ಆಸಂಗಿ ಗ್ರಾಮದಲ್ಲಿ `ವಿದ್ಯಾಗಮ’ ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು.
ವಿದ್ಯಾಗಮ-ನಿರಂತರ ಕಲಿಕೆಯ ಸಂಗಮ
*ವಠಾರ ಶಾಲೆಗೆ ಉತ್ತಮ ಸ್ಪಂದನೆ
ರಬಕವಿ-ಬನಹಟ್ಟಿ,ಅ20: ಕೋವಿಡ್-19 ಕಾರಣದಿಂದಾಗಿ ಶಾಲೆ ಆವರಂಭವಾದಿದ್ದರೂ ಮಕ್ಕಳ ಕಲಿಕೆ, ಬೊಧನೆಗೆ ತೊಂದರೆಯಾಗಬಾರದು, ಶೈಕ್ಷಣಿಕ ವಿಚಾರಗಳಿಂದ ಅವರು ದೂರ ಉಳಿಯಬಾರದು ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ರೂಪಿಸಿರುವ `ವಿದ್ಯಾಗಮ’ ಎಂಬ ವಿಶಿಷ್ಠ ಯೋಜನೆ ರಬಕವಿ-ಬನಹಟ್ಟಿ ತಾಲೂಕಿನಲ್ಲಿಯೂ ಅನುಷಾನಗೊಂಡಿದೆ.
ಶಿಕ್ಷಕರ ಶಾಲಾ ವ್ಯಾಪ್ತಿಯ ಗ್ರಾಮಗಳಿಗೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ತೆರಳಿ, ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸುತ್ತಮುತ್ತಲಿನ ಮಕ್ಕಳನ್ನು ಸೇರಿಸಿಕೊಂಡು ಔಪಚಾರಿಕ ಶಿಕ್ಷಣ ನೀಡುತ್ತಿದ್ದಾರೆ. ಆನ್‍ಲೈನ್ ಮೂಲಕ ಪಾಠ ಕೇಳಲು ಸಾಧ್ಯವಾಗಿದಿರುವ ಮಕ್ಕಳಿಗೆ ಈ ಕಾರ್ಯಕ್ರಮದಿಂದ ಅನುಕೂಲವಾಗಿದೆ.
ಅರಳಿಕಟ್ಟೆ, ಊರಿನ ಕಟ್ಟೆ, ಸಮುದಾಯ ಭವನ ಹೀಗೆ ಎಲ್ಲಿ ಸ್ಥಳಾವಕಾಶ ಇದೆಯೋ ಅಲ್ಲಿ ಮಕ್ಕಳನ್ನು ಸೇರಿಸಿ, ಕೋವಿಡ್ ಮುಂಜಾಗ್ರತಾ ನಿಯಮಗಳನ್ನು ಪಾಲಿಸಿಕೊಂಡು ಪಾಠಕ್ಕೆ ಸಂಬಂಧಿಸಿದ ವಿಚಾರಗಳನ್ನು ತಿಳಿಸಲಾಗುತ್ತಿದೆ.
ತಾಲೂಕಿನಲ್ಲಿ ಈಗಾಗಲೇ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತಿದೆ. ಶಾಲೆಗೆ ತೆರಳುವ ಶಿಕ್ಷಕರು ಆಯಾ ಗ್ರಾಮಕ್ಕೆ ತೆರಳಿ ಮಕ್ಕಳನ್ನು ಭೆಟ್ಟಿ ಮಾಡಿ, ಕಲಿಕೆಯ ಪ್ರಗತಿ ಪರಿಶೀಸಿಲಿಸುತ್ತಾರೆ. ಶಾಲೆಗಳು ಆರಂಭವಾಗುವ ತನಕ ಈ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಬಹುತೇಕ ಗ್ರಾಮದಲ್ಲಿ `ವಿದ್ಯಾಗಮ’ ಕಾರ್ಯಕ್ರಮ ಆರಂಭವಾಗಿದ್ದು, ಶಿಕ್ಷಕರು ಗ್ರಾಮಗಳಿಗೆ ಭೇಟಿ ನೀಡಿಮಕ್ಕಳ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸುತ್ತಿದ್ದಾರೆ. ಶಾಲೆಗಳಲ್ಲಿ ತರಗತಿ ನಡೆಯಲಿದ್ದರೂ, ಮಕ್ಕಳು ಪಠ್ಯ ಹಾಗು ಶಿಕ್ಷಣಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದ ವಿಮುಖವಾಬಾರದು ಎಂಬುದು ಯೋಜನೆಯ ಉದ್ದೇಶ ಶಿಕ್ಷಣ ಇಲಾಖೆಯದ್ದಾಗಿದೆ.
ಆಸಂಗಿ ಗ್ರಾಮದಲ್ಲಿ `ವಿದ್ಯಾಗಮ’ ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು.
ವಠಾರ ಶಾಲೆ: ಇದಕ್ಕೆ ಮತ್ತೊಂದು ಹೆಸರು ವಠಾರ ಶಾಲೆಗಳೆಂದು ಕರೆಯಲಾಗುತ್ತಿದೆ. ಸರದಿ ಮೇಲೆ ವಿದ್ಯಾರ್ಥಿಗಳು ಈ ವಠಾರ ಶಾಲೆಗೆ ಬರುವಂತೆ ಮಾಡುವಲ್ಲಿ ಶಿಕ್ಷಕರು ಯಶಸ್ವಿಯಾಗುತ್ತಿದ್ದಾರೆ. ವಠಾರಗಳಲ್ಲಿ ತರಗತಿ ತೆರೆಯಲು ಮೊದಲು ಭಯಪಡುತ್ತಿದ್ದರು. ಆದರೆ ಈಗ ಮಾಸ್ಕ್ ಹಾಗು ಸಾಮಾಜಿಕ ಅಂತರದೊಂದಿಗೆ ಮಕ್ಕಳನ್ನು ಆಕರ್ಷಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ನೋಟ್ಸ್‍ನ್ನು ಶಿಕ್ಷಕರೇ ಸಿದ್ಧಪಡಿಸಿ ನೀಡುತ್ತಿದ್ದು ಇದರಿಂದ ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಿದ್ದಾರೆ.
ಜಾಹಿರಾತುದಾರರು...
Social Plugin