂಟಿ ಎಷ್ಟು ಕೋಟಿ? ಖಂಡಿತವಾಗಿಯೂ ಇದರಲ್ಲಿ ಹಗರಣ ನಡೆದಿದೆ! ಅದಕ್ಕೆ ದಾಖಲೆ ಕೇಳಿದರೆ ನನ್ನಲ್ಲಿ ಇಲ್ಲ. ಆದರೆ ಪ್ರಶ್ನೆಯನ್ನ ಹತ್ತಿಕ್ಕುವುದು ಯಾರಿಂದಲೂ ಸಾಧ್ಯವಿಲ್ಲ. ಕೋಟ್ಯಾಂತರ ಪಿ.ಪಿ.ಇ. ಕಿಟ್ ಖರೀಧಿಸುವ ಬದಲಿಗೆ ಸರ್ಕಾರವೇ ತಯಾರಿಕಾ ಘಟಕವನ್ನ ಮಾಡಿ ಪೂರೈಕೆ ಮಾಡಬಹುದಿತ್ತಲ್ಲವೆ? ಕೊರೋನಾದ ಆರಂಭಿಕ ಹಂತದಲ್ಲಿ ಖರೀಧಿ ಸರಿ! ಆದರೆ ನಿರಂತರವಾಗಿ ಖರೀಧಿ ನಡೆಸಿದ್ದರಿಂದ ಸರ್ಕಾರಕ್ಕೆ ಅಂದರೆ ಸಾರ್ವಜನಿಕರ ತೆರಿಗೆಯ ಹಣ ಕೋಟ್ಯಾಂತರ ರೂಪಾಯಿ ನಷ್ಟವಾಗಲಿಲ್ಲವೆ? ಅದರಲ್ಲಿಯೂ ಚೈನಾ ಪಿ.ಪಿ.ಇ. ಕಿಟ್ ಖರೀಧಿಯನ್ನ ಸರ್ಕಾರವೇ ನಡೆಸಿದೆ. ಇದಕ್ಕೆ ಬೇಕಿದ್ದರೆ ದಾಖಲೆಯನ್ನೂ ನಾನು ಕೊಡಬಲ್ಲೆ. ಡಾಕ್ಟರ್ ಸುಧಾಕರ್ ಅತ್ಯಂತ ಚಾಣಾಕ್ಷ ರಾಜಕಾರಣಿ. ಇದರ ಎಲ್ಲಾ ಅಸಲೀಯತ್ತುಗಳನ್ನೂ ಬಲ್ಲ ಸುಧಾಕರ್ ಇನ್ನೂ ಕೆಲವು ಅಕ್ರಮಗಳಲ್ಲಿ ಪಾಲ್ಗೊಂಡಿರುವ ಸಾಧ್ಯತೆಗಳಿವೆ. ಇನ್ನು ಸಾರ್ವತ್ರಿಕವಾಗಿ ಕೊರೋನಾ ಪರೀಕ್ಷೆ ನಡೆಸುವುದರ ಹಿಂದೆ ಕೂಡ ಹಗರಣದ ಧಟ್ಟವಾದ ಸ್ಮೆಲ್ ಇದೆ! ಸಣ್ಣ ಉದಾಹರಣೆ ಕೊಡ್ತೀನಿ. ಮೊದಲು ರ್ಯಾಟ್ ಟೆಸ್ಟ್ ಮಾಡ್ತಾರೆ (rapid antigen test) ಈ ಟೆಸ್ಟ್ ಅಲ್ಲಿ ನೆಗಿಟೀವ್ ಬಂದ್ರೆ ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಮಾಡಿಸುವುದು ಕಡ್ಡಾಯ! R.T.P.C.R. ಟೆಸ್ಟ್ ಅಂದ್ರೆ (real time polymerase chain reaction) ಯಾಕೆ ಕೇಳಿದ್ರೆ RAT ಅಲ್ಲಿ ಕೊರೋನಾ ಧಟ್ಟ ಲಕ್ಷಣವಿದ್ದರೆ ಮಾತ್ರವೇ ಪಾಸಿಟೀವ್ ಬರುತ್ತದೆ, ಆದರೆ r.t.p.c.r. ಅಲ್ಲಿ ಸಣ್ಣ ಕೊರೋನಾ ಕಣವಿದ್ದರೂ ಅದನ್ನ ಪತ್ತೆ ಹಚ್ಚಬಹುದು. ಹಾಗಾಗಿ RAT ಅಲ್ಲಿ ನೆಗಿಟೀವ್ ಬಂದವರೆಲ್ಲರನ್ನೂ ಮತ್ತೆ ಓರ್ವ ವ್ಯಕ್ತಿಗೆ ಅಂದಾಜು ಎರಡೂವರೆ ಸಾವಿರ ವೆಚ್ಚದಲ್ಲಿ ಆರ್.ಟಿ.ಪಿ.ಸಿ.ಆರ್.ಪರೀಕ್ಷೆ ನಡೆಸುವುದು ಕಡ್ಡಾಯ ಎಂದಿದೆರ್ ಸರ್ಕಾರ! ಬಹುಕೋಟಿ ಹಗರಣ ನಡೆದಿರಬಹುದು ಎನ್ನುವುದಕ್ಕೆ ನನಗೆ ಬಲವಾಗಿ ಅನಿಸುತ್ತಿರುವುದು ಇದೇ ಕಾರಣಕ್ಕೆ. ಈ ಕಿಟ್ ಗಳ ಖರೀಧಿಗೆ ಸಾವಿರಾರು ಕೋಟಿ ವಿನಿಯೋಗ ಖಂಡಿತ ಆಗಿರುತ್ತದೆ! ಮೇಲ್ದರ್ಜೆಯ ಐ.ಎ.ಎಸ್. ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರುತ್ತಾರೆ. ಒಂದು ರ್ಯಾಟ್ ಕಿಟ್ ಬೆಲೆ ಅಂದಾಜು ಎರಡರಿಂದ ಮೂರು ಸಾವಿರ ರೂಪಾಯಿ! ಪ್ರತೀ ಜಿಲ್ಲೆಗೂ ದಿನಕ್ಕೆ ಇಂತಿಷ್ಟು ಟೆಸ್ಟ್ ಆಗಲೇ ಬೇಕು ಎಂಬ ಅಧಿಸೂಚನೆ ಸರ್ಕಾರವೇ ಹೊರಡಿಸಿದೆ! ದೇವರಾಣೆಗೂ ಇದರಲ್ಲಿ ದಟ್ಟವಾದ ಹಗರಣ ನಡೆದೇ ನಡೆದಿದೆ. ಹುಚ್ಮುಂಡೆ ಮದುವೇಲಿ ಉಂಡವನೇ ಜಾಣ ಎಂಬ ಮಾತಿದೆಯಲ್ಲಾ? ಅದಂತೂ ಪಕ್ಕಾ ಸತ್ಯ! ನಮ್ಮ ಕುಂದಾಪ್ರಕನ್ನಡದಲ್ಲಿ ಗಾದೆ ಮಾತಿದೆ ’ನೆರಮನೆ ಹಾಳಾರೆ ಕರೀನ್ ಕಟ್ಟುಕ್ ಜಾಗ ಆಯ್ತ್’ ಅಂತ! ಅಂದ್ರೆ ಪಕ್ಕದ ಮನೆ ಹಾಳಾಗಿ ಹೋದ್ರೆ ದನ, ಕರುಗಳನ್ನ ಕಟ್ಟೋಕೆ ಜಾಗ ಆಯ್ತು ಅಂತ ಅರ್ಥ! ಈ ಲೂಟಿಕೋರರಿಗೆ ಕೊರೋನಾ ಕೂಡ ಹಬ್ಬವಾಗಿ ಹೋಗಿದೆ. ಇದನ್ನೆಲ್ಲಾ ಪ್ರಶ್ನಿಸಿದರೆ ನಾವು ಕಾನೂನು ಸಮರವನ್ನ ಎದುರಿಸಿಬೇಕಾಗುತ್ತದೆ. ರಾಜ್ಯದಲ್ಲಿ ಸೀಲ್ ಡೌನ್ ನಡೆಸಲು ಪ್ರತೀ ಮನೆಗೂ ಎಷ್ಟು ಅಂದಾಜು ವೆಚ್ಚವನ್ನ ಸರ್ಕಾರ ಕಂದಾಯ ಇಲಾಖೆಗೆ ಪಾವತಿಸುತ್ತದೆ ಎಂಬ ನಿಖರವಾದ ಲೆಕ್ಕಾಚಾರ ಇನ್ನೂ ದೊರಕಿಲ್ಲ. ಜನ ಕೊರೋರಾ ಪರಿಶೀಲನೆಗೆ ಹಿಂದೇಟು ಹಾಕುತ್ತಿರುವುದೇ ಈ ಸೀಲ್ ಡೌನ್ ಕಾರಣಕ್ಕೆ! ಸೀಲ್ ಡೌನ್ ಅಗತ್ಯವೇ ಇಲ್ಲ. ಕೊರೋನಾ ಪಾಸಿಟೀವ್ ಬಂದರೆ ಎಚ್ಚರಿಕೆ ನೀಡಿದರೆ ಸಾಕು. ಬೇರೆಲ್ಲಾ ರಾಜ್ಯಕ್ಕಿಂತಲೂ ಕೊರೋನಾವನ್ನ ಸಮರ್ಥವಾಗಿ ನಿಭಾಯಿಸುವಲ್ಲಿ ನಾವು ಎಲ್ಲೋ ಎಡವುತ್ತಿದ್ದೇವೆ ಅಂತನ್ನಿಸುತ್ತಿದೆ. ಕೊರೋನಾಕ್ಕೆ ಪರಿಣಾಮಕಾರಿ ಮದ್ದು ಆಯುರ್ವೇದ! ಆದರೆ ಮೆಡಿಸಿನ್ ಮಾಫಿಯಾ ಎಲ್ಲೋ ತನ್ನ ಕಬಂಧ ಬಾಹು ಚಾಚಿಕೊಂಡು ಅದಕ್ಕೂ ಅಡ್ಡಗಾಲು ಹಾಕುತ್ತಿದೆ. ತೀರ ದೂರ ಹೋಗಬೇಕಿಲ್ಲ! ಕುಷ್ಟು ಪೂಜಾರಿ ಎಂಬ ನಮ್ಮ ಊರಿನ ಹಿರಿಯರೊಬ್ಬರ ಮಾತು ನನಗೆ ನೆನಪಾಗುತ್ತಿದೆ! ’ಇದನ್ನೆಲ್ಲಾ ಹೇಳ್ರೆ, ದೊಡ್ ಬಸವನ್ ಕಲ್ ಕುಷ್ಟು ಪೂಜಾರಿ ಕೆಟ್ಟನ್’ ಅಂದ್ರೆ ’ಇದನ್ನೆಲ್ಲಾ ಹೇಳಿದ್ರೆ ದೊಡ್ಡಬಸವನ ಕಲ್ಲು ಕುಷ್ಟು ಪುಜಾರಿ ಕೆಟ್ಟವನು’ ಅಂತ! ಮುಖ್ಯಮಂತ್ರಿಗಳೇ ಹಾಗಾಗಿದೆ ನಮ್ಮ ಪರಿಸ್ಥಿತಿ!
ಲೇಖನ : ವಸಂತ ಗಿಳಿಯಾರ್ (ಪಿಪಿಇ ಕಿಟ್ ಹಗರಣವನ್ನ ಸೂಚಿಸುವ ಚಿತ್ರವನ್ನ ರಚಿಸಿದ್ದು ಟ್ರೆಂಡ್ ಸೆಟ್ಟರ್ ಗೆಳೆಯ Shashwat Hegde Tyagli 😍)
Social Plugin