ರಬಕವಿ-ಬನಹಟ್ಟಿಯ ಡೆಂಪೋ ಡೈರಿಯಲ್ಲಿ `ನಂದಿನಿ ಸಿಹಿ ಉತ್ಸವ’ ಕಾರ್ಯಕ್ರಮಕ್ಕೆ ವ್ಯವಸ್ಥಾಪಕ ನಿರ್ದೇಶಕ ಡಾ. ಚಂದ್ರಶೇಖರ ಕಮಕೇರಿ ಚಾಲನೆ ನೀಡಿದರು.
ರಬಕವಿ-ಬನಹಟ್ಟಿ,ಅ15: ನಗರದ ಡೆಂಪೋ ಡೇರಿಯ ಹೊರಾಂಗಣದಲ್ಲಿ ನಂದಿನಿ ಪಾರ್ಲರ್‍ನಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ಹಾಗು ಡೆಂಪೊ ಡೇರಿ ಸಹಯೋಗದಲ್ಲಿ ಶನಿವಾರ ನಡೆದ `ನಂದಿನಿ ಸಹಿ ಉತ್ಸವಕ್ಕೆ ಡೆಂಪೋ ಡೇರಿ ವ್ಯವಸ್ಥಾಪಕ ನಿರ್ದೇಶಕ ಡಾ. ಚಂದ್ರಶೇಖರ ಕಮಕೇರಿ ಚಾಲನೆ ನೀಡಿದರು.
ಇದೇ ಸಂದರ್ಭ ಮಾತನಾಡಿ, ರೈತರು ಗುಣಮಟ್ಟದಿಂದ ನೀಡುತ್ತಿರುವ ಹಾಲಿನ ಉತ್ಪನ್ನಗಳಿಂದ ತಯಾರಿಸಿದ ಸಿಹಿ ಉತ್ಪನ್ನಗಳನ್ನು ಶೇ.10 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ನಂದಿನಿ ಹಾಲಿನ ಸಿಹಿ ಉತ್ಪನ್ನಗಳ ಉತ್ಸವಕ್ಕೆ ಇಂದು ಚಾಲನೆ ನೀಡಲಾಗಿದೆ. ಅಗಸ್ಟ್ 31ವರೆಗೆ ಯೋಜನೆಯಿರುವದರಿಂದ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದರು. ರೈತರು ನೀಡುತ್ತಿರುವ ನಂದಿನಿ ಹಾಲಿನಿಂದ ಉತ್ತಮ ಗುಣಮಟ್ಟದ ಸಿಹಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂದರು. ಈ ಸಿಹಿ ಉತ್ಸವದಿಂದ ನಂದಿನಿ ಹಾಲಿನ ಗುಣಮಟ್ಟವನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ರೈತರಿಗೆ ಉತ್ತೇಜನ ನೀಡಲಾಗುತ್ತದೆ ಎಂದರು.
ಪ್ರತಿ ವರ್ಷ ಎರಡು ಬಾರಿ ಕೆಎಂಎಫ್ ಹಾಗು ಡೆಂಪೋ ಡೈರಿಯಿಂದ ನಂದಿನಿ ಸಿಹಿ ಉತ್ಸವ ಮಾಡಲಾಗುತ್ತಿದೆ. ಗ್ರಾಹಕರು ಸಿಹಿ ಉತ್ಪನ್ನ ಸೇವನೆ ಮಾಡುವ ಮೂಲಕ ಹಬ್ಬಗಳನ್ನು ಆಚರಣೆ ಮಾಡಬೇಕೆಂದು ಮನವಿ ಮಾಡಿದರು.
ಉಪವ್ಯವಸ್ಥಾಪಕರಾದ ವಿಜಯಕುಮಾರ ಕಾಗಿ, ಪಿ. ನಟರಾಜ್, ಎನ್. ಲಿಂಗಂ, ಸಹಾಯಕ ವ್ಯವಸ್ಥಾಪಕ ರಾಘವೇಂದ್ರ ಜೋಷಿ, ಎಚ್.ಎಸ್. ಸಿಂಗ್, ಮಾರುಕಟ್ಟೆ ವಿಭಾಗದ ಸಿದ್ಧಾರೂಢ ತಳವಾರ, ಸುನಿತಾ, ಸಂತೋಷ ರಾಠೋಡ, ಶ್ರೀಶೈಲ ಮೋಪಗಾರ, ಸತೀಷ ಖವಟಗೊಪ್ಪ, ಸತೀಷ ಹಂಚನಾಳ, ಅಜಯಕುಮಾರ, ಕಲ್ಯಾಣಯ್ಯ ಕಳಸದ, ದಯಾನಂದ, ಲಕ್ಷ್ಮೀ ನರಗುಂದ, ರಾಜು ಕೊಳಕಿ,ಇದ್ದರು.
ಜಾಹೀರಾತು...
Social Plugin