ತೇರದಾಳ ಪಟ್ಟಣದ ಸರಕಾರಿ ಆಸ್ಪತ್ರೆಯ ಮುಂದೆ ಧರಣಿ ನಡೆಸಿದ ಆಶಾಕಾರ್ಯಕರ್ತೆಯರು.
ವರದಿ : ಕೆ.ಎಸ್.ರಂಗಸ್ವಾಮಿ
ಆಶಾಕಾರ್ಯಕರ್ತೆಯರ ಪ್ರಾಣಕ್ಕೆ ಬೆಲೆ ಇಲ್ಲವೆ ?
ತೇರದಾಳ: ರಾಜ್ಯದಲ್ಲಿ ಆಶಾಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸುಮಾರು ದಿನಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈ ಕೆಲವು ದಿನಗಳ ಹಿಂದೆ ಈ ಕುರಿತು ಈಡಿ ರಾಜ್ಯಾದಂತ ಸಂಬಂದಪಟ್ಟ ಇಲಾಖೆಯವರಿಗೆ ಹಾಗೂ ತಮ್ಮ ಕ್ಷೇತ್ರದ ಶಾಸಕರುಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಅವರು ಕೊಟ್ಟ ಮನವಿಗೆ ಸರಕಾರದಿಂದ ಯಾವುದೇ ರೀತಿಯ ಸ್ಪಂದನೆ ಸಿಗದ ಕಾರಣ ಅನಿವಾರ್ಯವಾಗಿ ಹೋರಾಟವನ್ನು ಮುಂದುವರೆಸಿದ್ದೇವೆ ಎಂದು ಆಶಾ ಸುಗಮಗಾರರಾದ ಮಂಜುಳಾ ಸರಿಕರ ತಿಳಿಸಿದರು.
ಪಟ್ಟಣದ ಸರಕಾರಿ ಆಸ್ಪತ್ರೆಯ ಮುಂದೆ ಧರಣಿ ನಡೆಸಿದ ಆಶಾಕಾರ್ಯಕರ್ತೆಯರು ದೇಶದಲ್ಲಿ ಕೊರೋನಾ ವೈರಸ ತನ್ನ ನಾಲಿಗೆಯನ್ನು ಎಲ್ಲೆಡೆ ಚಾಚುತ್ತಿದ್ದು ಜನತೆ ತತ್ತರಿಸಿಹೋಗುತ್ತಿದ್ದಾರೆ.ಸರಕಾರ ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಕೊಂಡರು ಸಹ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದ ಪ್ರಸ್ತುತ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲ ಯಾವುದೇ ರೀತಿಯ ಸುರಕ್ಷತೆ
ಇಲ್ಲದೆ ಕೊರೋನಾ ವೈರಸ್‍ನ ನಿಯಂತ್ರಣದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ನಮಗೆ ಸರಕಾರವು ಯಾವುದೇ ರೀತಿಯ ಆರೋಗ್ಯ ಕಿಟ್‍ಗಳನ್ನು, ಪಿ.ಪಿ.ಕಿಟ್, ಮಾಸ್ಕ್, ಸೆನಿಟೈಜರ ಇದಾವುಗಳನ್ನು ನೀಡಿರುವುದಿಲ್ಲ. ಆದರೂ ಸಹ ನಾವು ನಮ್ಮ ಸಮೂದಾಯ ಆರೋಗ್ಯದಿಂದ ಇರಲಿ ಎಂಬ ಸದುದ್ದೇಶದಿಂದ ನದಿಂಪ್ರತಿ ಕೊರೋನಾ ವೈರಸ್ ಕುರಿತು ಸರ್ವೆ ಮಾಡಲು ಪ್ರತಿ ಮನೆಗೂ ಹೋಗಿ ಬಿ.ಪಿ,ಶುಗರ.ಕೆಮ್ಮು,ನೆಗಡಿ,ಜ್ವರದ ಕುರಿತು ಮಾಹಿತಿ ಕಲೆಹಾಕುತ್ತಿದ್ದೇವೆ. ಅಲ್ಲದೆ ಹಾಗೂ 60 ವರ್ಷ ವಯೊವೃದ್ಧರನ್ನು ಗುರುತಿಸಿ ಕೊರೋನಾ ಸುರಕ್ಷತೆ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಯಾರಾದರೂ ಸೋಂಕಿತರಿದ್ದರೆ ನಮ್ಮ ಗತಿ ಹೇಗೆ?. ನಮ್ಮ ಜೀವಕ್ಕೇ ಬೆಲೆಇಲ್ಲವೆ? ನಮಗೂ ಸಹ ಕುಟುಂಬವಿದೆ. ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ, ವಯೋವೃದ್ಧರಿದ್ದಾರೆ. ಹೀಗಾಗಿ ನಾವು ಎಷ್ಟು ಸುರಕ್ಷಿತವಾಗಿ ನಮ್ಮ ಮನೆ ತಲುಪುತ್ತೇವೆ ಎಂಬ ವಿಶ್ವಾಸ ನಮಗಿಲ್ಲದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಕರ್ತವ್ಯ ನಿರ್ವಹಿಸುವುದು ತುಂಬಾ ಅಪಾಯಕಾರಿಯಾಗಿದೆ ಕಾರಣ ಸರಕಾರ ನಮ್ಮ ಸಂರಕ್ಷಣೆಗೋಸ್ಕರ ಕೊರೋನಾಗೆ ಸಂಭಂದಪಟ್ಟ ಆರೋಗ್ಯ ಕಿಟ್ ಹಾಗೂ ಉತ್ತಮ ಗುಣಮಟ್ಟದ ಮಾಸ್ಕ್ ಮತ್ತು ಸ್ಯಾನಿಟೈಜರಗಳನ್ನು ಕೂಡಲೇ ಪೂರೈಕೆ ಮಾಡಬೇಕು. ಅದು ಅಲ್ಲದೇ ಸರಕಾರವು ನಮ್ಮ ಶ್ರಮಕ್ಕೆ ತಕ್ಕಂತೆ ವೇತನವನ್ನು ನೀಡುತ್ತಿಲ. ಸರಕಾರ ಈಗ ಕೇವಲ 4000 ವೇತನವನ್ನು ನೀಡುತ್ತಲಿದೆ ಹೊರತು ಯಾವುದೇ ಗೌರವಧನ ಬರುತ್ತಿಲ್ಲ ಇದರಿಂದ ಇಷ್ಟೇ ಹಣದಲ್ಲಿ ನಮ್ಮ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರಕಾರ ನಮಗೆ ಕನಿಷ್ಟ 12ಸಾವಿರ ರೂ.ಗಳನ್ನು ಗೌರವ ಧನವಾಗಿ ನೀಡಬೇಕು. ಅಲ್ಲದೆ ನಮ್ಮನ್ನು ಖಾಯಂಗೊಳಿಸಬೇಕು. ಒಂದುವೇಳೆ ನಮ್ಮ ಬೇಡಿಕೆ ಇಡೇರದಿದ್ದರೆ ಇದೇ ಜು.10ರಂದು ನಮ್ಮ ಕರ್ತವ್ಯವನ್ನು ಸ್ಥಗಿತಗೊಳಿಸಿ ರಾಜ್ಯಾದ್ಯಂತ ಬೇಡಿಕೆಗಳು ಇಡೇರುವತನಕ ಹೋರಾಟ ಮಾಡಲಾಗುವುದು ಎಂದು ಆಶಾ ಸುಗಮಗಾರರಾದ ಮಂಜುಳಾ ಸರಿಕರ ತಿಳಿಸಿದರು.
ಈ ಸಂದರ್ಭದಲ್ಲಿ ಜಯಶ್ರೀ ಐಹೊಳೆ, ಭಾರತಿ ಮೋಪಗಾರ, ಭಾರತಿ ಬಡಿಗೇರ, ಈರವ್ವ ಹಿರೇಮಠ, ಮಹಾನಂದ ಧರೆನ್ನವರ, ಜಯಶ್ರೀ ಘಂಟಿ, ಸುಜಾತಾ ಹೊಸೊರ, ಜಯಶ್ರೀ ಹಿರೇಮಠ ಸೇರಿದಂತೆ ಸುಮಾರು 47ಜನರು ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.
- ನಿಮ್ಮ ಜಾಹೀರಾತುಗಳಿಗಾಗಿ
ಸಂಪರ್ಕಿಸಿ +91 9902523698


Social Plugin