ಕೆಎಚ್‍ಡಿಸಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತೇರದಾಳ ಶಾಸಕ ಸಿದ್ದು ಸವದಿಯವರನ್ನು ಅಭಿನಂದಿಸಲಾಯಿತು.
ಕೆಎಚ್‍ಡಿಸಿ ಅಧ್ಯಕ್ಷರಾಗಿ ಸಿದ್ದು ಸವದಿ ಅಧಿಕಾರ ಸ್ವೀಕಾರ
ರಬಕವಿ-ಬನಹಟ್ಟಿ,ಅ18: ತೇರದಾಳ ಶಾಸಕ ಸಿದ್ದು ಸವದಿಯವರು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಂಗಳವಾರ ಹುಬ್ಬಳ್ಳಿಯ ಪ್ರಧಾನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಇದೇ ಸಂದರ್ಭ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನನ್ನ ಮೇಲೆ ವಿಶ್ವಾಸವಿಟ್ಟು ನಿಗಮದ ಅಧ್ಯಕ್ಷರನ್ನಾಗಿ ಕಾರ್ಯನಿರ್ವಹಿಸುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಕೆಎಚ್‍ಡಿಸಿ ನಿಗಮದ ತುಂಬಾ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಗುರುತರವಾದ ಜವಾಬ್ದಾರಿಯೊಂದಿಗೆ ಇದರ ಎಳ್ಗೆಯೊಂದಿಗೆ ರಾಜ್ಯದ ನೇಕಾರರ ಬಹುಬೇಡಿಕೆಗಳಿಗೆ ಸ್ಪಂದಿಸುವದರ ಜೋತೆಗೆ ಯೋಜನೆಗಳನ್ನು ಪ್ರಾಮಾಣಿಕವಾಗಿ ಒದಗಿಸುವ ವಿಶ್ವಾಸ ನೀಡಿದರು.
ಇದೇ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ, ಮೋಹನ ಜಾಧವ, ರ-ಬ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಈಶ್ವರ ನಾಗರಾಳ, ಕುಮಾರ ಕದಮ, ಪರಶುರಾಮ ಬಸವ್ವಗೋಳ, ರಮೇಶ ಮಂಡಿ, ಪ್ರವೀಣ ಕೋಲಾರ, ಜಿ.ಎಸ್. ಗೊಂಬಿ, ಆನಂದ ಕಂಪು, ಗುರುಪಾದ ಅಂಬಿ, ವಿಶ್ವನಾಥ ಸವದಿ, ಪರಪ್ಪ ಉರಭಿನವರ, ಪ್ರಭು ಪೂಜಾರಿ, ಪಿ.ಜಿ. ಕಾಖಂಡಕಿ ಉಪಸ್ಥಿತರಿದ್ದರು.

Social Plugin