ಬನಹಟ್ಟಿಯಲ್ಲಿ ತೇರದಾಳ ವಿಧಾನ ಸಭಾ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಪ್ರಶಾಂತ ಚನಗೊಂಡರಿಗೆ ಮನವಿ ಸಲ್ಲಿಸಿದರು.
ಕೊರೊನಾ ಉಪಕರಣಗಳ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ...
ರಬಕವಿ-ಬನಹಟ್ಟಿ,ಅ20: ಕೋವಿಡ್-19 ಇಡೀ ಮನುಕುಲವನ್ನೇ ಅತಂಕಕ್ಕೀಡು ಮಾಡಿದೆ. ರಾಜ್ಯದ ಜನರು ಕೂಡಾ ವೈರಾಣು ವಿರುದ್ಧ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಸರ್ಕಾರವು ಈ ವಿಷಯದಲ್ಲಿ ಕೂಡಾ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿದೆ. ರಾಜ್ಯದ ಆರೋಗ್ಯ ಸೇವೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಆರೋಪಿಸಿದರು.
ಅವರು ಗುರುವಾರ ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ರಾಜ್ಯ ಸರ್ಕಾರ ವಿರುದ್ಧ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಮಾತನಾಡಿದರು.
ರೈತ ವಿರೋಧಿ ಭೂಸುಧಾರಣಾ ತಿದ್ದುಪಡೆ, ಎಂಪಿಎಂಸಿ ಕಾಯ್ದೆ ತಿದ್ದು ಪಡೆ, ಕಾರ್ಮಿಕ ವಿರೋಧಿ ಕಾರ್ಮಿಕ ಕಾಯ್ದೆ ತಿದ್ದುಪಡೆಗಳನ್ನು ತಕ್ಷಣ ವಾಪಸ್ ಪಡೆಯಬೇಕು, ರಾಜ್ಯದಲ್ಲಿ ಆಗಿರುವ ಅತಿವೃಷ್ಠಿಯಿಂದ ಹಾನಿಯಾಗಿದ್ದು ಅವರಿಗೆ ಸಮರ್ಪಕವಾಗಿ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲಗೊಂಡಿದೆ. ಕೊರೊನಾ ಸಂದರ್ಭದಲ್ಲಿ ಉಪಕರಣಗಳ ಖರೀದಿಸುವ ಸಂದರ್ಭದಲ್ಲಿ ಭಾರಿ ಭμÁ್ಟಚಾರ ನಡೆದಿದೆ. ಇದು ಹಾಲಿ ಸುಪ್ರಿಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಂಗನಗೌಡ ಪಾಟೀಲ, ಬಸವರಾಜ ಕೊಕಟನೂರ, ರಾಜು ಬಾರಕೋಲ ಮಾತನಾಡಿದರು.
ಇದಕ್ಕಿಂತ ಮೊದಲು ಕಾಂಗ್ರೆಸ್ ಕಾರ್ಯಾಲಯದಿಂದ ತಹಶೀಲ್ದಾರ್ ಕಚೇರಿಯವರೆಗೆ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಮಲ್ಲಪ್ಪ ಸಿಂಗಾಡಿ, ಲಕ್ಷಣ ದೇಸಾರಟ್ಟಿ, ಡಾ.ಎ.ಆರ್.ಬೆಳಗಲಿ, ಅಶೋಕ ಆಳಗೊಂಡ, ರಾಜು ಭದ್ರನವರ, ದಾನಪ್ಪ ಜತ್ತಿ, ಅರವಿಂದ ಮನ್ನಿಕೇರಿ, ಸದಾಶಿವ ಗೊಂದಕರ್, ಬಸವರಾಜ ಬೀಳಗಿ, ಸತ್ಯಪ್ಪ ಮಗದುಮ್, ಚಿದಾನಂದ ಗಾಳಿ, ರಾಹುಲ ಕಲಾಲ, ಶ್ರೀಶೈಲ ಮೇಣಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.
Social Plugin